Russia-Ukraine Tension - ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ರಷ್ಯಾವನ್ನು ಖಂಡಿಸುವ ನಿರ್ಣಯವನ್ನು ಬೆಂಬಲಿಸದ ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ರಷ್ಯಾ ಧನ್ಯವಾದ ಹೇಳಿದೆ. ಈ ಕರಡನ್ನು ಬೆಂಬಲಿಸದವರಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ವಿಶ್ವಸಂಸ್ಥೆಯ (United Nations) ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ (Vassily Nebenzia) ಹೇಳಿದ್ದಾರೆ.
ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾವನ್ನು ಖಂಡಿಸುವ ನಿರ್ಣಯದ ಮೇಲೆ ಮತದಾನದಿಂದ ದೂರ ಉಳಿದಿವೆ. 11 ದೇಶಗಳು ಈ ಪ್ರಸ್ತಾಪವನ್ನು ಬೆಂಬಲಿಸಿದರೂ, ರಷ್ಯಾ (Russia) ಈ ಪ್ರಸ್ತಾಪವನ್ನು ವೀಟೋ ಮಾಡಿದೆ. ಕೌನ್ಸಿಲ್ನ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾದ ವೀಟೋ ಅಧಿಕಾರವು ಖಂಡನಾ ನಿರ್ಣಯ ಅಂಗೀಕೃತಗೊಳ್ಳಲು ವಿಫಲವಾಗಿದೆ.
'ರಷ್ಯಾ ಉಕ್ರೇನಿಯನ್ ಜನರನ್ನು ವೀಟೋ ಮಾಡಲು ಸಾಧ್ಯವಿಲ್ಲ'
ಮತದಾನದ ಬಳಿಕ ಮಾತನಾಡಿದ ವಿಶ್ವಸಂಸ್ಥೆಯ ಯುಎಸ್ (America) ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್, 'ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ. ರಷ್ಯಾ ಈ ಪ್ರಸ್ತಾಪವನ್ನು ವೀಟೋ ಮಾಡಬಹುದು, ಆದರೆ ಅದು ನಮ್ಮ ಧ್ವನಿಯನ್ನು ವೀಟೋ ಮಾಡಲು ಸಾಧ್ಯವಿಲ್ಲ. ಸತ್ಯವನ್ನು ವೀಟೋ ಮಾಡಲು ಸಾಧ್ಯವಿಲ್ಲ. ನಮ್ಮ ತತ್ವಗಳನ್ನು ವೀಟೋ ಮಾಡಲು ಸಾಧ್ಯವಿಲ್ಲ. ಉಕ್ರೇನ್ (Ukraine) ಜನರನ್ನು ವೀಟೋ ಮಾಡಲು ಸಾಧ್ಯವಿಲ್ಲ' ಸಾಧ್ಯವಿಲ್ಲ ಎಂದಿದ್ದಾರೆ.
ನಿರ್ಣಯದ (UN Resolution Condemning Russia Invasion) ಮೇಲೆ ಮತದಾನದಿಂದ ದೂರ ಉಳಿದಿರುವ ಭಾರತ ವಾಯು ರಾಜತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ ಸ್ಪಷ್ಟೀಕರಣವನ್ನು ನೀಡಿದೆ. ನಾವು ಎಲ್ಲರ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗೌರವಿಸಬೇಕು ಎಂದು ಭಾರತ ಹೇಳಿದೆ.
ಭಾರತದ ನೀತಿ ಏನು?
ಮತದಾನದಿಂದ ದೂರ ಉಳಿಯುವುದರ ಹಿಂದೆ ಭಾರತದ ತಂತ್ರಗಾರಿಕೆಯ ಒಂದು ಭಾಗವೂ ಇದೆ. ರಷ್ಯಾ ಮತ್ತು ಅಮೆರಿಕದೊಂದಿಗಿನ ಉತ್ತಮ ಸಂಬಂಧದ ದೃಷ್ಟಿಯಿಂದ ಭಾರತವು ಮಾಸ್ಕೋ ಮತ್ತು ವಾಷಿಂಗ್ಟನ್ನಲ್ಲಿ ಕುಳಿತು ಮಾತುಕತೆ ನಡೆಸಬಹುದು. ಇದರೊಂದಿಗೆ, ಉಕ್ರೇನ್ ವಿಷಯದಲ್ಲಿ ಭಾರತವು ಯಾವುದೇ ಪಕ್ಷವನ್ನು ನೇರವಾಗಿ ಬೆಂಬಲಿಸುವುದನ್ನು ತಪ್ಪಿಸುತ್ತಿದೆ. ಏಕೆಂದರೆ ಭಾರತವು ಎರಡೂ ಕಡೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ.
ಇದನ್ನೂ ಓದಿ-Russia-Ukraine conflict: ಸಪ್ತ ಪ್ರಶ್ನೆಗಳ ಮೂಲಕ ರಷ್ಯಾ-ಉಕ್ರೇನ್ ಸಂಘರ್ಷದ ಇತಿಹಾಸವನ್ನು ತಿಳಿಯಿರಿ....
ರಷ್ಯಾ ಜೊತೆ ಮಾತುಕತೆ ನಡೆಸಿ ರಷ್ಯಾದ ಆಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಉಕ್ರೇನ್ ಭಾರತಕ್ಕೆ ಹಲವು ಬಾರಿ ಮನವಿ ಮಾಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ಪರಿಹರಿಸಲು ರಷ್ಯಾಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ-Russia-Ukraine Crisis: ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ನಡುವಿನ ಜಾಡನ್ನು ಹುಡುಕುತ್ತಾ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ