Lost City - ಈಜಿಪ್ಟಿನ ಲಕ್ಸಾರ್ ನಗರದ ಪಶ್ಚಿಮ ದಂಡೆಯಲ್ಲಿ 3,000 ವರ್ಷಗಳಷ್ಟು ಹಳೆಯದಾದ (3000 Year Old City Found) ನಗರವೊಂದು ಪತ್ತೆಯಾಗಿದೆ. ನಗರ ಪತ್ತೆಯಾದಾದ ಪ್ರುರತತ್ವ ವಿಭಾಗದ ಶಾಸ್ತ್ರಜ್ಞರು ಇಲ್ಲಿ ಶವಾಗಾರವೊಂದನ್ನು ಪತ್ತೆಹಚ್ಚಲು ಹೋಗಿದ್ದರು ಎನ್ನಲಾಗಿದೆ.
ಈ ನಗರದ ಹೆಸರು ಎಟನ್ (Aten)
ಕಳೆದ ವರ್ಷ ಏಪ್ರಿಲ್ನಲ್ಲಿ ಪತ್ತೆಯಾದ ಈ ನಗರವು ಸುಮಾರು 3000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಅದರ ಹೆಸರು ಅಟೆನ್. ಕಳೆದುಹೋದ ಈ ನಗರವನ್ನು, ಟುಟಾನ್ ಖಾಮೆನ್ ಸಮಾಧಿಯ ನಂತರ ಆವಿಷ್ಕರಿಸಲಾದ ಅತ್ಯಂತ ಪ್ರಮುಖವಾದ ನಗರ ಎಂದು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ ಪರಿಗಣಿಸಲಾಗುತ್ತಿದೆ.
ಇದನ್ನೂ ಓದಿ-Russia-Ukraine War: ಪಾಶ್ಚಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪುಟಿನ್
ಈ ನಗರವು ಅತ್ಯಂತ ಶಕ್ತಿಶಾಲಿಯಾಗಿತ್ತು (World News In Kannada)
ಮಾಹಿತಿಯ ಪ್ರಕಾರ, ಒಂದು ಕಾಲದಲ್ಲಿ ಈ ನಗರ ಈಜಿಪ್ಟಿನ ಅತ್ಯಂತ ಶಕ್ತಿಶಾಲಿ ಫೇರೋ ಸಾಮ್ರಾಜ್ಯವಾಗಿತ್ತು ಎನ್ನಲಾಗಿದೆ. ಇದನ್ನು ಅಮೆನ್ಹೋಟೆಪ್ III ಸ್ಥಾಪಿಸಿದ್ದ ಎನ್ನಲಾಗುತ್ತಿದೆ, ಅವನು ಕ್ರಿಸ್ತ ಪೂರ್ವ 1391 ರಿಂದ 1353 BC ವರೆಗೆ ಈಜಿಪ್ಟ್ ಅನ್ನು ಆಳಿದ್ದನು.
ಇದನ್ನೂ ಓದಿ-Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!
ಈ ನಗರದ ಕುರಿತು ಮಾಹಿತಿ ನೀಡಿರುವ ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ (John Hopkins University) ಬೋಧಿಸುತ್ತಿರುವ ಪ್ರೊಫೆಸರ್ ಬೆಟ್ಸಿ ಬ್ರೈನ್, ಅಟೆನ್ ನಗರವು ಪುರಾತನ ಕಾಲದ ಜೀವನದ ಒಂದು ನೋಟವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಈ ಪಾಳುಬಿದ್ದ ನಗರದಲ್ಲಿ ಬಣ್ಣದ ಮಡಿಕೆಗಳು, ಆಭರಣಗಳು ಮತ್ತು ಮಣ್ಣಿನ ಇಟ್ಟಿಗೆಗಳಂತಹ ವಸ್ತುಗಳು ಪತ್ತೆಯಾಗಿವೆ.
ಇದನ್ನೂ ಓದಿ-ರಷ್ಯಾದಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್ಡೊನಾಲ್ಡ್ಸ್, ಸ್ಟಾರ್ಬಕ್ಸ್, ಕೋಕ್, ಪೆಪ್ಸಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.