ಮೋದಿ ಎಂದೂ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತಾರೆ ಎಂದು ಹೇಳಿಲ್ಲ -ಬಿಜೆಪಿ ನಾಯಕ

     

Last Updated : May 28, 2018, 06:22 PM IST
ಮೋದಿ ಎಂದೂ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತಾರೆ ಎಂದು ಹೇಳಿಲ್ಲ -ಬಿಜೆಪಿ ನಾಯಕ  title=

ಪುಣೆ: ಪ್ರಧಾನಿ ನರೇಂದ್ರ ಮೋದಿ ಎಂದೂ ಜನರ ಖಾತೆಗೆ 15 ಲಕ್ಷ ಹಾಕುತ್ತಾರೆ ಎಂದು ಹೇಳಿಲ್ಲ ಎಂದು ಬಿಜೆಪಿ ಶಾಸಕ ಅಮರ್ ಸಬೆಲ್ ತಿಳಿಸಿದರು.

ಬಿಜೆಪಿ ಸರ್ಕಾರವು ನಾಲ್ಕು ವರ್ಷದ ಆಡಳಿತ ಪೂರೈಸಿದ ಹಿನ್ನಲೆಯಲ್ಲಿ ಪುಣೆಯ ಪಿಂಪ್ರಿಯಲ್ಲಿ ಮಾತನಾಡುತ್ತಾ  "ವಿರೋಧ ಪಕ್ಷಗಳು ಈ ವಿಚಾರದ ಕುರಿತಾಗಿ ತಪ್ಪು ಗ್ರಹಿಕೆ ಮತ್ತು ಗೊಂದಲವನ್ನು ಸೃಷ್ಟಿಸಿವೆ. ಮೋದಿಜಿ ಯವರು ಎಂದು ಜನರ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಹಾಕುತ್ತಾರೆ ಎಂದು ಹೇಳಿರಲಿಲ್ಲ ಮತ್ತು ಅದು ಬಿಜೆಪಿ ಪ್ರನಾಳಿಕೆಯಲ್ಲಿಯೂ ಸಹಿತ  ಇದ್ದಿರಲಿಲ್ಲ" ಎಂದು ತಿಳಿಸಿದರು.

ಪ್ರತಿಪಕ್ಷಗಳು ಈಗ ಬಿಜೆಪಿ ಪಕ್ಷವು ನಾಲ್ಕು ವರ್ಷಗಳ ಆಡಳಿತಾವಧಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ.ಆದರೆ ಪ್ರತಿಪಕ್ಷಗಳು ಕಪ್ಪುಹಣವನ್ನು ಭಾರತಕ್ಕೆ  ವಾಪಸ್ಸು ತರುವ  ಮತ್ತು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುವ  ವಿಚಾರವಾಗಿ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಸಬೇಲ್ ಅವರ ಹೇಳಿಕೆ ಬಂದಿದೆ.

Trending News