Blood Pressure Control Tips: ಬೆಳಗಿನ ಉಪಹಾರದಲ್ಲಿ ಇವುಗಳನ್ನು ಶಾಮೀಲುಗೊಳಿಸಿ, BP ನಿಯಂತ್ರಣದಲ್ಲಿರುತ್ತದೆ

Blood Pressure Control Tips: ಸಾಮಾನ್ಯವಾಗಿ, ರಕ್ತದೊತ್ತಡದ ಮೇಲೆ ಶಾಖ ಹೆಚ್ಚು ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಬೆಳಗಿನ ಉಪಹಾರದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವ ಹಣ್ಣುಗಳನ್ನು ಶಾಮೀಲುಗೊಳಿಸಬೇಕು.  

Written by - Nitin Tabib | Last Updated : Apr 12, 2022, 09:34 PM IST
  • ಬೇಸಿಗೆಯಲ್ಲಿ ಬಿಪಿ ದೊಡ್ಡ ಸಮಸ್ಯೆ
  • ಬೆಳಗಿನ ಉಪಾಹಾರದಲ್ಲಿ ಈ ಹಣ್ಣುಗಳನ್ನು ಸೇವಿಸಿ
  • ಸೇಬು ಮತ್ತು ಬಾಳೆಹಣ್ಣಿನಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
Blood Pressure Control Tips: ಬೆಳಗಿನ ಉಪಹಾರದಲ್ಲಿ ಇವುಗಳನ್ನು ಶಾಮೀಲುಗೊಳಿಸಿ, BP ನಿಯಂತ್ರಣದಲ್ಲಿರುತ್ತದೆ title=
BP and Hypertension Control Food

ನವದೆಹಲಿ: Fruits To Control Blood Pressure - ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ರಕ್ತದೊತ್ತಡ ಸಮಸ್ಯೆ. ವಾಸ್ತವದಲ್ಲಿ, ಬೇಸಿಗೆಯ ದಿನಗಳಲ್ಲಿ ತಾಪಮಾನವು ವೇಗವಾಗಿ ಹೆಚ್ಚಾಗಲು ಆರಂಭಿಸುತ್ತದೆ, ಇದು ರಕ್ತದೊತ್ತಡದ (Blood Pressure) ರೋಗಿಗಳ ಮೇಲೂ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ ಅಥವಾ ಅಧಿಕ ಬ್ಲಡ್ ಪ್ರೆಶರ್ (High BP) ಅಂತಹದ್ದೊಂದು ಕಾಯಿಲೆಯಾಗಿದೆ, ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕೂಡ ಕರೆಯಲಾಗುತ್ತದೆ. ಈ ಸಮಸ್ಯೆ ಇರುವಿಕೆ ಮತ್ತು ಹೆಚ್ಚಳ ಎರಡೂ ಆರೋಗ್ಯಕ್ಕೆ (Health Tips) ಮಾರಕ. ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಈ ರೋಗವು ಜನರನ್ನು ಆವರಿಸುತ್ತದೆ.

ಬೇಸಿಗೆಯಲ್ಲಿ ಬಿಪಿ ಸಮಸ್ಯೆ ಹೆಚ್ಚು
ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ, ಇದರಿಂದಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವಿರುತ್ತದೆ. ಅಷ್ಟೇ ಅಲ್ಲ, ಅಧಿಕ ಬಿಪಿಯಿಂದ ಅನೇಕರು ಸಾವನ್ನಪ್ಪುವ ಸಾಧ್ಯತೆ ಕೂಡ ಇರುತ್ತದೆ. ಹಾಗಾದರೆ ನೀವು ಬೇಸಿಗೆಯ ಉಪಹಾರದಲ್ಲಿ ಯಾವ ಹಣ್ಣುಗಳನ್ನು ಸೇರಿಸಿ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇದನ್ನೂ ಓದಿ-ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಈ 4 ಡ್ರೈಫ್ರೂಟ್ ಗಳನ್ನು ಸೇವಿಸಿ

ಬೆಳಗಿನ ಉಪಾಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ (Blood Pessure Control Food)
>> ಮೊದಲನೆಯದಾಗಿ, ನೀವು ಹಣ್ಣುಗಳಲ್ಲಿ ಸೇಬು ಅಥವಾ ಬಾಳೆಹಣ್ಣು ತಿನ್ನಬಹುದು. ಈ ಎರಡು ಹಣ್ಣುಗಳನ್ನು ಪರಸ್ಪರ ಬದಾಯಿಸುವ ಮೂಲಕ ಆಹಾರದಲ್ಲಿ ಸೇರಿಸಬಹುದು. ಉದಾಹರಣೆಗೆ, ನೀವು ಮೂರು ದಿನಗಳವರೆಗೆ ಸೇಬು ಮತ್ತು ಮುಂದಿನ ಮೂರು ದಿನಗಳವರೆಗೆ ಬಾಳೆಹಣ್ಣುಗಳನ್ನು ಸೇವಿಸಬಹುದು. ಇದು ನಿಮ್ಮ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ-Mumbaiನ ಸಾಂತಾಕ್ರೂಸ್ ನಲ್ಲಿ Corona XE ವೇರಿಯಂಟ್ ನ ಎರಡನೇ ಪ್ರಕರಣ ಪತ್ತೆ

>> ಇದಲ್ಲದೇ ಬಿಪಿಯನ್ನು ನಿಯಂತ್ರಿಸಲು ಆಮ್ಲಾ ಕೂಡ ತುಂಬಾ ಸಹಕಾರಿಯಾಗಿದೆ. ನೀವು ಯಾವು ರೂಪದಲ್ಲಿ ಬೇಕಾದರೂ ಆಮ್ಲಾವನ್ನು ಸೇವಿಸಬಹುದು. ನೀವು ಬೆಳಗ್ಗೆ ಹೊತ್ತು ಆಮ್ಲಾವನ್ನು ಸೇವಿಸಿದರೆ, ಅದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ನ್ಯೂಸ್ ಕನ್ನಡ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News