Goa Election 2022: ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್! ನಂಬರ್ ಗೇಮ್ ನಲ್ಲಿ ಗೆಲ್ಲೋರು ಯಾರು?

Goa Election Result 2022:  ಗೋವಾದಲ್ಲಿ ಕಾಂಗ್ರೆಸ್ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಿದೆ ಎಂದು ಮೂಲಗಳು ತಿಳಿಸಿವೆ.

Written by - Chetana Devarmani | Last Updated : Mar 10, 2022, 11:49 AM IST
  • ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಿದ ಕಾಂಗ್ರೆಸ್
  • ಮತ ಎಣಿಕೆ ನಡೆಯುತ್ತಿರುವಾಗಲೇ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್
  • ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರ ಭೇಟಿಗೆ ಅಪಾಯಿಂಟ್‌ಮೆಂಟ್!
Goa Election 2022: ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ ಕಾಂಗ್ರೆಸ್! ನಂಬರ್ ಗೇಮ್ ನಲ್ಲಿ ಗೆಲ್ಲೋರು ಯಾರು?  title=
ಕಾಂಗ್ರೆಸ್

ಪಣಜಿ: ಗೋವಾದಲ್ಲಿ ಮತ ಎಣಿಕೆ (Goa Election 2022) ಆರಂಭವಾಗುವ ಮುನ್ನವೇ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಮಧ್ಯಾಹ್ನದ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಇಂದು ಬೆಳಗ್ಗೆ ಪಕ್ಷದ ನಾಯಕರು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರ ಭೇಟಿಗೆ ಅಪಾಯಿಂಟ್‌ಮೆಂಟ್ ಕೇಳಿದ್ದಾರೆ ಎಂದು ಕಾಂಗ್ರೆಸ್ (Congress) ಮೂಲಗಳು ತಿಳಿಸಿವೆ.

ಇದನ್ನೂ ಓದಿ: India vs Pakistan: ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕುರಿತಂತೆ ಬಿಗ್ ನ್ಯೂಸ್

ಬಲ್ಲ ಮೂಲಗಳ ಪ್ರಕಾರ, ಕಾಂಗ್ರೆಸ್ (Goa Election Result 2022) ಬಹುಮತ ಪಡೆಯುವ ವಿಶ್ವಾಸ ಹೊಂದಿದೆ. ಇದೆ ಕಾರಣಕ್ಕೆ ಕೈ ನಾಯಕರು ಗೋವಾ ಗದ್ದುಗೆ ಏರಲು ತಂತ್ರ ಹೆಣೆದಿದ್ದು, ಮತ ಎಣಿಕೆ ಮುಗಿಯುವ ಮುನ್ನವೇ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

2017 ರ ಗೋವಾ (Goa) ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಮೈತ್ರಿ ಮಾಡಿಕೊಳ್ಳಲು ವಿಳಂಬ ಮಾಡಿದ ಕಾರಣ ಸರ್ಕಾರವನ್ನು ರಚಿಸಲು ವಿಫಲವಾಯಿತು. ಬಿಜೆಪಿ, ಕಾಂಗ್ರೆಸ್‌ಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಸ್ವತಂತ್ರ ಶಾಸಕರು ಸೇರಿದಂತೆ ಸಣ್ಣ ಪಕ್ಷಗಳ ಬೆಂಬಲವನ್ನು ಗಳಿಸಿತು. ಈ ಮೂಲಕ ಗೋವಾದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

ಇದೇ ಕಾರಣಕ್ಕೆ ಹಳೆಯ ತಪ್ಪನ್ನು ಮರುಕಳಿಸಿದಂತೆ ಎಚ್ಚರವಹಿಸಿರುವ ಕೈ ಪಡೆ, ಹೆಚ್ಚು ಕ್ರಿಯಾಶೀಲವಾಗಿದೆ. ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಈಗಾಗಲೇ ರಾಜ್ಯಕ್ಕೆ ಕಳುಹಿಸಿದೆ. ಬಹುಮತ ಪಡೆಯುವಲ್ಲಿ ಕೆಲ ಸೀಟುಗಳು ಕಡಿಮೆಯಾದರೆ ಸಂಭವನೀಯ ಮೈತ್ರಿಗಳ ಬಗ್ಗೆ ಕೆಲಸ ಮಾಡಲು ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯ ನಾಯಕರನ್ನು ಕಳುಹಿಸಿದೆ. ನಂಬರ್ ಗೇಮ್ ನಲ್ಲಿ ಗೆಲ್ಲಲು ಸಖತ್ ತಂತ್ರ ಹೆಣೆದಿದೆ. 

ಇದನ್ನೂ ಓದಿ: Punjab Election Result 2022: ಪಂಜಾಬ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಆಮ್ ಆದ್ಮಿ ಪಕ್ಷ

ಪಕ್ಷವು ಎಂಜಿಪಿ ಮತ್ತು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವನ್ನು (AAP)  ಈಗಾಗಲೇ ತಲುಪಿದೆ ಎಂದು ಹೇಳಲಾಗುತ್ತದೆ. ಕಾಂಗ್ರೆಸ್​ ಪಕ್ಷದ ನಾಯಕರಾದ ಪಿ.ಚಿದಂಬರಂ ಹಾಗೂ ಡಿ.ಕೆ.ಶಿವಕುಮಾರ್​ ಅವರ ಮೂಲಕ ಸಂಭವನೀಯ ಮೈತ್ರಿ ಬಗ್ಗೆ ಅಗತ್ಯವಿರುವ ಮಾತುಕತೆ ಹಾಗೂ ನಿರ್ಧಾರಗಳನ್ನು ಈಗಾಗಲೇ ಕೈಗೊಂಡಿದೆ ಎನ್ನಲಾಗಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಮ್ಯಾಜಿಕ್ ಮಾರ್ಕ್‌ ತಲುಪಿ ಯಾರು ಅಧಿಕಾರ ರಚಿಸುತ್ತಾರೆ ಕಾಡು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News