ಸೂರತ್: ಶನಿವಾರದಂದು ಪಾಂಡಿಸೆರಾ ಪ್ರದೇಶದ ಕಟ್ಟಡವೊಂದರಲ್ಲಿ ಸ್ಫೋಟ ಸಂಭವಿಸಿ ಸುಮಾರು 35 ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ.
ಇಲ್ಲಿನ ಶಾಲು ಡೈಯಿಂಗ್ ಮಿಲ್ ನಲ್ಲಿ ಕೊಳವೆಯ ಮೇಲೆ ಚಪ್ಪಡಿ ಬಿದ್ದ ನಂತರ ಆಯಿಲ್ ಸೋರಿಕೆಯಿಂದಾಗಿ ಸ್ಪೋಟಗೊಂಡಿದೆ ಎಂದು ತಿಳಿದುಬಂದಿದೆ.ಬೆಂಕಿ ಹತ್ತಿಕೊಂಡ ನಂತರ ತಕ್ಷಣ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂಧಿಯು ಅಲ್ಲಿರುವ ಜನರನ್ನು ರಕ್ಷಿಸಿ ಸೂರತ್ ನಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡವರಲ್ಲಿ, ಮೂವರು ಕೆಲಸಗಾರರು ಗಂಭೀರ್ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.