ನವದೆಹಲಿ: ನವದೆಹಲಿ: ಭಾರತವು ಮಹಿಳೆಯರಿಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಇತ್ತೀಚೆಗಿನ ಸಮೀಕ್ಷೆಯಿಂದ ತಿಳಿದುಬಂದಿತ್ತು. ಆದರೆ ಈ ವರದಿಯನ್ನು ಮಹಿಳಾ ರಾಷ್ಟ್ರೀಯ ಆಯೋಗ ಮುಖ್ಯಸ್ಥೆ ರೇಖಾ ಶರ್ಮಾ ಬುಧವಾರದಂದು ತಿರಸ್ಕರಿಸಿದ್ದಾರೆ.
ANI ಗೆ ಮಾತನಾಡುತ್ತಾ ತಿಳಿಸಿದ ಮಹಿಳಾ ರಾಷ್ಟ್ರೀಯ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ "ನಾನು ಈ ಸಮೀಕ್ಷೆಯಲ್ಲಿ ನಂಬುವುದಿಲ್ಲ, ಏಕೆಂದರೆ ಅವರು ಕೇವಲ 25 ಮಹಿಳೆಯರನ್ನು ಪ್ರಶ್ನಿಸಿದ್ದಾರೆ ಮತ್ತು ಅಂತಹ ಕಡಿಮೆ ಸಂಖ್ಯೆ ಇಡೀ ಸಮಾಜವನ್ನು ಪ್ರತಿನಿಧಿಸಲಾರದು. ನಿಜ ಎಫ್ಐಆರ್ ಗಳ ಸಂಖ್ಯೆ ಹೆಚ್ಚಾಗಿವೆ ಮತ್ತು ಮಾಧ್ಯಮಗಳು ಈ ಸಮಸ್ಯೆಗಳನ್ನು ಸಕ್ರಿಯವಾಗಿ ತೆಗೆದುಕೊಳ್ಳುತ್ತಿದೆ.ನಾವು ಪಟ್ಟಿಯಲ್ಲಿ ಖಂಡಿತವಾಗಿಯೂ ಅಗ್ರಸ್ಥಾನದಲ್ಲಿಲ್ಲ ಮತ್ತು ಈ ಸಮೀಕ್ಷೆಯು ದೋಷಪೂರಿತವಾಗಿದೆ, ಎಂದು ತಿಳಿಸಿದರು.
ಮಂಗಳವಾರ ಬಿಡುಗಡೆಯಾದ UK- ಆಧಾರಿತ ವರದಿಯ ಪ್ರಕಾರ,ಲೈಂಗಿಕ ಗುಲಾಮಗಿರಿ ಮತ್ತು ದೇಶೀಯ ಮಾನವ ಕಳ್ಳಸಾಗಣೆ ವಿಷಯದಲ್ಲಿ ಮಹಿಳೆಯರಿಗೆ ಭಾರತವು ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ ಎಂದು ವರದಿ ಮಾಡಿತ್ತು.