ಒಡಿಸ್ಸಾ ಮತ್ತು ಕರ್ನಾಟಕದಲ್ಲಿ ಪೆಟ್ರೋಲಿಯಂ ಸಂಗ್ರಹಗಾರ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು

      

Last Updated : Jun 27, 2018, 08:41 PM IST
 ಒಡಿಸ್ಸಾ ಮತ್ತು ಕರ್ನಾಟಕದಲ್ಲಿ ಪೆಟ್ರೋಲಿಯಂ ಸಂಗ್ರಹಗಾರ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು title=

ನವದೆಹಲಿ: ಒಡಿಶಾ ಮತ್ತು ಕರ್ನಾಟಕದಲ್ಲಿ ಹೆಚ್ಚುವರಿ 6.5 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಸ್ಟ್ರಾಟೆಜಿಕ್ ಪೆಟ್ರೋಲಿಯಂ ಸಂಗ್ರಹಗಾರ ನಿರ್ಮಿಸುವ ಪ್ರಸ್ತಾವನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಒಡಿಶಾದ ಚಂಡಿಖೋಲ್ ಮತ್ತು ಕರ್ನಾಟಕದ ಪಡುರ್(ಉಡುಪಿ)  ಪೆಟ್ರೋಲಿಯಂ ಸಂಗ್ರಹಗಾರಾಗಳನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ.ಚಂಡಿಕೋಲ್ ಮತ್ತು ಪಡುರ್ ನಲ್ಲಿನ ಎಸ್ಪಿಆರ್ ಸೌಲಭ್ಯಗಳು ಭೂಗತವಾಗಿ 4 ಎಂಎಂಟಿ ಮತ್ತು 2.5 ಎಮ್ಎಮ್ಟಿ ಸಾಮರ್ಥ್ಯಗಳನ್ನು ಹೊಂದಿರುತ್ತವೆ ಎನ್ನಲಾಗಿದೆ.2017-18ರ  ಬಜೆಟ್ ಘೋಷಣೆಯ ಸಂದರ್ಭದಲ್ಲಿ ಎರಡು ಹೆಚ್ಚುವರಿ ಎಸ್ಪಿಆರ್ಗಳನ್ನು ಸ್ಥಾಪಿಸಲು ಸರ್ಕಾರ ಘೋಷಿಸಿತ್ತು.

ಚಂಡಿಕೋಲ್ ಮತ್ತು ಪಡುರ್ಗಳಲ್ಲಿ ಎಸ್ಪಿಆರ್ಗಳ ನಿರ್ಮಾಣವು  ಒಡಿಶಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ನೇರ  ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿವೆ ಎಂದು ತಿಳಿದುಬಂದಿದೆ.

 ಈಗಾಗಲೇ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಈಗಾಗಲೇ  5.33 ಎಮ್ಎಮ್ಟಿ ಸಾಮರ್ಥ್ಯದ ಸಂಗ್ರಹಾರಗಳನ್ನು  ಮೂರು ಸ್ಥಳಗಳಲ್ಲಿ ವಿಶಾಖಪಟ್ಟಣಂ (1.33 ಎಎಂಟಿ), ಮಂಗಳೂರು (1.5 ಎಮ್ಎಮ್ಟಿ) ಮತ್ತು ಪಡುರ್ (2.5 ಎಮ್ಎಮ್ಟಿ) ಸಂಗ್ರಹಣೆಗಾಗಿ ನಿರ್ಮಿಸಿದೆ.

ಎಸ್ಪಿಆರ್ ಕಾರ್ಯಕ್ರಮದ ಮೊದಲ ಹಂತದ ಕಾರ್ಯಕ್ರಮದಡಿಯಲ್ಲಿ  ಒಟ್ಟು 5.33 ಎಮ್ಎಮ್ಟಿ ಸಾಮರ್ಥ್ಯವು ಪ್ರಸ್ತುತ ಭಾರತದ ಕಚ್ಚಾ ಅವಶ್ಯಕತೆಗಳನ್ನು 10 ದಿನಗಳವೆರೆಗೆ ಪೋರೈಸಬಲ್ಲದು ಎಂದು ಹೇಳಲಾಗಿತ್ತು. ಈಗ ಹೆಚ್ಚುವರಿ 6.5 MMT ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಸೌಲಭ್ಯಗಳನ್ನು ಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ ಸುಮಾರು 12 ದಿನಗಳ ಹೆಚ್ಚುವರಿ ಪೂರೈಕೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

Trending News