Aadhaar Card: ಆಧಾರ್ ಕಾರ್ಡ್ ಅನ್ನು ಲಾಕ್-ಅನ್‌ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Aadhaar Card: ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಮೂಲಕ ಆಧಾರ್ ಸಂಖ್ಯೆಯನ್ನು ಲಾಕ್ ಮತ್ತು ಅನ್ಲಾಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.

Written by - Yashaswini V | Last Updated : Mar 15, 2022, 01:59 PM IST
  • ಇಂದಿನ ಕಾಲದಲ್ಲಿ ಪ್ರತಿಯೊಂದು ಪ್ರಮುಖ ಕೆಲಸಗಳಿಗೂ ಆಧಾರ್ ಕಾರ್ಡ್ ಬಳಸಲಾಗುತ್ತಿದೆ.
  • ಇದು ಶ್ರೀಸಾಮಾನ್ಯನ ಗುರುತು.
  • ಆಧಾರ್ ಕಾರ್ಡ್ ತುಂಬಾ ಸೂಕ್ಷ್ಮವಾದ ದಾಖಲೆಯಾಗಿದೆ.
Aadhaar Card: ಆಧಾರ್ ಕಾರ್ಡ್ ಅನ್ನು ಲಾಕ್-ಅನ್‌ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ  title=
How to lock-unlock aadhaar card

Aadhaar Card: ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ ಬಹಳ ಮುಖ್ಯ. ಇಂದಿನ ಕಾಲದಲ್ಲಿ ಪ್ರತಿಯೊಂದು ಪ್ರಮುಖ ಕೆಲಸಗಳಿಗೂ ಆಧಾರ್ ಕಾರ್ಡ್ ಬಳಸಲಾಗುತ್ತಿದೆ. ಇದು ಶ್ರೀಸಾಮಾನ್ಯನ ಗುರುತು. ಆಧಾರ್ ಕಾರ್ಡ್  ತುಂಬಾ ಸೂಕ್ಷ್ಮವಾದ ದಾಖಲೆಯಾಗಿದೆ. ಹಾಗಾಗಿಯೇ ಇದು ವಂಚಕರ ಕೈಗೆ ಸಿಕ್ಕರೆ ಮಾಹಿತಿ ಸೋರಿಕೆಯಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. 

ನಿಮ್ಮ ಆಧಾರ್ ಕಾರ್ಡ್ (Aadhaar Card) ಎಲ್ಲೋ ಕಳೆದುಹೋಗಿದೆ ಮತ್ತು ಅದನ್ನು ಬೇರೆ ಯಾರಾದರೂ ತಪ್ಪಾಗಿ ಬಳಸಬಹುದು ಎಂದು ನೀವು ಭಾವಿಸಿದರೆ, ನೀವು ಅದನ್ನು ಲಾಕ್ ಮಾಡಬಹುದು. ಆಧಾರ್ ಕಾರ್ಡ್ ಹೊಂದಿರುವವರಿಗೆ UIDAI ಮೂಲಕ ಆಧಾರ್ ಸಂಖ್ಯೆಯನ್ನು ಲಾಕ್ ಮತ್ತು ಅನ್ಲಾಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ. ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಲು ಬಯಸಿದರೆ,  ಮೊದಲು ನೀವು ವರ್ಚುವಲ್ ಐಡಿಯನ್ನು ರಚಿಸಬೇಕು. ಏಕೆಂದರೆ ಆಧಾರ್ ಕಾರ್ಡ್ ಲಾಕ್ ಆದ ನಂತರ, KYC ಗೆ ಸಂಬಂಧಿಸಿದ ಕೆಲಸಕ್ಕಾಗಿ ನಿಮಗೆ ವರ್ಚುವಲ್ ಆಧಾರ್ ಸಂಖ್ಯೆ ಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಹೇಗೆ ಲಾಕ್ - ಅನ್‌ಲಾಕ್ ಮಾಡಬಹುದು ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ- UIDAI ಹೊಸ ನಿಯಮ : ವಿಳಾಸ ಪುರಾವೆ ಇಲ್ಲದೆಯೂ Aadhaar Card ಪಡೆಯಬಹುದು! 

ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಹೇಗೆ?
1. ಇದಕ್ಕಾಗಿ, ಮೊದಲು ನೀವು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು, ಇಲ್ಲಿ ಲಾಗ್ ಇನ್ ಆಗಬೇಕು.
2. ಇದರ ನಂತರ ನೀವು 'ಆಧಾರ್ ಸೇವೆಗಳು' ಆಯ್ಕೆಯನ್ನು ನೋಡುತ್ತೀರಿ,  'ಆಧಾರ್ ಸೇವೆಗಳಲ್ಲಿ' ಲಾಕ್/ಅನ್ಲಾಕ್ ಬಯೋಮೆಟ್ರಿಕ್ಸ್ ಆಯ್ಕೆಯನ್ನು ಆರಿಸಿ.
3. ಈಗ ಇಲ್ಲಿ ನೀವು 12 ಅಂಕಿಗಳ ಆಧಾರ್ ಸಂಖ್ಯೆ ಅಥವಾ 16 ಅಂಕಿಯ ವರ್ಚುವಲ್ ಐಡಿಯನ್ನು ನಮೂದಿಸಬೇಕು.
4. ನಂತರ ಸೆಂಡ್ ಓಟಿಪಿ ವಿತ್ ಕ್ಯಾಪ್ಚಾ ಕೋಡ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಒಟಿಪಿಯನ್ನು ಪಡೆಯುತ್ತೀರಿ.
5. ಈ ಒಟಿಪಿಯನ್ನು ನಮೂದಿಸಿದಾಗ, ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಇರುತ್ತದೆ. ಲಾಕ್ ಅನ್ನು ಕ್ಲಿಕ್ ಮಾಡುವ ಮೂಲಕ, ನಿಮ್ಮ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಬಹುದು.

ಇದನ್ನೂ ಓದಿ- Aadhaar Card: ಮಿಸ್ ಆಗಿ ಕೂಡ ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಆಧಾರ್ ಕಾರ್ಡ್ ಅನ್ನು ಅನ್ಲಾಕ್ ಮಾಡುವುದು ಹೇಗೆ?
ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದ ಹಂತಗಳನ್ನು ಅನುಸರಿಸುವ ಮೂಲಕ, ನೀವು ಅದನ್ನು ಅದೇ ರೀತಿಯಲ್ಲಿ ಅನ್ಲಾಕ್ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News