ನವದೆಹಲಿ: ನಮ್ಮ ದೇಶದಲ್ಲಿ ಹೆಚ್ಚಿನ ಜನರು ಮಧುಮೇಹ ಪರೀಕ್ಷೆ(Diabetes Test)ಗೆ ಒಳಗಾಗುವುದಿಲ್ಲ. ಏಕೆಂದರೆ ಅವರು ಅಂತಹ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ. ಮಧುಮೇಹ ಬರುವ ಮೊದಲು ಕೆಲ ಆರಂಭಿಕ ಲಕ್ಷಣಗಳು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಮಧುಮೇಹದ ಗಡಿರೇಖೆಯಲ್ಲಿ ನಿಂತಿದ್ದೇವೆಂದು ನಮಗೆ ತಿಳಿಯುತ್ತದೆ. ಮಧುಮೇಹದ ಆರಂಭಿಕ ಲಕ್ಷಣಗಳಿಗೂ ಮೊದಲು ನಿಮ್ಮ ಜೀವನಶೈಲಿಯ ಬಗ್ಗೆ ಗಮನಹರಿಸದಿದ್ದರೆ ನೀವು ಟೈಪ್ -2 ಮಧುಮೇಹ(Type 2 diabetes)ಕ್ಕೆ ಬಲಿಯಾಗಬಹುದು.
ಪ್ರಿಡಯಾಬಿಟಿಸ್ ಎಂದರೇನು?
ಪ್ರಿಡಯಾಬಿಟಿಸ್ ಅಥವಾ ಬಾರ್ಡರ್ಲೈನ್ ಮಧುಮೇಹ(Borderline In Diabetes)ವು ವ್ಯಕ್ತಿಯು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಮೊದಲು ಸಂಭವಿಸುವ ಸ್ಥಿತಿಯಾಗಿದೆ. ವರದಿಗಳ ಪ್ರಕಾರ ಪ್ರಿಡಿಯಾಬಿಟಿಸ್ ರೋಗಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದಾಗ್ಯೂ ಈ ಮಟ್ಟವು ಸಾಕಷ್ಟು ಹೆಚ್ಚಿಲ್ಲ, ಹೀಗಾಗಿ ಇದನ್ನು ಮಧುಮೇಹವೆಂದು ಪರಿಗಣಿಸಬಾರದು.
ಇದನ್ನೂ ಓದಿ: Tulsi ಎಲೆಗಳನ್ನು ಈ ರೀತಿ ಎಂದಿಗೂ ಸೇವಿಸಬೇಡಿ, ಆರೋಗ್ಯಕ್ಕೆ ತುಂಬಾ ಹಾನಿಕರ
ಪ್ರಿಡಯಾಬಿಟಿಸ್ನ ಲಕ್ಷಣಗಳು ಯಾವುವು?
- ಚರ್ಮದ ಮೇಲೆ ಕಪ್ಪು ಕಲೆಗಳು ಅಥವಾ ಚರ್ಮವು ಕಪ್ಪಾಗುವುದನ್ನು ಪೂರ್ವ-ಮಧುಮೇಹದ(Diabetes Early Symptoms) ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮೊಣಕೈಗಳು, ಮೊಣಕಾಲುಗಳು, ಗೆಣ್ಣುಗಳು, ಕುತ್ತಿಗೆ ಮತ್ತು ಆರ್ಮ್ಪಿಟ್ಗಳಂತಹ ಸ್ಥಳಗಳಲ್ಲಿ ಟೋನ್ ಕಪ್ಪಾಗುವಿಕೆ ಅಥವಾ ಕಪ್ಪು ತೇಪೆಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.
- ಇದಲ್ಲದೆ ಆಯಾಸವೂ ಕಾಣಿಸಿಕೊಳ್ಳುತ್ತದೆ. ರಾತ್ರಿಯ ನಿದ್ದೆಯ ನಂತರವೂ ನಿಮಗೆ ದಣಿವುಂಟಾದಾಗ ಈ ಲಕ್ಷಣಗಳು ಮಧುಮೇಹ ಪೂರ್ವದ ಲಕ್ಷಣಗಳಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು
- ನೀವು ಮತ್ತೆ ಮತ್ತೆ ಬಾಯಾರಿಕೆಯನ್ನು ಅನುಭವಿಸಿದರೆ ಜಾಗರೂಕರಾಗಿರಬೇಕು. ಇದಲ್ಲದೆ ಆಗಾಗ ಮೂತ್ರ ವಿಸರ್ಜನೆಯ ಕೂಡ ಪೂರ್ವ ಮಧುಮೇಹದ ಲಕ್ಷಣ(Diabetes symptoms)ವಾಗಿದೆ. ಹೀಗಾಗಿ ಮಧುಮೇಹದಿಂದ ದೂರವಿರಬೇಕಾದರೆ ನೀವು ಆರೋಗ್ಯಕರ ಆಹಾರ ಸೇವಿಸಬೇಕು ಹಾಗೂ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು.
ಇದನ್ನೂ ಓದಿ: Fasting: ಉಪವಾಸದ ಬಳಿಕವೂ ಕೂಡ ತೂಕ ಹೆಚ್ಚಾಗುತ್ತಿದೆಯಾ? ಹಾಗಿದ್ರೆ ನೀವು ಈ ತಪ್ಪುಗಳನ್ನು ಮಾಡುತ್ತಿರುವಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.