ಕೀವ್‌, ಲುವಿಬ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಉಕ್ರೇನ್‌ನ ಲುವಿವ್‌ ಮತ್ತು ಕೀವ್‌ ನಗರಗಳ ಮೇಲೆ ರಷ್ಯಾ ಯುದ್ಧ ವಿಮಾನಗಳು ಬಾಂಬ್‌ ಮತ್ತು ಕ್ಷಿಪಣಿಗಳ ದಾಳಿ ನಡೆಸಿವೆ. ಉಕ್ರೇನ್‌ ರಾಜಧಾನಿ ಕೀವ್‌ ಬಳಿ ಇರುವ ಯುದ್ಧ ಟ್ಯಾಂಕ್‌ ದುರಸ್ತಿ ಘಟಕ, ಶಸ್ತಾಸ್ತ್ರ ವಾಹನ ತಯಾರಿಕೆ, ಸೇನಾ ಸಲಕರಣೆಗಳ ಕಾರ್ಖಾನೆಯನ್ನು ಸಹ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿದೆ.  

Written by - Bhavishya Shetty | Last Updated : Apr 17, 2022, 02:00 PM IST
  • ಲುವಿವ್‌ ಮತ್ತು ಕೀವ್‌ ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ
  • ಕೀವ್‌ ನಗರದಲ್ಲಿ 900ಕ್ಕೂ ಅಧಿಕ ಶವಗಳು ಪತ್ತೆ
  • ಕಾರ್ಯಾಚರಣೆ ನಡೆಸುತ್ತಿರುವ ಪ್ರಾದೇಶಿಕ ಪೊಲೀಸ್‌ ಪಡೆಗಳು
ಕೀವ್‌, ಲುವಿಬ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ title=
Ukraine Crisis

ಉಕ್ರೇನ್‌: ರಷ್ಯಾ ಮತ್ತು ಉಕ್ರೇನ್‌ ರಾಷ್ಟ್ರಗಳ ಯುದ್ಧ ಪ್ರಾರಂಭವಾಗಿ ಅನೇಕ ದಿನಗಳಾಗುತ್ತಾ ಬಂದಿದೆ. ಇತ್ತೀಚೆಗೆ ರಷ್ಯಾವು ತನ್ನ ಕಪ್ಪು ಸಮುದ್ರದ ನೌಕಾಬಲದ ಸಮರ ನೌಕೆ ‘ಮಾಸ್ಕವಾ’ವನ್ನು ಕಳೆದುಕೊಂಡ ನಂತರ ರಷ್ಯಾದ ವಾಯುಪಡೆ ಮತ್ತು ಭೂಸೇನಾ ಪಡೆಗಳು ಪ್ರತೀಕಾರವಾಗಿ ಉಕ್ರೇನ್‌ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ.  

ಇದನ್ನು ಓದಿ: ಕೀವ್‌ನಲ್ಲಿ 900ಕ್ಕೂ ಅಧಿಕ ನಾಗರಿಕರ ಮೃತದೇಹ ಪತ್ತೆ!

ಉಕ್ರೇನ್‌ನ ಲುವಿವ್‌ ಮತ್ತು ಕೀವ್‌ ನಗರಗಳ ಮೇಲೆ ರಷ್ಯಾ ಯುದ್ಧ ವಿಮಾನಗಳು ಬಾಂಬ್‌ ಮತ್ತು ಕ್ಷಿಪಣಿಗಳ ದಾಳಿ ನಡೆಸಿವೆ. ಉಕ್ರೇನ್‌ ರಾಜಧಾನಿ ಕೀವ್‌ ಬಳಿ ಇರುವ ಯುದ್ಧ ಟ್ಯಾಂಕ್‌ ದುರಸ್ತಿ ಘಟಕ, ಶಸ್ತಾಸ್ತ್ರ ವಾಹನ ತಯಾರಿಕೆ, ಸೇನಾ ಸಲಕರಣೆಗಳ ಕಾರ್ಖಾನೆಯನ್ನು ಸಹ ರಷ್ಯಾ ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿದೆ.  

900ಕ್ಕೂ ಅಧಿಕ ಶವಗಳು ಪತ್ತೆ: 
ಇನ್ನು ರಷ್ಯಾ ನಡೆಸಿದ ದಾಳಿಯಲ್ಲಿ ಅದೆಷ್ಟೋ ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಇದೀಗ ಕೀವ್‌ನಲ್ಲಿ ಸುಮಾರು 900 ಜನರ ಮೃತದೇಹಗಳು ಪತ್ತೆಯಾಗಿದೆ ಎಂದು ಪ್ರಾದೇಶಿಕ ಪೊಲೀಸ್‌ ಪಡೆಗಳು ಮಾಹಿತಿ ನೀಡಿದೆ. ಬಹುತೇಕ ಶವಗಳ ಮೇಲೆ ಗುಂಡಿನೇಟಿನ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದೇಶಿಕ ಪೊಲೀಸ್‌ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ. 

ಇದನ್ನು ಓದಿ: ₹ 140 ಮಿಲಿಯನ್‌ ಗೂ ಅಧಿಕ ಮೊತ್ತದ 58 ಗಿಫ್ಟ್ ಗಳನ್ನು ಹಾಗೆ ಉಳಿಸಿಕೊಂಡ ಇಮ್ರಾನ್ ಖಾನ್..!

ಮೂರು ಸಾವಿರಕ್ಕೂ ಅಧಿಕ ಸಾವು: 
ರಷ್ಯಾ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ ಸುಮಾರು ಉಕ್ರೇನ್‌ನ 3000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ರಷ್ಯಾವನ್ನು ಉಕ್ರೇನ್‌ ನಾಶಪಡಿಸುವ ಉದ್ದೇಶ ಹೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ಆರೋಪಿಸಿದ್ದಾರೆ. ಪೂರ್ವದ ಲುಗಾನ್ಸ್ಕ್‌ ವಲಯದಲ್ಲಿ ಇಬ್ಬರು , ಡೊನೆಟ್ಸ್ಕ್ ವಲಯದಲ್ಲಿ ಮೂವರು ಮೃತಪಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News