Harmful Fruit Combination : ಬಾಳೆ ಹಣ್ಣಿನ ಜೊತೆ ತಪ್ಪಿಯೂ ಈ ಹಣ್ಣನ್ನು ಸೇವಿಸಬೇಡಿ..! ಎದುರಿಸಬೇಕಾಗುತ್ತದೆ ಆರೋಗ್ಯ ಸಮಸ್ಯೆ

Harmful Fruit Combination ಬೇರೆ ಬೇರೆ ಸ್ವಭಾವದ ಎರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸಿದರೆ, ನೀವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಪ್ರತಿಯೊಂದು ಹಣ್ಣುಗಳು ವಿಭಿನ್ನ ಪರಿಣಾಮವನ್ನು ಬೀರುತ್ತವೆ. 

Written by - Ranjitha R K | Last Updated : Mar 31, 2022, 04:12 PM IST
  • ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು
  • ಬಾಳೆಹಣ್ಣಿನೊಂದಿಗೆ ಪಪ್ಪಾಯಿಯನ್ನು ಎಂದಿಗೂ ತಿನ್ನಬೇಡಿ
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
Harmful Fruit Combination : ಬಾಳೆ ಹಣ್ಣಿನ ಜೊತೆ ತಪ್ಪಿಯೂ ಈ ಹಣ್ಣನ್ನು ಸೇವಿಸಬೇಡಿ..! ಎದುರಿಸಬೇಕಾಗುತ್ತದೆ ಆರೋಗ್ಯ ಸಮಸ್ಯೆ  title=
Harmful Fruit Combination (file photo)

ಬೆಂಗಳೂರು :Harmful Fruit Combination: ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಆಯುರ್ವೇದವು ಬಾಳೆಹಣ್ಣಿನ ಜೊತೆಗೆ ಕೆಲವು ಹಣ್ಣುಗಳನ್ನು ತಿನ್ನುವುದನ್ನು ನಿಷೇಧಿಸಿದೆ. . ಆದ್ದರಿಂದ, ವಿಭಿನ್ನ ಸ್ವಭಾವದ ಎರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸಿದರೆ, ನೀವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. 

ಬಾಳೆಹಣ್ಣಿನೊಂದಿಗೆ ಪಪ್ಪಾಯಿಯನ್ನು ಎಂದಿಗೂ ತಿನ್ನಬಾರದು : 
ಬಾಳೆಹಣ್ಣಿನ ಸೇವನೆ ಹೃದಯ ಮತ್ತು ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ (Benefits of Banana). ಪಪ್ಪಾಯಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಎರಡೂ ಹಣ್ಣುಗಳ ಪರಿಣಾಮವು ವಿಭಿನ್ನವಾಗಿದೆ (Harmful Fruit Combination). ಆಯುರ್ವೇದದಲ್ಲಿ ಇವುಗಳನ್ನು ಒಟ್ಟಿಗೆ ಸೇವಿಸುವುದನ್ನು ನಿಷೇಧಿಸಲಾಗಿದೆ. ಬಾಳೆಹಣ್ಣಿನ ಪ್ರಕೃತಿ ತಣ್ಣಗಾಗಿದ್ದರೆ, ಪಪ್ಪಾಯಿಯ ಪರಿಣಾಮ ಉಷ್ಣವಾಗಿರುತ್ತದೆ. ಇದರಿಂದಾಗಿ ಕಳಪೆ ಜೀರ್ಣಕ್ರಿಯೆ, ಅಜೀರ್ಣ, ವಾಂತಿ, ತಲೆನೋವು, ವಾಕರಿಕೆ, ಗ್ಯಾಸ್, ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು.

ಇದನ್ನೂ ಓದಿ : Diabetes : ಯುವಕರನ್ನು ಬಲಿಪಶು ಮಾಡುತ್ತಿದೆ 'ಮಧುಮೇಹ' : 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಆತಂಕ

ಯಾರು ಪಪ್ಪಾಯ ತಿನ್ನಬಾರದು ? : 
1. ಅನೇಕ ಸಂಶೋಧನೆಗಳ ಪ್ರಕಾರ, ಅಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆಗಳ ರೋಗಿಗಳು ಪಪ್ಪಾಯಿ ತಿನ್ನುವುದರಿಂದ ಅಲರ್ಜಿಯನ್ನು ಎದುರಿಸಬೇಕಾಗುತ್ತದೆ ( Side effects of Papaya).   ಇದಲ್ಲದೆ, ಮೊಡವೆ ಮತ್ತು ತುರಿಕೆ ಸಮಸ್ಯೆಗಳೂ ಇರಬಹುದು. ಆದ್ದರಿಂದ, ಪಪ್ಪಾಯಿಯನ್ನು ಸೇವಿಸುವ ಮೊದಲು, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

2. ಗರ್ಭಿಣಿಯರು ಪಪ್ಪಾಯಿಯನ್ನು ತಿನ್ನಬಾರದು. ಏಕೆಂದರೆ, ಅದರ ಪರಿಣಾಮವು ಉಷ್ಣವಾಗಿದ್ದು, ಭ್ರೂಣಕ್ಕೆ ಹಾನಿ ಮಾಡುತ್ತದೆ.

3. ಪಪ್ಪಾಯಿಯಲ್ಲಿರುವ ನಾರಿನಂಶವು ಮಲಬದ್ಧತೆಯಿಂದ (Constipation) ಪರಿಹಾರವನ್ನು ನೀಡುತ್ತದೆ ನಿಜ. ಆದರೆ, ಹೆಚ್ಚು ಫೈಬರ್ ತಿನ್ನುವುದು ಕೂಡಾ ಮಲಬದ್ಧತೆಗೆ ಕಾರಣವಾಗಬಹುದು.

ಇದನ್ನೂ ಓದಿ : Diabetes: ಮಧುಮೇಹ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಸೇವಿಸಿರಿ

4. ನೀವು ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಪಪ್ಪಾಯಿಯನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಏಕೆಂದರೆ ಪಪ್ಪಾಯಿ ರಕ್ತ ತೆಳುವಾಗುವಂತೆಯೂ ಕೆಲಸ ಮಾಡುತ್ತದೆ. ಈ ಕಾರಣದಿಂದಾಗಿ ಗಂಭೀರ ಸಮಸ್ಯೆಯನ್ನು ಎದುರಿಸಬಹುದು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪ್ರಿಸ್ಕ್ರಿಪ್ಷನ್‌ಗಳನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News