ನಾಳೆ ಕಾಂಗ್ರೆಸ್ ಪಕ್ಷದಿಂದ ಪಂಚಸೋಲಿನ ಆತ್ಮಾವಲೋಕನ ಸಭೆ

ಐದು ರಾಜ್ಯಗಳಲ್ಲಿ ಹೀನಾಯ ಸೋಲನ್ನು ಕಂಡಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಾಳೆ ಸಂಜೆ ಸೇರಲಿದೆ.ಈ ಸಭೆಯಲ್ಲಿ ಪಕ್ಷದ ನಾಯಕತ್ವ ಹಾಗೂ ಮುಂದಿನಗಳಲ್ಲಿ ಪಕ್ಷದ ಕಾರ್ಯತಂತ್ರದ ಕುರಿತಾಗಿ ಚರ್ಚಿಸಲಾಗುವುದು ಎನ್ನಲಾಗಿದೆ.

Written by - Zee Kannada News Desk | Last Updated : Mar 12, 2022, 06:18 PM IST
  • ಐದು ರಾಜ್ಯಗಳಲ್ಲಿ ಹೀನಾಯ ಸೋಲನ್ನು ಕಂಡಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಾಳೆ ಸಂಜೆ ಸೇರಲಿದೆ.
  • ಈ ಸಭೆಯಲ್ಲಿ ಪಕ್ಷದ ನಾಯಕತ್ವ ಹಾಗೂ ಮುಂದಿನಗಳಲ್ಲಿ ಪಕ್ಷದ ಕಾರ್ಯತಂತ್ರದ ಕುರಿತಾಗಿ ಚರ್ಚಿಸಲಾಗುವುದು ಎನ್ನಲಾಗಿದೆ.
 ನಾಳೆ ಕಾಂಗ್ರೆಸ್ ಪಕ್ಷದಿಂದ ಪಂಚಸೋಲಿನ ಆತ್ಮಾವಲೋಕನ ಸಭೆ  title=
file photo

ನವದೆಹಲಿ: ಐದು ರಾಜ್ಯಗಳಲ್ಲಿ ಹೀನಾಯ ಸೋಲನ್ನು ಕಂಡಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಾಳೆ ಸಂಜೆ ಸೇರಲಿದೆ.ಈ ಸಭೆಯಲ್ಲಿ ಪಕ್ಷದ ನಾಯಕತ್ವ ಹಾಗೂ ಮುಂದಿನಗಳಲ್ಲಿ ಪಕ್ಷದ ಕಾರ್ಯತಂತ್ರದ ಕುರಿತಾಗಿ ಚರ್ಚಿಸಲಾಗುವುದು ಎನ್ನಲಾಗಿದೆ.

ಗುರುವಾರದಂದು ಪ್ರಕಟವಾದ ರಾಜ್ಯ ಚುನಾವಣಾ ಫಲಿತಾಂಶಗಳಲ್ಲಿ ಕಾಂಗ್ರೆಸ್ (Congress) ಐದು ರಾಜ್ಯಗಳಲ್ಲಿ ಹೀನಾಯ ಸೋಲನ್ನು ಅನುಭವಿಸುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿದೆ.ಈ ಬಾರಿ ಉತ್ತರ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪಕ್ಷದ ಸಂಘಟನೆಯನ್ನು ತೀವ್ರಗೊಳಿಸಿತ್ತು, ಆದಾಗ್ಯೂ ಕಾಂಗ್ರೆಸ್ 403 ರಲ್ಲಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ, ಜೊತೆಗೆ ಅದರ ಮತಗಳಿಕೆ ಪ್ರಮಾಣವು ಸಹಿತ ಶೇ 2.4 ಕ್ಕೆ ಕುಸಿದಿದೆ.

ಇದನ್ನೂ ಓದಿ: ಯುಪಿಯಲ್ಲಿ ಹೀನಾಯ ಸೋಲು: ಬಿಎಸ್‌ಪಿ ನಾಯಕರ ವಿರುದ್ಧ ಮಾಯಾವತಿ ಶಿಸ್ತುಕ್ರಮ!

ಈ ಹಿಂದೆ ಈಗಾಗಲೇ ಜಿ-23 ನಾಯಕರು ಪಕ್ಷದ ನಾಯಕತ್ವದ ವಿಚಾರವಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು, ಆದಾಗ್ಯೂ ಕಾಂಗ್ರೆಸ್ ಮಾತ್ರ ನಾಯಕತ್ವದ ಬದಲಾವಣೆಗೆ ಮುಂದಾಗದೆ ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಿತ್ತು, ಪಕ್ಷದ ಹೀನಾಯ ಸೋಲಿನ ನಂತರ ಕೆಲವು ಭಿನ್ನಮತೀಯರು ನಿನ್ನೆ ಸಂಜೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಸಭೆ ನಡೆಸಿದರು ಮತ್ತು ಮುಂದಿನ ಮಾರ್ಗದ ಬಗ್ಗೆ ಚರ್ಚಿಸಿದರು, ಪಕ್ಷವನ್ನು ಪುನರುಜ್ಜೀವನಗೊಳಿಸಲು ಯಾವುದೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳದ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಪ್ರಕರಣ: ಮುಂಬೈ ಪೊಲೀಸರ ಮುಂದೆ ಹಾಜರಾಗುವಂತೆ ದೇವೇಂದ್ರ ಫಡ್ನವಿಸ್ ಗೆ ಸೂಚನೆ

ಇನ್ನೊಂದೆಡೆಗೆ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬವಿಲ್ಲದೆ ಒಂದಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಗಾಂಧಿ ಕುಟುಂಬವಿಲ್ಲದೆ, ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿ ಉಳಿಯಲು ಸಾಧ್ಯವಿಲ್ಲ. ಅವರು ಕಾಂಗ್ರೆಸ್ ಪಕ್ಷದ ಒಗ್ಗಟ್ಟಿಗೆ ಪ್ರಮುಖರಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ (DK shivakumar) ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News