Bath Mistakes: ಸ್ನಾನ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡುತ್ತಿದ್ದೀರಾ..?

ಕಳಪೆ ಗುಣಮಟ್ಟದ ಸೋಪ್ ಆಯ್ಕೆ ಮಾಡುವುದು ಅಥವಾ ಬಾತ್ರೂಮ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು. ಇಂತಹ ಅನೇಕ ವಿಷಯಗಳ ನಾವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. 

ಸ್ನಾನ ಮಾಡುವಾಗ ನಾವು ಅನೇಕ ಬಾರಿ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತೇವೆ. ನಿಮಗೆ ಗೊತ್ತೆ ಹೀಗೆ ಮಾಡುವ ತಪ್ಪುಗಳು ಮುಂದೆ ದೊಡ್ಡ ತೊಂದರೆಯನ್ನು ಉಂಟುಮಾಡುತ್ತದೆ. ಕಳಪೆ ಗುಣಮಟ್ಟದ ಸೋಪ್ ಆಯ್ಕೆ ಮಾಡುವುದು ಅಥವಾ ಬಾತ್ರೂಮ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು. ಇಂತಹ ಅನೇಕ ವಿಷಯಗಳ ನಾವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಸ್ನಾನ ಮಾಡುವಾಗ ನೀವು ಯಾವ ಸೋಪ್ ಅನ್ನು ಬಳಸುತ್ತಿರುವಿರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಕಳಪೆ ಗುಣಮಟ್ಟದ ಸೋಪ್ ಬಳಸುವುದರಿಂದ ನಿಮಗೆ ಸೋಂಕಿನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಉತ್ತಮ ಗುಣಮಟ್ಟದ ಸೋಪ್ ಅನ್ನು ನೀವು ಬಳಸುವುದನ್ನು ರೂಢಿಸಿಕೊಳ್ಳಬೇಕು.

2 /6

ಸ್ನಾನದ ನಂತರ ಒದ್ದೆಯಾದ ಟವೆಲ್ ಅನ್ನು ಎಂದಿಗೂ ಬಳಸಬಾರದು. ಏಕೆಂದರೆ ಒದ್ದೆಯಾದ ಟವೆಲ್ ಅನೇಕ ರೀತಿಯ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ. ಕೊಳಕು ಟವೆಲ್ ಗಳು ಶಿಲೀಂಧ್ರ, ತುರಿಕೆ ಮತ್ತು ಅನೇಕ ರೀತಿಯ ಸೋಂಕುಗಳಿಗೆ ಗುರಿಯಾಗುತ್ತವೆ.

3 /6

ಅನೇಕ ಬಾರಿ ಅವಸರದಲ್ಲಿ ಸ್ನಾನ ಮಾಡುವಾಗ ನಾವು ಲೂಫಾವನ್ನು ಸ್ವಚ್ಛಗೊಳಿಸುವುದಿಲ್ಲ. ಇದರಿಂದ ನೀವು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬಹುದು. ದೇಹವನ್ನು ಸ್ಕ್ರಬ್ಬಿಂಗ್ ಮಾಡಲು ಲೂಫಾದ ಬಳಕೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದರೆ ಅವುಗಳ ಮೂಲಕ ಸೂಕ್ಷ್ಮಜೀವಿಗಳು ಸುಲಭವಾಗಿ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಹೀಗಾಗಿ ನೀವು ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು.

4 /6

ಸ್ನಾನ ಮಾಡುವಾಗ ಬಾತ್ರೂಮ್ ಫ್ಯಾನ್ ಅನ್ನು ಆಫ್ ಮಾಡಲು ಪ್ರಯತ್ನಿಸಿ. ಏಕೆಂದರೆ ಸ್ನಾನದ ಸಮಯದಲ್ಲಿ ಬಾತ್ರೂಮ್ ತೇವಾಂಶದಿಂದ ತುಂಬಿರುತ್ತದೆ. ಅದು ಕ್ರಮೇಣ ಬಾತ್ರೂಮ್ ನ ಗೋಡೆಗಳನ್ನು ಹಾನಿಗೊಳಿಸುತ್ತದೆ. ಈ ಕಾರಣದಿಂದ ಬಾತ್ರೂಮ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ.

5 /6

ಹೆಚ್ಚಿನ ಜನರು ಸ್ನಾನ ಮಾಡುವಾಗ ತಮ್ಮ ಕೂದಲುಗಳಿಗೆ ಆಗಾಗ ಶಾಂಪೂ ಹಚ್ಚುತ್ತಾರೆ. ಆದರೆ ನಿಮ್ಮ ನೆತ್ತಿಯು ಎಣ್ಣೆಯುಕ್ತವಾಗಿಲ್ಲದಿದ್ದರೆ ನೀವು ಪ್ರತಿದಿನ ಕೂದಲನ್ನು ತೊಳೆಯುವ ಅಗತ್ಯವಿಲ್ಲ. ಆಗಾಗ ತೊಳೆಯುವುದರಿಂದ ಕೂದಲು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಕೂದಲನ್ನು ಸಚ್ಛವಾಗಿಟ್ಟುಕೊಳ್ಳುವುದು ಉತ್ತಮ.

6 /6

ಸ್ನಾನದ ನಂತರ ನೀವು ತಕ್ಷಣ ಮಾಯಿಶ್ಚರೈಸರ್ ಅನ್ನು ಅನ್ವಯಿಸಿದರೆ ಅದು ನಿಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ಸ್ನಾನವಾದ ಸ್ವಲ್ಪ ಸಮಯದ ನಂತರ ಇದರಿಂದ ನಿಮಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ.