ನವದೆಹಲಿ: ಬದಲಾದ ಜೀವನಶೈಲಿಯಿಂದಾಗಿ ಇಂದು ಅನೇಕರು ಮಲಬದ್ಧತೆ(Constipation) ಸಮಸ್ಯೆಯಿಂದ ಬಳಲುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನೇಕ ರೀತಿ ಸರ್ಕಸ್ ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಮಲಬದ್ಧತೆ ಸಮಸ್ಯೆಗೆ ಮುಕ್ತಿ ನೀಡಲು ನಾವು ನಿಮಗೆ ಉತ್ತಮ ಸಲಹೆ ನೀಡುತ್ತಿದ್ದೇವೆ. ಒಂದು ಒಂದು ಬೀಜವು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಹೌದು, ಅಗಸೆ ಬೀಜವು ಮಲಬದ್ಧತೆ(Constipation)ಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಕೆಲವೇ ಜನರಿಗೆ ಈ ಬೀಜದ ಉಪಯೋಗ ತಿಳಿದಿದೆ. ಔಷಧಿಯ ಗುಣಗಳನ್ನು ಹೊಂದಿರುವ ಅಗಸೆ ಬೀಜಗಳು ಅನೇಕ ರೋಗಗಳಿಗೆ ರಾಮಬಾಣ. ಈ ಬೀಜವು ಫೈಬರ್ನಲ್ಲಿ ಸಮೃದ್ಧವಾಗಿದೆ. ಅಗಸೆ ಬೀಜಗಳ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.
ಇದನ್ನೂ ಓದಿ: Weight Loss Tips: ಕೇವಲ 3 ತಿಂಗಳಿನಲ್ಲಿ ಹೊಟ್ಟೆ ಕರಗಿಸಲು ಸಿಂಪಲ್ ಟಿಪ್ಸ್
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ
ನಾವು ಸೇವಿಸುವ ಅನಾರೋಗ್ಯಕರ ಆಹಾರದಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಎಲ್ಲಾ ವಯೋಮಾನದವರಲ್ಲಿ ಒಂದು ರೋಗವಾಗುತ್ತಿದೆ. ಮಲಬದ್ಧತೆಯಿಂದಾಗಿ ಮುಖದ ಮೇಲೆ ಮೊಡವೆ, ಪೈಲ್ಸ್ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಗಸೆ ಬೀಜಗಳು(Flaxseed Seeds Benefits) ಮಲಬದ್ಧತೆಗೆ ಪರಿಹಾರವನ್ನು ನೀಡುತ್ತದೆ.
ಹೊಟ್ಟೆಯ ಊತವನ್ನು ಸಹ ಕಡಿಮೆ ಮಾಡುತ್ತದೆ
ವರದಿಗಳ ಪ್ರಕಾರ ಅಗಸೆ ಬೀಜ(Flaxseed Seeds)ದಲ್ಲಿರುವ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯೂ ಸರಿಯಾಗುತ್ತದೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ನಿಮ್ಮ ಆಹಾರದಲ್ಲಿ ಅಗಸೆಬೀಜವನ್ನು ಸೇರಿಸಿಕೊಳ್ಳಬೇಕು. ಅಗಸೆಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇದು ಕರುಳಿನ ಉರಿಯೂತ ಸೇರಿದಂತೆ ಅನೇಕ ಕಾಯಿಲೆ(Flaxseed Seeds Health Benefits)ಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Boiled Potato Health Benefits: ಆಲೂಗಡ್ಡೆಯನ್ನು ಈ ರೀತಿ ಬಳಸಿದರೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತೆ ತೂಕ
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.