"ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ"

ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ ಎಂದು ಜೆಡಿಎಸ್ ನ ಹಿರಿಯ ನಾಯಕ ವೈಎಸ್ವಿ ದತ್ತಾ ಹೇಳಿದ್ದಾರೆ.

Written by - Zee Kannada News Desk | Last Updated : Feb 18, 2022, 05:38 PM IST
  • ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ ಎಂದು ಜೆಡಿಎಸ್ ನ ಹಿರಿಯ ನಾಯಕ ವೈಎಸ್ವಿ ದತ್ತಾ ಹೇಳಿದ್ದಾರೆ.
 "ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ" title=
Photo Courtsey (YSV Datta)

ಬೆಂಗಳೂರು: ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ ಎಂದು ಜೆಡಿಎಸ್ ನ ಹಿರಿಯ ನಾಯಕ ವೈಎಸ್ವಿ ದತ್ತಾ ಹೇಳಿದ್ದಾರೆ.

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಮತ್ತು ಕೇಸರಿ ವಸ್ತ್ರದ ವಿವಾದ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು "ಕುವೆಂಪುರವರ ಸೌಹಾರ್ದತೆಯ ನೆಲೆಗಟ್ಟನ್ನು ಆದರ್ಶವಾಗಿಟ್ಟುಕೊಂಡ ಕರ್ನಾಟಕ ರಾಜ್ಯದಲ್ಲಿ ಕಳೆದಷ್ಟು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ನನ್ನಲ್ಲಿ ರಾಜ್ಯದ ಭವಿಷ್ಯದ ಬಗ್ಗೆ ಆತಂಕವನ್ನುಂಟು ಮಾಡಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Siddaramaiah : ಹಿಜಾಬ್ ಪರವಾಗಿ ನಿಂತ ಸಿದ್ದರಾಮಯ್ಯ : ಸುತ್ತೋಲೆ ವಾಪಾಸ್ ಪಡೆಯಲು ಆಗ್ರಹ!

ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಹಿಂದು, ಕ್ರೈಸ್ತ, ಮುಸಲ್ಮಾನ, ಜೈನ, ಸಿಕ್ಖರೆಲ್ಲರು ತಮಗಿಷ್ಟದ ಧರ್ಮಗಳನ್ನು ಅನುಸರಿಸಿಕೊಂಡು ಸಹಬಾಳ್ವೆ ನಡೆಸುತ್ತಿದ್ದಾರೆ.ನಾನೊಬ್ಬ ಶಿಕ್ಷಕನಾಗಿ, ಜನಪ್ರತಿನಿಧಿಯಾಗಿ ನೂರಾರು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಹಿಜಾಬ್ ತೊಟ್ಟ ಹುಡುಗಿಯರು, ಕುಂಕುಮವಿಟ್ಟುಕೊಂಡ ಹುಡುಗಿಯರು ಒಟ್ಟಿಗೆ ಕಲಿಯುವುದನ್ನು, ನಲಿಯುವುದನ್ನು ಕಣ್ಣಾರೆ ಕಂಡಿದ್ದೇನೆ.ಹಾಗೆ ಒಟ್ಟಾಗಿ ಇರುವುದೆ ಈ ಭಾರತವೆಂಬ ಜಾತ್ಯಾತೀತ ನೆಲದ ಗುಣ ಮತ್ತು ಪರಂಪರೆ" ಎಂದು ಅವರು ಹೇಳಿದ್ದಾರೆ.

ವಿವಿಧತೆಯಲ್ಲಿ ಏಕತೆಯೆ ಈ ಭಾರತ ಒಕ್ಕೂಟದ ಧ್ಯೇಯ.ವಿವಿಧ ಸಂಸ್ಕೃತಿಗಳನ್ನು ಗೌರವಿಸುತ್ತ ಏಕತೆಯಿಂದ ಬದುಕುವುವರೆ ನಿಜವಾದ ಭಾರತೀಯರು.ಸ್ವತಂತ್ರ್ಯಾ ನಂತರ ಕಳೆದ ಎಪ್ಪತ್ತು ವರ್ಷಗಳಿಂದ ಇಲ್ಲದ ಈ ಸಮಸ್ಯೆ ಏಕಾಏಕಿಯಾಗಿ ಈಗ ಹುಟ್ಟಿಕೊಂಡಿರುವುದಕ್ಕೆ ಕಾರಣ ಯಾರು ಎಂಬುದು ಗೋಡೆಯ ಮೇಲೆ ಬರೆದ ಬರಹದಷ್ಟೆ ಸ್ಪಷ್ಟವಾಗಿದೆ" ಎಂದು ದತ್ತಾ ಹೇಳಿದರು.

ಇದನ್ನೂ ಓದಿ-Ahmedabad serial bomb blast case: 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಬಳಿ ಹೇಳಿಕೊಳ್ಳುವಂತಹ ಯಾವ ಅಭಿವೃದ್ಧಿಯ ಕೆಲಸಗಳು ಇಲ್ಲದೆ ಇರುವುದರಿಂದ ಈ ನಾಡಿನ ಹಿಂದು-ಮುಸಲ್ಮಾನರ ಸೌಹಾರ್ದತೆಯನ್ನು ಕೆಡಿಸಿ, ಜಗಳವಾಡಿಸಿ ಆ ಮೂಲಕ ಮತ ವಿಭಜನೆಮಾಡಲು ಹೊರಟಿರುವ ನಡೆ ಅದರಲ್ಲೂ ವಿಶೇಷವಾಗಿ‌ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷಾತೀತವಾಗಿ ನಾಡಿನ ಸರ್ವ ಜಾತಿ, ಜನಾಂಗದ ಜನರ ಹಿತ ಬಯಸುವುದು ರಾಜಕಾರಣಿಗಳಾದ ನಮ್ಮ ಕರ್ತವ್ಯ.ಜನಪ್ರತಿನಿಧಿಗಳಾದವರು ಅಧಿಕಾರ ಸ್ವೀಕರಿಸುವಾಗ ಬಾಬಾ ಸಾಹೇಬ್ ಅಂಬೇಡ್ಕರರು ಬರೆದ ಸಂವಿಧಾನದ ಮೇಲೆ ಮಾಡಿರುವ ಪ್ರಮಾಣವನ್ನು ಮರೆತು ದೇಶದ ಜಾತ್ಯಾತೀತ ಸಿದ್ಧಾಂತವನ್ನು ಗಾಳಿಗೆ ತೂರುವ ಹೇಳಿಕೆ ಕೊಟ್ಟು ಜನರ ನೆಮ್ಮದಿ, ಶಾಂತಿಯನ್ನು ಕದಡಬೇಡಿ" ಎಂದು ದತ್ತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ-ಧರಣಿ ಕೈ ಬಿಡದ ಕಾಂಗ್ರೆಸ್ : ಸೋಮವಾರದ ಬಳಿಕ ಸದನ ಅನಿರ್ದಿಷ್ಟಾವಧಿ ಗೆ ಮುಂದೂಡಲು ಸರ್ಕಾರ ತೀರ್ಮಾನ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News