SBI Offer: SBIತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 2 ಲಕ್ಷ ರೂ., ಲಾಭ ಪಡೆಯುವುದು ಹೇಗೆ?

SBI Insurance cover: ಎಸ್‌ಬಿಐ ಡೆಬಿಟ್ ಕಾರ್ಡ್ (SBI Debit Card) ಹೊಂದಿರುವವರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆ ಬ್ಯಾಂಕ್ ಒದಗಿಸುತ್ತಿದೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.  

Written by - Nitin Tabib | Last Updated : Feb 15, 2022, 04:18 PM IST
  • SBI ಜನ್-ಧನ್ ಖಾತೆದಾರರಿಗೆ ಉಚಿತ ವಿಮಾ ರಕ್ಷಣೆ ನೀಡುತ್ತಿದೆ.
  • 2 ಲಕ್ಷ ರೂ.ಗಳವರೆಗೆ ಉಚಿತ ಆಕ್ಸಿಡೆಂಟಲ್ ಕವರ್ ಸಿಗುತ್ತದೆ.
  • RuPay ಡೆಬಿಟ್ ಕಾರ್ಡ್ ಬಳಸುವವರಿಗೆ ಈ ಲಾಭ ಸಿಗಲಿದೆ.
SBI Offer: SBIತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 2 ಲಕ್ಷ ರೂ., ಲಾಭ ಪಡೆಯುವುದು ಹೇಗೆ? title=
SBI Insurance cover (File Photo)

ನವದೆಹಲಿ: SBI Insurance cover - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಗ್ರಾಹಕರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, SBI ತನ್ನ ಗ್ರಾಹಕರಿಗೆ ಉಚಿತವಾಗಿ 2 ಲಕ್ಷ ರೂ.ಗಳ ಲಾಭ ನೀಡಲಿದೆ. RuPay ಡೆಬಿಟ್ ಕಾರ್ಡ್ (RuPay Debit Card) ಬಳಸುವ ಎಲ್ಲಾ ಜನ್-ಧನ್ ಖಾತೆದಾರರಿಗೆ 2 ಲಕ್ಷ ರೂಗಳವರೆಗೆ ಉಚಿತ ಅಪಘಾತ ವಿಮೆ ಬ್ಯಾಂಕ್ ನೀಡುತ್ತಿದೆ. ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ.

ಈ ರೀತಿ ಸಿಗಲಿದೆ 2 ಲಕ್ಷ ರೂ.ಗಳ ಕವರ್
ಗ್ರಾಹಕರಿಗೆ ಅವರ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ ಅನುಗುಣವಾಗಿ ವಿಮೆಯ ಮೊತ್ತವನ್ನು ಎಸ್‌ಬಿಐ ನಿರ್ಧರಿಸಲಿದೆ. 28 ಆಗಸ್ಟ್ 2018ರವರೆಗೆ ಜನ್ ಧನ್ ಖಾತೆ ತೆರೆದಿರುವವರಿಗೆ ಮತ್ತು RUPAY ಕಾರ್ಡ್ ಜಾರಿಗೊಳಿಸಿರುವ ಗ್ರಾಹಕರಿಗೆ 1 ಲಕ್ಷ ರೂಗಳವರೆಗೆ ವಿಮಾ ಮೊತ್ತ ಸಿಗಲಿದೆ. ಆಗಸ್ಟ್ 28, 2018 ರ ನಂತರ ಜಾರಿಗೊಳಿಸಲಾಗಿರುವ RuPay ಕಾರ್ಡ್ ಗಳ ಮೇಲೆ 2 ಲಕ್ಷ ರೂ.ಗಳ ವಿಮಾ ಮೊತ್ತ ಅನ್ವಯಿಸಲಿದೆ.

ಈ ಗ್ರಾಹಕರಿಗೆ ಸಿಗಲಿದೆ ಲಾಭ
ಪ್ರಧಾನಮಂತ್ರಿ ಜನ್ ಧನ್ ಯೋಜನೆಯ (Pradhan Mantri Jan Dhan Yojana) ಅಡಿ ದೇಶದ ಬಡವರು ಜೀರೋ ಬ್ಯಾಲೆನ್ಸ್ ನಲ್ಲಿ ದೇಶದ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತಮ್ಮ ಖಾತೆಯನ್ನು ತೆರೆಯಬಹುದಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಲ್ಲಿ, ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಅಥವಾ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಜನ್ ಧನ್ ಖಾತೆಯನ್ನು ತೆರೆಯಬಹುದು. ಅಷ್ಟೇ ಅಲ್ಲ ಯಾವುದೇ ಖಾತೆದಾರರು ತಮ್ಮ ಉಳಿತಾಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಆಗಿ ಪರಿವರ್ತಿಸಬಹುದು. ಇದರಲ್ಲಿ,  ಬ್ಯಾಂಕ್ RuPay ಡೆಬಿಟ್ ಕಾರ್ಡ್ ನೀಡುತ್ತದೆ.  ನೀಡುತ್ತದೆ. ಈ ಡೆಬಿಟ್ ಕಾರ್ಡ್ ಅನ್ನು ನೀವು Accidental Death Insurance, ಖರೀದಿ ರಕ್ಷಣೆ ಮತ್ತು ಇತರ ಹಲವು ಪ್ರಯೋಜನಗಳಿಗೆ ಬಳಸಬಹುದು.

ಈ ಯೋಜನೆಯ ಲಾಭ ಯಾರಿಗೆ?
ಅಪಘಾತ ಸಂಭವಿಸಿದ 90 ದಿನಗಳೊಳಗೆ ಇಂಟ್ರಾ ಅಥವಾ ಇಂಟರ್ ಬ್ಯಾಂಕ್ ಎರಡರಲ್ಲಿಯೂ ಕೂಡ ಯಾವುದೇ ಒಂದು ಚಾನಲ್ ಮೂಲಕ ಯಾವುದಾದರೊಂದು ಯಶಸ್ವಿ ಆರ್ಥಿಕ ವಹಿವಾಟು ಅಥವಾ ವಿತ್ತೀಯವಲ್ಲದ ವಹಿವಾಟು ನಡೆಸಿರುವ ಜನ್ ಧನ್ ಖಾತೆದಾರರಿಗೆ ಈ ರುಪೇ ಡೆಬಿಟ್ ಕಾರ್ಡ್ ಅಡಿಯಲ್ಲಿ ಈ ಅಪಘಾತ ಸಾವು ವಿಮೆ ಅನ್ವಯಿಸುತ್ತದೆ ಮತ್ತು ಅವರಿಗೆ ವಿಮಾ ಹಣವನ್ನು ನೀಡಲಾಗುತ್ತದೆ.

ಇದನ್ನೂ ಓದಿ-9 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದೆ 7 ಸೀಟರ್ ಕಾರು, ಎರ್ಟಿಗಾ, ಇನ್ನೋವಾಗೆ ನೀಡಲಿದೆ ಟಕ್ಕರ್

ಈ ರೀತಿ ಲಾಭ ಪಡೆಯಿರಿ
ಕ್ಲೈಮ್ ಪಡೆಯಲು, ನೀವು ಮೊದಲು ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರೊಂದಿಗೆ ಮೂಲ ಮರಣ ಪ್ರಮಾಣ ಪತ್ರ ಅಥವಾ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು. ಎಫ್‌ಐಆರ್‌ನ ಮೂಲ ಅಥವಾ ಪ್ರಮಾಣೀಕೃತ ಪ್ರತಿಯನ್ನು ಲಗತ್ತಿಸಿ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್‌ಎಸ್‌ಎಲ್ ವರದಿಯೂ ಇರಬೇಕು. ಆಧಾರ್ ಕಾರ್ಡ್ ನಕಲು. ಕಾರ್ಡುದಾರರ ಬಳಿ ರುಪೇ ಕಾರ್ಡ್ ಹೊಂದಿರುವ ಅಫಿಡವಿಟ್ ಅನ್ನು ಬ್ಯಾಂಕ್ ಸ್ಟಾಂಪ್ ಪೇಪರ್‌ನಲ್ಲಿ ನೀಡಬೇಕು. ಎಲ್ಲಾ ದಾಖಲೆಗಳನ್ನು 90 ದಿನಗಳಲ್ಲಿ ಸಲ್ಲಿಸಬೇಕು. ಪಾಸ್‌ಬುಕ್‌ನ ಪ್ರತಿಯೊಂದಿಗೆ ನಾಮಿನಿಯ ಹೆಸರು ಮತ್ತು ಬ್ಯಾಂಕ್ ವಿವರಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ-Cryptocurrency:ಕ್ರಿಪ್ಟೋಕರೆನ್ಸಿ ನಿಷೇಧ ಭಾರತಕ್ಕೆ ಅತ್ಯಂತ ಸೂಕ್ತ ಆಯ್ಕೆ- ಆರ್‌ಬಿಐ ಡೆಪ್ಯುಟಿ ಗವರ್ನರ್

ಬೇಕಾಗುವ ದಾಖಲೆಗಳು
1. ವಿಮಾ ಹಕ್ಕು ನಮೂನೆ.
2. ಮರಣ ಪ್ರಮಾಣಪತ್ರದ ಪ್ರತಿ.
3. ಕಾರ್ಡುದಾರರ ಮತ್ತು ನಾಮಿನಿಯ ಆಧಾರ್ ಪ್ರತಿ.
4. ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ರಾಸಾಯನಿಕ ವಿಶ್ಲೇಷಣೆ ಅಥವಾ ಎಫ್‌ಎಸ್‌ಎಲ್ ವರದಿಯೊಂದಿಗೆ ಇತರ ಕಾರಣಗಳಿಂದ ಸಾವು ಸಂಭವಿಸಿದಲ್ಲಿ.
5. ಅಪಘಾತದ ವಿವರಗಳನ್ನು ನೀಡುವ ಎಫ್‌ಐಆರ್ ಅಥವಾ ಪೊಲೀಸ್ ವರದಿಯ ಮೂಲ ಅಥವಾ ಪ್ರಮಾಣೀಕೃತ ಪ್ರತಿ.
6. ಕಾರ್ಡ್ ನೀಡುವ ಬ್ಯಾಂಕ್ ಪರವಾಗಿ ಅಧಿಕೃತ ಸಹಿ ಮತ್ತು ಬ್ಯಾಂಕ್ ಸ್ಟಾಂಪ್ ಮೂಲಕ ಸರಿಯಾಗಿ ಸಹಿ ಮಾಡಿದ ಘೋಷಣೆಯ ನಮೂನೆ.
7. ಇದರಲ್ಲಿ ಬ್ಯಾಂಕ್ ಅಧಿಕಾರಿಯ ಹೆಸರು ಮತ್ತು ಇಮೇಲ್ ಐಡಿಯೊಂದಿಗೆ ಸಂಪರ್ಕ ವಿವರಗಳನ್ನು ನೀಡಬೇಕು.

ಇದನ್ನೂ ಓದಿ-ಕೇಂದ್ರ ಸರ್ಕಾರದ ವತಿಯಿಂದ ನಿಮ್ಮ ಖಾತೆಗೆ ನೀಡಲಾಗುತ್ತದೆ 10,000 ರೂಪಾಯಿ..! ನೀವು ಮಾಡಬೇಕಿರುವುದಿಷ್ಟೇ ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News