ನವದೆಹಲಿ: Fasting Weight - ಅನೇಕ ಜನರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಉಪವಾಸವನ್ನು ಸಹ ಮಾಡುತ್ತಾರೆ, ಆದರೆ ತಿಳಿದು ಅಥವಾ ತಿಳಿಯದೆ ಉಪವಾಸ ಮಾಡುವವರು ಕೆಲ ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ (Weight Gain). ನಿಮ್ಮ ವಿಷಯದಲ್ಲಿಯೂ ಕೂಡ ಹೀಗಾಗುತ್ತಿದ್ದರೆ ನೀವೂ ಸ್ವಲ್ಪ ಗಮನಹರಿಸಬೇಕು. ವಾಸ್ತವದಲ್ಲಿ, ಇದರ ಹಿಂದಿನ ಕಾರಣವೆಂದರೆ ನೀವು ಉಪವಾಸದಲ್ಲಿ ಸೇವಿಸುವ ಕೆಲ ಪದಾರ್ಥಗಳು. ಹೌದು, ಅವುಗಳ ಸೇವನೆಯಿಂದ ನಿಮ್ಮ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ.
ಉಪವಾಸದಲ್ಲಿ ಕಡಿಮೆ ಸಿಹಿ ತಿನ್ನಿರಿ (Weight Gain In Fasting)
ಉಪವಾಸದಲ್ಲಿ ಕಡಿಮೆ ಸಿಹಿ ತಿನ್ನಲು ಪ್ರಯತ್ನಿಸಿ, ಏಕೆಂದರೆ ಹೆಚ್ಚಿನ ಜನರು ಉಪವಾಸದ ಸಮಯದಲ್ಲಿ ಸಿಹಿತಿಂಡಿಗಳನ್ನು ತಿನ್ನುತ್ತಾರೆ. ಸಿಹಿ ತಿನ್ನುವುದರಿಂದ ಉಪವಾಸದಲ್ಲಿ ಶಕ್ತಿ ಬರುತ್ತದೆ ಎಂಬ ನಂಬಿಕೆಯೇ ಇದರ ಹಿಂದಿನ ಕಾರಣ. ಹೀಗಾಗಿ ನೀವೂ ಕೂಡ ಉಪವಾಸದ ಸಮಯದಲ್ಲಿ ಸಿಹಿತಿಂಡಿಗಳನ್ನು ಸೇವಿಸುತ್ತಿದ್ದರೆ, ಅದನ್ನು ಇಂದಿನಿಂದಲೇ ಕಡಿಮೆ ಮಾಡಿ. ಸಿಹಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಏನೋ ಬರುತ್ತದೆ, ಆದರೆ ನಿಮ್ಮ ತೂಕವು ವೇಗವಾಗಿ ಹೆಚ್ಚಾಗುತ್ತದೆ.
ಉಪವಾಸದ ಸಮಯದಲ್ಲಿ ಏನು ತಿನ್ನಬೇಕು?
ಉಪವಾಸದ ಸಮಯದಲ್ಲಿ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂಬುದು ದೊಡ್ಡ ಸಂದಿಗ್ಧತೆ. ಸಿಹಿ ತಿಂದರೆ ಬೇಗ ಶಕ್ತಿ ಬರುತ್ತದೆ ಎಂದು ಹೆಚ್ಚಿನವರು ಭಾವಿಸಿರುವುದೇ ಇದಕ್ಕೆ ಕಾರಣ. ಹೀಗಾಗಿ ಈ ಸಮಯದಲ್ಲಿ ಬೆಲ್ಲ, ಖರ್ಜೂರವನ್ನೂ ನೀವು ಸೇವಿಸಬಹುದು. ಇವು ಹಲವಾರು ಪ್ರಯೋಜನಗಳನ್ನು ಹೊಂದಿವೆ ಮತ್ತು ನಿಮ್ಮ ತೂಕ ಕೂಡ ಇದರಿಂದ ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ-Lychee Health benefits: ಬೇಸಿಗೆಯಲ್ಲಿ ಲಿಚಿಹಣ್ಣು ಸೇವಿಸುವುದರಿಂದ ಸಿಗುತ್ತೆ ಅನೇಕ ಪ್ರಯೋಜನಗಳು
ಬೇಯಿಸಿದ ಆಲೂಗಡ್ಡೆ ಚಿಪ್ಸ್ ತಿನ್ನಿರಿ (Health Tips)
ಉಪವಾಸದ ಸಮಯದಲ್ಲಿ ಹೆಚ್ಚಿನ ಜನರು ಆಲೂಗಡ್ಡೆ ಚಿಪ್ಸ್ ಅನ್ನು ಮಾತ್ರ ತಿನ್ನುತ್ತಾರೆ. ಆದ್ದರಿಂದ ಉಪವಾಸದ ಸಮಯದಲ್ಲಿ ಬೇಯಿಸಿದ ಆಲೂಗಡ್ಡೆ ಚಿಪ್ಸ್ ತಿನ್ನಲು ಪ್ರಯತ್ನಿಸಿ ಉತ್ತಮ ಆಯ್ಕೆಯಾಗಿದೆ. ಇದರಿಂದ ನಿಮ್ಮ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ. ಆಲೂಗಡ್ಡೆಯಲ್ಲಿ ಬಹಳಷ್ಟು ಕೊಬ್ಬಿನಾಂಶ ಇರುತ್ತದೆ. ಹುರಿದ ಚಿಪ್ಸ್ ಜಾಗದಲ್ಲಿ ಬೇಯಿಸಿದ ಆಲೂಗಡ್ಡೆಗಳನ್ನು ಆಯ್ಕೆ ಮಾಡುವುದು ಉತ್ತಮ.
ಇದನ್ನೂ ಓದಿ-Summer Food: ಬೇಸಿಗೆ ಕಾಲದಲ್ಲಿ ನಿಮ್ಮ ಡಯಟ್ ನಲ್ಲಿರಲಿ ಈ 5 ಆಹಾರಗಳು, ಯಾವತ್ತು ಫಿಟ್ನೆಸ್ ನಿಮ್ಮದಾಗಿರುತ್ತದೆ
(Disclaimer - ಈ ಲೇಖನ ಕೇವಲ ಸಾಮಾನ್ಯ ಮಾಹಿತಿಗಾಗಿ ಬರೆಯಲಾಗಿದೆ. ಇಲ್ಲಿ ನೀಡಲಾಗಿರುವ ಮಾಹಿತಿ ಯಾವುದೇ ಕಾಯಿಲೆಯ ಚಿಕಿತ್ಸೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Pain Killer: ತಲೆ ನೋವು ಅಂತ ತಕ್ಷಣ ಮಾತ್ರೆ ತಿಂತೀರಾ..? ಹುಷಾರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ