Surya Guru Yuti 2022 : 12 ವರ್ಷಗಳ ನಂತರ ಕುಂಭ ರಾಶಿಗೆ ಸೂರ್ಯ-ಗುರು : ಮಾರ್ಚ್ 15 ರೊಳಗೆ ಈ ರಾಶಿಯವರಿಗೆ ಭಾರೀ ಲಾಭ!

ಈ ಸಂಯೋಜನೆಯು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇದು 15 ಮಾರ್ಚ್ 2022 ರವರೆಗೆ ಇರುತ್ತದೆ. ಗುರು-ಸೂರ್ಯನ ಸಂಯೋಗದಿಂದ ಯಾವ ರಾಶಿಗೆ ಲಾಭವಾಗುತ್ತದೆ? ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Feb 24, 2022, 08:34 PM IST
  • ಕುಂಭದಲ್ಲಿ ಸೂರ್ಯ ಗುರುವಿನ ಸಭೆ
  • ಗುರು-ಸೂರ್ಯನ ಸಂಯೋಗವು ಭಾರೀ ಪ್ರಯೋಜನಗಳನ್ನು ನೀಡುತ್ತದೆ
  • 4 ರಾಶಿಯವರಿಗೆ ಬಂಪರ್ ಲಾಭ ಆಗಲಿದೆ
Surya Guru Yuti 2022 : 12 ವರ್ಷಗಳ ನಂತರ ಕುಂಭ ರಾಶಿಗೆ ಸೂರ್ಯ-ಗುರು : ಮಾರ್ಚ್ 15 ರೊಳಗೆ ಈ ರಾಶಿಯವರಿಗೆ ಭಾರೀ ಲಾಭ! title=

ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜನೆಂದು ಪರಿಗಣಿಸಲಾದ ಸೂರ್ಯ ಮತ್ತು ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾದ ಗುರು 12 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಂಯೋಗ ಹೊಂದಲಿದ್ದಾರೆ. ಈ ಯೋಗವು ಭಾರೀ ಬದಲಾವಣೆಗಳನ್ನು ತರುತ್ತದೆ. 

ಜ್ಯೋತಿಷ್ಯಶಾಸ್ತ್ರ(Astrology)ದ ಲೆಕ್ಕಾಚಾರದ ಪ್ರಕಾರ, ಈ ಸಂಯೋಜನೆಯು ಕೆಲವು ರಾಶಿಯವರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಮತ್ತು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇದು 15 ಮಾರ್ಚ್ 2022 ರವರೆಗೆ ಇರುತ್ತದೆ. ಗುರು-ಸೂರ್ಯನ ಸಂಯೋಗದಿಂದ ಯಾವ ರಾಶಿಗೆ ಲಾಭವಾಗುತ್ತದೆ? ಇಲ್ಲಿದೆ ನೋಡಿ..

ಇದನ್ನೂ ಓದಿ : ಕೈ ತಪ್ಪಿದ ಕೆಲಸ ಕೂಡಾ ಕೈಗೂಡುವಂತೆ ಮಾಡುತ್ತದೆ ಚಿಟಿಕೆ ಅರಶಿನ

ಈ ರಾಶಿಯವರಿಗೆ ಭಾರೀ ಅದೃಷ್ಟ

ಮೇಷ ರಾಶಿ : ಮೇಷ ರಾಶಿಯವರಿಗೆ ಈ ಸಮಯ ಆರ್ಥಿಕ ಲಾಭ ತರಲಿದೆ. ಅದೃಷ್ಟಕ್ಕೆ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಗುರು-ಸೂರ್ಯರು(Surya Guru Yuti 2022) ಉತ್ತಮ ಲಾಭವನ್ನು ನೀಡಲಿದ್ದಾರೆ. ಸಹಭಾಗಿತ್ವದ ಕೆಲಸಗಳಲ್ಲಿ ಹೆಚ್ಚಿನ ಲಾಭವಿದೆ. ಕೆಲವು ಜನರಿಗೆ, ಈ ಸಮಯವು ಅವರ ವೃತ್ತಿಜೀವನದಲ್ಲಿ ಅವರನ್ನು ಎತ್ತರಕ್ಕೆ ಕೊಂಡೊಯ್ಯಲಿದೆ.

ಸಿಂಹ ರಾಶಿ : ಸಿಂಹ ರಾಶಿಯವರಿಗೆ, ಮಾರ್ಚ್ 15 ರವರೆಗಿನ ಸಮಯವು ಪ್ರೇಮ ಜೀವನಕ್ಕೆ ವಿಶೇಷವಾಗಿ ಉತ್ತಮವಾಗಿರುತ್ತದೆ. ಪ್ರೇಮ ಜೋಡಿಗಳು ಗಂಟು ಕಟ್ಟಬಹುದು. ವಿವಾಹಿತ ದಂಪತಿಗಳ ಜೀವನವು ಪ್ರಣಯದಿಂದ ತುಂಬಿರುತ್ತದೆ.

ಇದನ್ನೂ ಓದಿ : ಫೆಬ್ರವರಿ 27 ರಿಂದ ರೂಪುಗೊಳ್ಳಲಿದೆ ಪಂಚ ಗ್ರಹಿ ಯೋಗ, ರಾಜಕೀಯ ಚಟುವಟಿಕೆಯಿಂದ ಹಿಡಿದು ಜನ ಜೀವನದ ಮೇಲೆ ಬೀರಲಿದೆ ಪ್ರಭಾವ

ಧನು ರಾಶಿ : ಧನು ರಾಶಿ(Sagittarius)ಯವರಿಗೆ, ಸೂರ್ಯ ಮತ್ತು ಗುರುಗಳ ಸಂಯೋಗವು ಹೊಸ ಗುರಿಗಳನ್ನು ಸಾಧಿಸುತ್ತದೆ. ಒಂದರ ನಂತರ ಒಂದು ಯಶಸ್ಸು. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News