ನವದೆಹಲಿ: ಶಿಕ್ಷಕರೊಬ್ಬರು ವಿಜ್ಞಾನ ತರಗತಿಗೆ (Science Lab) ಪ್ರವೇಶಿಸಿದಾಗ ಬಾರೀ ಗಾತ್ರದ ಹೆಬ್ಬಾವು ಕಂಡು ಭಯಭೀತರಾಗಿದ್ದಾರೆ. ಡೆಮೊ ಆಧಾರದ ಮೇಲೆ ಪ್ರಾಣಿಗಳ ಬಗ್ಗೆ ಹೇಳುತ್ತಿದ್ದ ತರಗತಿಯಲ್ಲಿ ವಾಸ್ತವಾಗಿಯೇ ಈ ಸರಿಸೃಪ ಬಂದಿದೆ.
ಇದನ್ನೂ ಓದಿ: ನಾನು ವಿಶ್ವದ ಅತ್ಯಂತ ಸ್ವೀಟ್ ಭಯೋತ್ಪಾದಕ : ಸಿಎಂ ಕೇಜ್ರಿವಾಲ್
ಡೈಲಿ ಸ್ಟಾರ್‌ನ ಸುದ್ದಿಯ ಪ್ರಕಾರ, ಕಳೆದ ವಾರ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್‌ಗೆ (Sanke Catcher) ಶಾಲಾ ಶಿಕ್ಷಕರಿಂದ ಕರೆ ಬಂದಿತು. ಸೈನ್ಸ್ ಲ್ಯಾಬ್ ಮೇಜಿನ ಮೇಲೆ ದೊಡ್ಡ ಹೆಬ್ಬಾವು ಹರಿದಾಡುತ್ತಿದೆ ಎಂದು ಅವರಿಗೆ ತಿಳಿಸಲಾಯಿತು. ಹೆಬ್ಬಾವು ಕಾಣಿಸಿಕೊಂಡಾಗ ಬಹುತೇಕ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು. ಶಿಕ್ಷಕ ಮತ್ತು ಕೆಲವು ಮಕ್ಕಳು ಇನ್ನೂ ತರಗತಿಯಲ್ಲಿ ಕೆಲಸ ಮಾಡುತ್ತಿದ್ದರು.
ಸ್ನೇಕ್ ಕ್ಯಾಚರ್ಸ್ ಸ್ಟು ಮಾತನಾಡಿ, "ನಾನು ಬರುವ ಹೊತ್ತಿಗೆ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು. ಆದರೆ ಶಿಕ್ಷಕರು ಮತ್ತು ಕೆಲವರು ಇನ್ನೂ ಕೆಲವು ಕೆಲಸಗಳನ್ನು ಮಾಡುತ್ತಿದ್ದರು. ಈ ಹೆಬ್ಬಾವು (Python) ಎಲ್ಲಿಂದಲೋ ಜಾರಿಕೊಂಡು ಮೇಜಿನ ಮೇಲೆ ಹತ್ತಿರಬೇಕು. ಅದು ಸಿಂಕ್ ಅನ್ನು ಇಷ್ಟಪಟ್ಟಿದೆ" ಎಂದರು.
ಇದನ್ನೂ ಓದಿ: Ahmedabad serial bomb blast case: 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ
ಹೆಬ್ಬಾವಿನ ಕೆಲವು ಚಿತ್ರಗಳನ್ನು ತೆಗೆದ ನಂತರ, ಸ್ಟು ಅದನ್ನು ತನ್ನ ಕೈಗಳಿಂದ ಹಿಡಿದು ಚೀಲದಲ್ಲಿ ಹಾಕಿದ್ದಾರೆ. ನಂತರ ಅದನ್ನು ಕಾಡಿಗೆ ಬಿಡಲು ಕೊಂಡೊಯ್ದರು.
ಹೆಬ್ಬಾವು 20 ವರ್ಷಗಳವರೆಗೆ ಬದುಕಬಲ್ಲದು:
ಕಾರ್ಪೆಟ್ ಹೆಬ್ಬಾವುಗಳಿಗೆ ಅವುಗಳ ಅಲಂಕೃತ ಗುರುತುಗಳಿಂದ ಹೆಸರಿಸಲಾಗಿದೆ. ಸಾಮಾನ್ಯವಾಗಿ ಸುಮಾರು 2.4 ಮೀಟರ್ ಉದ್ದವಿರುತ್ತವೆ. ಕೆಲವು ನಾಲ್ಕು ಮೀಟರ್ ಉದ್ದವಿರುತ್ತವೆ. ಹೆಬ್ಬಾವು 20 ವರ್ಷಗಳ ಕಾಲ ಬದುಕಬಲ್ಲದು ಮತ್ತು ಸಾಮಾನ್ಯವಾಗಿ ಆಸ್ಟ್ರೇಲಿಯಾದ ಮುಖ್ಯ ಭೂಭಾಗದಲ್ಲಿ ಕಂಡುಬರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.