Team India: ಈ ಆಟಗಾರನ ವೃತ್ತಿಜೀವನ ಹಾಳು ಮಾಡುತ್ತಿರುವ ರೋಹಿತ್-ದ್ರಾವಿಡ್!

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಆದರೆ ಇವರಿಬ್ಬರಿಂದಾಗಿ ಒಬ್ಬ ಆಟಗಾರನ ವೃತ್ತಿಜೀವನ ಹಾಳಾಗುತ್ತಿದೆ. ಬೆಂಚ್‌ನಲ್ಲಿಯೇ ಈ ಆಟಗಾರನ ವೃತ್ತಿಜೀವನವನ್ನು ಅಂತ್ಯಗೊಳಿಸಲಾಗುತ್ತಿದೆ.   

ನವದೆಹಲಿ: ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ. ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜ ಕೋಚ್‌ನ ಬೆಂಬಲವನ್ನೂ ರೋಹಿತ್ ಪಡೆಯುತ್ತಿದ್ದಾರೆ. ಈ ಇಬ್ಬರು ದಿಗ್ಗಜರು ಭಾರತಕ್ಕೆ ಮತ್ತೊಮ್ಮೆ ಐಸಿಸಿ ಟ್ರೋಫಿ ತಂದುಕೊಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಇಬ್ಬರೂ ಲೆಜೆಂಡರಿ ಆಟಗಾರರಿಗೆ ಸಾಕಷ್ಟು ಅವಕಾಶ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಆದರೆ ಇವರಿಬ್ಬರಿಂದಾಗಿ ಒಬ್ಬ ಆಟಗಾರನ ವೃತ್ತಿಜೀವನವೇ ಹಾಳಾಗುತ್ತಿದೆ. ಹಾಗಾದರೆ ಯಾರು ಆ ಆಟಗಾರ..?   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ಆಟಗಾರನನ್ನು ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವೆಂದು ಪರಿಗಣಿಸಲಾಗಿತ್ತು. ಎಂ.ಎಸ್.ಧೋನಿ ನಿವೃತ್ತಿಯ ನಂತರ ಈ ಆಟಗಾರನ ವೃತ್ತಿಜೀವನವೇ ಡೋಲಾಯಮಾನವಾಯಿತು. ಧೋನಿ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆದಾಗ ಈ ಆಟಗಾರನಿಗೆ ಸಿಕ್ಕ ಅವಕಾಶಗಳು ಕಡಿಮೆ.  

2 /5

ಇನ್ನು ರೋಹಿತ್ ಶರ್ಮಾ ಕೂಡ ಈ ಆಟಗಾರನಿಗೆ ಬೆಲೆ ಕೊಡಲಿಲ್ಲ. ಅತ್ಯುತ್ತಮ ಬೌಲರ್ ಕುಲದೀಪ್ ಯಾದವ್ ಗೆ ಅವಕಾಶ ನೀಡದೆ ವಿರಾಟ್ ಕೊಹ್ಲಿ ಮಾಡಿದ ತಪ್ಪನ್ನೇ ರೋಹಿತ್ ಶರ್ಮಾ ಸಹ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ XI ನಲ್ಲಿ ಟೀಂ ಇಂಡಿಯಾದ ಅಪಾಯಕಾರಿ ಬೌಲರ್ ಕುಲದೀಪ್ ಯಾದವ್‌ಗೆ ರೋಹಿತ್ ಅವಕಾಶ ನೀಡಲಿಲ್ಲ. ಇವರಿಗೆ ಅವಕಾಶ ನೀಡುವ ಮೂಲಕ ರೋಹಿತ್ ಶರ್ಮಾ ಕುಲದೀಪ್ ಯಾದವ್ ವೃತ್ತಿಜೀವನ ಉಳಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಇದೀಗ ಹುಸಿಯಾಗಿದೆ.  

3 /5

ವಿರಾಟ್ ಕೊಹ್ಲಿ ಕೂಡ ಕುಲದೀಪ್ ಯಾದವ್ ಅವರನ್ನು ತಮ್ಮ ತಂಡದ ಪ್ಲೇಯಿಂಗ್ XIನಲ್ಲಿ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದರು. ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಆಡುವ XI ನಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರಿಗೆ ಅವಕಾಶ ನೀಡಿದ್ದಾರೆ. ಕುಲದೀಪ್ ಯಾದವ್‌ಗೆ ಅವಕಾಶ ನೀಡದ ರೋಹಿತ್ ಶರ್ಮಾ ನಿರ್ಧಾರದ ಮೇಲೆ ಪ್ರಶ್ನೆಗಳು ಎದ್ದಿವೆ.

4 /5

2017ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದ ಭಾರತ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಮತ್ತು ಮಾಜಿ ಕೋಚ್ ಕುಂಬ್ಳೆ ನಡುವೆ ಮನಸ್ತಾಪ ಉಂಟಾಗಿತ್ತು. ಸರಣಿಯ 3ನೇ ಟೆಸ್ಟ್‌ನಲ್ಲಿ ಕುಂಬ್ಳೆ ಅವರು ಕುಲದೀಪ್ ಯಾದವ್ ರನ್ನು ತಂಡಕ್ಕೆ ಸೇರಿಸಬೇಕೆಂದು ಬಯಸಿದ್ದರು. ಆದರೆ ಕೊಹ್ಲಿ ಇದನ್ನು ನಿರಾಕರಿಸಿದರು. ಧರ್ಮಶಾಲಾ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರಿಂದ ಅಜಿಂಕ್ಯ ರಹಾನೆ ತಂಡದ ನಾಯಕರಾಗಿದ್ದರು. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮಗೆ ತಿಳಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಗ್ರೇಡ್- Aಗೆ ಸೇರಿಸಿರುವುದಕ್ಕೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

5 /5

ಕುಲದೀಪ್ ಯಾದವ್‌ಗೆ ಸಂಬಂಧಿಸಿದ ಈ ವಿವಾದದಿಂದ ಕೊಹ್ಲಿ ಅವರನ್ನು ತಮ್ಮ ತಂಡದ ಪ್ಲೇಯಿಂಗ್ XI ಗೆ ಸೇರಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದರಂತೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿದ್ದಾಗ ಮತ್ತು ರವಿಶಾಸ್ತ್ರಿ ಮುಖ್ಯ ಕೋಚ್ ಆಗಿದ್ದಾಗ ಕುಲದೀಪ್ ಯಾದವ್ ವೃತ್ತಿಜೀವನ ಬಹುತೇಕ ಅಂತ್ಯವಾಗುವ ಹಂತಕ್ಕೆ ಬಂದಿತ್ತು. ಇದೀಗ ಕುಲದೀಪ್ ಯಾದವ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ದೊರೆತಿಲ್ಲ. ಹೀಗಾಗಿ ಉತ್ತಮ ಬೌಲರ್ ಎಂದು ಹೆಸರು ಮಾಡಿದ್ದ ಕುಲದೀಪ್ ಯಾದವ್ ವೃತ್ತಿಜೀವನ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.