ನವದೆಹಲಿ: ಹಿಂದೂ ಧರ್ಮ(Hinduism)ದಲ್ಲಿ ಇಂತಹ ಹಲವಾರು ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಇವುಗಳು ಮಾನವನ ಪ್ರಗತಿಯನ್ನು ಹೆಚ್ಚಿಸುವ ಮಹತ್ವದ ಅಂಶಗಳಾಗಿವೆ. ಅವುಗಳಲ್ಲಿ ಒಂದು ಶುಭ ಚಿಹ್ನೆ. ಬಹುತೇಕ ಮನೆಗಳ ಮುಖ್ಯ ದ್ವಾರದಲ್ಲಿ ಶುಭ ಚಿಹ್ನೆಗಳನ್ನು ನೀವು ಕಾಣಬಹುದು. ಮನೆ ಅಥವಾ ದೇವಾಲಯಗಳ ಮುಖ್ಯ ದ್ವಾರಗಳ ಮೇಲೆ ಶುಭ-ಲಾಭ ಮತ್ತು ಸ್ವಸ್ತಿಕ ಚಿಹ್ನೆ(Swastika Symbol)ಗಳನ್ನು ಏಕೆ ಹಾಕಲಾಗುತ್ತದೆ? ಇದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ..? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮುಖ್ಯ ದ್ವಾರದಲ್ಲಿ ಶುಭ ಚಿಹ್ನೆಗಳ ಮಹತ್ವ
ಮನೆಯ ಮುಖ್ಯ ಬಾಗಿಲಿನ ಮೇಲೆ ಶುಭ-ಲಾಭ ಮತ್ತು ಸ್ವಸ್ತಿಕ ಚಿಹ್ನೆ(Swastik Mark)ಯನ್ನು ಹಾಕಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಇದರೊಂದಿಗೆ ಗಣೇಶನ ವಿಶೇಷ ಆಶೀರ್ವಾದವನ್ನು ಪಡೆಯಬಹುದು ಎಂಬ ನಂಬಿಕೆಯೂ ಇದೆ. ಇದಲ್ಲದೆ ಈ ಚಿಹ್ನೆಗಳು ಮನೆಯ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ. ಈ ಕಾರಣಕ್ಕಾಗಿಯೇ ಹಿಂದೂ ಧರ್ಮದ ಮನೆಗಳಲ್ಲಿ ಶುಭ-ಲಾಭ ಮತ್ತು ಸ್ವಸ್ತಿಕ(Swastika) ಚಿಹ್ನೆಗಳನ್ನು ಬಿಡಿಸಲಾಗುತ್ತದೆ. ಗಣೇಶ(Lord Ganesha) ಮತ್ತು ತೋರಣ ಪೂಜೆ ಸೇರಿದಂತೆ ಯಾವುದೇ ಪೂಜೆ ಮಾಡುವ ಮೊದಲು ಮನೆಯ ಮುಖ್ಯ ಬಾಗಿಲಿನ ಮೇಲೆ ಶುಭ ಚಿಹ್ನೆಗಳನ್ನು ತಪ್ಪದೇ ಬಿಡಿಸಲಾಗುತ್ತದೆ.
ಇದನ್ನೂ ಓದಿ: Expensive Zodiac Sign : ಈ ರಾಶಿಯವರು ತುಂಬಾ ದುಬಾರಿಯಂತೆ : ಶ್ರೀಮಂತರಂತೆ ಹಣ ಖರ್ಚು ಮಾಡುತ್ತಾರೆ
ಶುಭ-ಲಾಭ ಬರೆಯುವುದರ ಅರ್ಥವೇನು?
ಧರ್ಮಗ್ರಂಥಗಳಲ್ಲಿ ಶುಭ-ಲಾಭಗಳ ಮಹತ್ವ(Shubh Labh Benefits)ವನ್ನು ತಿಳಿಸಲಾಗಿದೆ. ಶುಭ ಚಿಹ್ನೆಯನ್ನು ಬರೆಯುವುದು ಎಂದರೆ ನಾವು ಸಂಪತ್ತು ಮತ್ತು ಕೀರ್ತಿಯನ್ನು ಪಡೆದ ಸಾಧನಗಳು ಯಾವಾಗಲೂ ಉಳಿಯಬೇಕೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ಮತ್ತೊಂದೆಡೆ ಲಾಭ ಎಂದರೆ ಮನೆಯಲ್ಲಿ ಸಂಪತ್ತು ಯಾವಾಗಲೂ ಹೆಚ್ಚಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತೇವೆ. ಅದೇ ರೀತಿ ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿ ಎಂದು ಈ ವಿಶೇಷ ಚಿಹ್ನೆಗಳನ್ನು ಬರೆಯಲಾಗುತ್ತದೆ.
ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ
ಮನೆಯ ಮುಖ್ಯ ದ್ವಾರದ ಮೇಲೆ ಶುಭಫಲಗಳನ್ನು ಬರೆಯುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಅಲ್ಲದೆ ಯಾರ ದೃಷ್ಟಿ ಕೂಡ ನಿಮ್ಮ ಮೇಲೆ ಬೀಳುವುದಿಲ್ಲವಂತೆ. ಮತ್ತೊಂದೆಡೆ ಸಿಂಧೂರ ಅಥವಾ ಕುಂಕುಮದಿಂದ ಮಂಗಳಕರ ಚಿಹ್ನೆಗಳನ್ನು ಬರೆಯುವುದು ಎಂದರೆ ಅದನ್ನು ಲಕ್ಷ್ಮಿದೇವಿಗೆ ಅರ್ಪಿಸುವುದಾಗಿದೆ. ಮಂಗಳಕರ ಚಿಹ್ನೆಗಳನ್ನು ಬರೆಯುವುದರಿಂದ ತಾಯಿ ಲಕ್ಷ್ಮದೇವಿ(Goddess Laxmi)ಯ ಅನುಗ್ರಹವನ್ನು ಪಡೆಯಬಹುದು ಎಂಬ ನಂಬಿಕೆಯಿದೆ.
ಇದನ್ನೂ ಓದಿ: Numerology : ಈ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಬದಲಾಗತ್ತೆ ಇವರ ಭವಿಷ್ಯ! ಕೈ ತುಂಬಾ ಹಣ, ಯಶಸ್ಸು ದೊರೆಯಲಿದೆ
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.