ಮಂಡ್ಯದ ವಿದ್ಯಾರ್ಥಿನಿಯನ್ನು ಉಗ್ರ ಹೊಗಳಿರುವ ವಿಚಾರ; ಸಮಗ್ರ ತನಿಖೆಗೆ ದಿವ್ಯಾ ಹಾಗರಗಿ ಒತ್ತಾಯ

ಈ ಬೆಳವಣಿಗೆಯ ನಂತರ  ವಿದ್ಯಾರ್ಥಿನಿ ಜೊತೆಗೆ ಪಾಕಿಸ್ತಾನದ ಉಗ್ರರು ನಂಟು ಹೊಂದಿರುವ ಅನುಮಾನ ಕಾಡುತ್ತಿದೆ ಎಂದು ಹಿಂದೂಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಆರೋಪಿಸಿದ್ದಾರೆ. 

Written by - Zee Kannada News Desk | Last Updated : Apr 7, 2022, 10:02 AM IST
  • ವಿದ್ಯಾರ್ಥಿನಿಯ ತನಿಖೆ ಆಗ್ರಹ
  • ಸಮಗ್ರ ತನಿಖೆಗೆ ಹಿಂದೂಪರ ಕಾರ್ಯಕರ್ತೆ ಒತ್ತಾಯ
  • ವಿದ್ಯಾರ್ಥಿನಿಯನ್ನು ಹೊಗಳಿ ವಿಡಿಯೋ ಮಾಡಿದ್ದ ಉಗ್ರ
ಮಂಡ್ಯದ ವಿದ್ಯಾರ್ಥಿನಿಯನ್ನು ಉಗ್ರ ಹೊಗಳಿರುವ ವಿಚಾರ; ಸಮಗ್ರ ತನಿಖೆಗೆ  ದಿವ್ಯಾ ಹಾಗರಗಿ ಒತ್ತಾಯ    title=
Divaya Hagaragi

ಕಲಬುರ್ಗಿ : ಹಿಜಾಬ್ ವಿವಾದದ (Hijab Contraversy)ವೇಳೆ ಮಂಡ್ಯದಲ್ಲಿ ಅಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಯನ್ನು ಹೊಗಳಿ ಅಲ್ ಖೈದಾ ಉಗ್ರನೊಬ್ಬ ನಿನ್ನೆ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಈ ಬೆಳವಣಿಗೆಯ ನಂತರ  ವಿದ್ಯಾರ್ಥಿನಿ ಜೊತೆಗೆ ಪಾಕಿಸ್ತಾನದ ಉಗ್ರರು ನಂಟು ಹೊಂದಿರುವ ಅನುಮಾನ ಕಾಡುತ್ತಿದೆ ಎಂದು ಹಿಂದೂಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಆರೋಪಿಸಿದ್ದಾರೆ. ವಿದ್ಯಾರ್ಥಿನಿಯನ್ನು ರಾಜ್ಯ ಮತ್ತು ಕೇಂದ್ರ ಗೃಹ ಇಲಾಖೆ ವಶಕ್ಕೆ ಪಡೆದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 

ಮಂಡ್ಯದ ವಿದ್ಯಾರ್ಥಿನಿಯನ್ನು (Mandya Student) ಉಗ್ರ ಜವಹಾರಿ ಹೊಗಳಿರುವ ವಿಚಾರದ ಬಗ್ಗೆ ಹಿಂದುಪರ ಕಾರ್ಯಕರ್ತೆ ದಿವ್ಯಾ ಹಾಗರಗಿ  (Divya Hagaragi)ಮಾತನಾಡಿದ್ದಾರೆ. ವಿದ್ಯಾರ್ಥಿನಿ ಜೊತೆಗೆ ಪಾಕಿಸ್ತಾನದ ಉಗ್ರರು ನಂಟು ಹೊಂದಿರುವ ಬಗ್ಗೆ ಅನುಮಾನ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಉಗ್ರರ ಜೊತೆ ವಿದ್ಯಾರ್ಥಿನಿ ಲಿಂಕ್ ಇದೆಯಾ ಅನ್ನೋ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಇದನ್ನೂ ಓದಿ : "ಉರ್ದು ಭಾಷೆಯಲ್ಲಿ ಮಾತನಾಡದಕ್ಕೆ ಚಂದ್ರು ಕೊಲೆ" : ಎನ್. ರವಿಕುಮಾರ್

ರಾಜ್ಯ ಮತ್ತು ಕೇಂದ್ರ ಗೃಹ ಇಲಾಖೆಯವರು ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆಯಬೇಕು ಎಂದು ದಿವ್ಯಾ ಹಾಗರಗಿ ಒತ್ತಾಯಿಸಿದ್ದಾರೆ. ವಿಚಾರಣೆ ಮುಗಿಯುವವರೆಗೆ ವಿದ್ಯಾರ್ಥಿನಿಯನ್ನು ಹೊರಗೆ  ಬಿಡಬಾರದು ಎಂದಿದ್ದಾರೆ. ಒಂದು ವೇಳೆ ಉಗ್ರರ (Terror)ಸಂಪರ್ಕ ಇದ್ದರೆ, ಆಕೆಯನ್ನು ಪಾಕಿಸ್ತಾನಕ್ಕೆ ಬಿಟ್ಟು ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ವಿದ್ಯಾರ್ಥಿನಿಯನ್ನು ಶ್ಲಾಘಿಸುವ 9 ನಿಮಿಷಗಳ ವೀಡಿಯೊವನ್ನು ಜವಾಹಿರಿ ಬಿಡುಗಡೆ ಮಾಡಿದ್ದ. ಅಲ್ಲದೆ ಈ ವಿಡಿಯೋದಲ್ಲಿ ವಿದ್ಯಾರ್ಥಿನಿಯನ್ನು ನೋಬಲ್ ವುಮೆನ್ ಆಫ್ ಇಂಡಿಯಾ ಎಂದು ಕರೆದಿದ್ದ. 

ಇದನ್ನೂ ಓದಿ : Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News