ಶಿವಮೊಗ್ಗ ಗಲಭೆ ಸರ್ಕಾರಿ ಪ್ರಾಯೋಜಿತ, ನ್ಯಾಯಾಂಗ ತನಿಖೆಗೆ ಆಗ್ರಹ: ವಿಪಕ್ಷ ನಾಯಕ ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ಗಲಭೆ ಹಾಗೂ ಹರ್ಷ ಪಾರ್ಥಿವ ಶರೀರ ಮೆರವಣಿಗೆ ಸರ್ಕಾರಿ ಪ್ರಾಯೋಜಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

Written by - Prashobh Devanahalli | Edited by - Chetana Devarmani | Last Updated : Feb 22, 2022, 01:15 PM IST
  • ಹರ್ಷ ಪಾರ್ಥಿವ ಶರೀರ ಮೆರವಣಿಗೆ ಸರ್ಕಾರಿ ಪ್ರಾಯೋಜಿತ
  • ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ
  • ಶಿವಮೊಗ್ಗ ಗಲಭೆ ನ್ಯಾಯಾಂಗ ತನಿಖೆಗೆ ಆಗ್ರಹ
ಶಿವಮೊಗ್ಗ ಗಲಭೆ ಸರ್ಕಾರಿ ಪ್ರಾಯೋಜಿತ, ನ್ಯಾಯಾಂಗ ತನಿಖೆಗೆ ಆಗ್ರಹ: ವಿಪಕ್ಷ ನಾಯಕ ಸಿದ್ದರಾಮಯ್ಯ  title=
ಸಿದ್ದರಾಮಯ್ಯ

ಬೆಂಗಳೂರು: ನಿನ್ನೆ ಶಿವಮೊಗ್ಗದಲ್ಲಿ (Shivamogga) ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು. ಇದರ ನಡುವೆ ಶಿವಮೊಗ್ಗದಲ್ಲಿ ಗಲಭೆ ಹಾಗೂ ಹರ್ಷ ಪಾರ್ಥಿವ ಶರೀರ ಮೆರವಣಿಗೆ ಸರ್ಕಾರಿ ಪ್ರಾಯೋಜಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಂತ್ಯಕ್ರಿಯೆ ವೇಳೆ (Shivamogga boy murder Case) ಗಲಾಟೆ ವಿಚಾರ ಪ್ರಸ್ತಾಪಿಸಿದರು. ಭಾನುವಾರ ಸಂಜೆ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಮೆರವಣಿಗೆ ಮಾಡಿದ್ದು ಸೋಮವಾರ, ಶಿವಮೊಗ್ಗದಲ್ಲಿ ಮೂರು ಕೊಲೆಗಳಾಗಿವೆ ಎಂದು ಹೇಳಿದರು.

ಇದನ್ನೂ ಓದಿ: CT Ravi : 'ಶಾಲೆಗಳಲ್ಲಿ ಮಾತ್ರವಲ್ಲ ಬೇರೆ ಕಡೆಯಲ್ಲೂ "ಬುರ್ಖಾ ಬ್ಯಾನ್" ಬಗ್ಗೆ ಚರ್ಚೆ ಆಗಬೇಕು' 

144 ಸೆಕ್ಷನ್ ಜಾರಿ ಇದ್ರೂ ಮೆರವಣಿಗೆಗೆ ಅವಕಾಶ ಕೊಟ್ಟಿದ್ದೇಕೆ? ಪೊಲೀಸರು ಮೆರವಣಿಗೆಗೆ ಅನುಮತಿ ಕೊಟ್ಟಿದ್ದೇಗೆ? ಶಿವಮೊಗ್ಗ ಸಂಸದ ರಾಘವೇಂದ್ರ, ಸಚಿವ ಈಶ್ವರಪ್ಪ (Eshwarappa) ಭಾಗಿ ಆಗಿದ್ದರು. ಸಚಿವರ ಎದುರೇ ಕಲ್ಲು ತೂರಾಟ ನಡೆದಿದೆ. ಸಂಸದ ರಾಘವೇಂದ್ರ ಎದುರಲ್ಲೇ ಕಲ್ಲು ತೂರಾಟ ನಡೆದಿದೆ. ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ, ಇವರು ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಾರೆ.  ಹಿಂದೂ ಸಂಘಟನೆಗಳು ಬೀದಿಗಿಳಿದು ಕಲ್ಲು ತೂರಿವೆ ಎಂದು ಹೇಳಿದರು.

ಕತ್ತಿ, ಖಡ್ಗ ಹಿಡಿದು ಮೆರವಣಿಗೆ ಮಾಡಿದ್ದಾರೆ. ನಿನ್ನೆಯ ಗಲಭೆಗೆ ಸರ್ಕಾರವೇ ನೇರ ಕಾರಣ. ನಿನ್ನೆಯ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. 

ಮಾಧ್ಯಮದವರಿಗೂ ಏಟು ಬಿದ್ದಿದೆ. ಸಾರ್ವಜನಿಕರ ಆಸ್ತಿಪಾಸ್ತಿ‌ ನಾಶವಾಗಿದೆ, ಪ್ರಜಾಪ್ರಭುತ್ವದ ನಾಶವಾಗ್ತಿದೆ. ನಿನ್ನೆ ಈಶ್ವರಪ್ಪನವರೇ ಪ್ರವೋಕ್ ಮಾಡಿದ್ದಾರೆ. ಇದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಹೇಳಿದರು.

ರಾಷ್ಟ್ರ ಧ್ವಜದ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,  ಕೂಡಲೇ ಈಶ್ವರಪ್ಪನವರ ವಿರುದ್ಧ ಕ್ರಿಮಿನಲ್ ಕೇಸ್ (Criminal Case) ದಾಖಲಿಸಬೇಕು. ಅವರನ್ನ ಸಂಪುಟದಿಂದ ಕೂಡಲೇ ಕೈಬಿಡಬೇಕು. ಈಗ ಮತ್ತೊಂದು ದೊಡ್ಡ ಅಪರಾಧ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಕಪ್ಪು ವ್ಯವಹಾರಗಳ ಗುಹೆಯಾಗಿರುವ ಇಂಟರ್ನೆಟ್ ಜಗತ್ತು! ಡಾರ್ಕ್ ವೆಬ್ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಥಳೀಯ ಸಂಸ್ಥೆಗಳ ಚುನಾವಣೆಗಳ (Local Body Election) ಬಗ್ಗೆ ಮಾತನಾಡಿದ ಅವರು, ಒಬಿಸಿ ಮೀಸಲಾತಿ ಮಿಸ್ ಆಗಲಿದೆ. ಒಬಿಸಿಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ಕೋರ್ಟ್ ಗಮನಕ್ಕೆ ತರಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನ ಮುಂದಿಡಬೇಕು ಹಾಗೂ ಜಿ.ಪಂ, ತಾ.ಪಂ ಚುನಾವಣೆಗಳನ್ನ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ (Siddaramaiah) ಸಲಹೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News