ಜೇನಿಗೆ ಇರುವೆಗಳು ಸಾಮಾನ್ಯ: ಆಕಾಂಕ್ಷಿಗಳಿಗೆ ಮುನೇಗೌಡ ಟಾಂಗ್

 ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಅವರು ಇತ್ತೀಚೆಗೆ ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಮುನೇಗೌಡ, ಜೇನಿಗೆ ಇರುವೆಗಳು ಮುತ್ತಿಕೊಳ್ಳುವುದು ಸಾಮಾನ್ಯ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದ ಅವರು,ಪಕ್ಷದಲ್ಲಿ ಯಾವುದೇ‌ ಭಿನ್ನಮತವಿಲ್ಲ.‌ ಸ್ಥಳೀಯವಾಗಿ ಯಾರು ಕೆಲಸ‌ ಮಾಡಿದ್ದಾರೆ ಎಂಬುದು ಪಕ್ಷದ ನಾಯಕರಿಗೆ ಗೊತ್ತು‌ ಎಂದರು.

Last Updated : Apr 27, 2022, 06:34 PM IST
  • ರಾಜ್ಯದಲ್ಲಿ ಕೆಲ ಅಣೆಕಟ್ಟುಗಳನ್ನು ನಿರ್ಮಿಸಿ 3-4 ದಶಕಗಳು ಕಳೆದಿವೆ. ವ್ಯವಸಾಯಕ್ಕೆ ನೀರುಣಿಸಲು ನಿರ್ಮಿಸಿರುವ ಕಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಪುನಶ್ಚೇತನಗೊಳಿಸಿಲ್ಲ.
 ಜೇನಿಗೆ ಇರುವೆಗಳು ಸಾಮಾನ್ಯ: ಆಕಾಂಕ್ಷಿಗಳಿಗೆ ಮುನೇಗೌಡ ಟಾಂಗ್ title=

ಬೆಂಗಳೂರು:  ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಅವರು ಇತ್ತೀಚೆಗೆ ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಮುನೇಗೌಡ, ಜೇನಿಗೆ ಇರುವೆಗಳು ಮುತ್ತಿಕೊಳ್ಳುವುದು ಸಾಮಾನ್ಯ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದ ಅವರು,ಪಕ್ಷದಲ್ಲಿ ಯಾವುದೇ‌ ಭಿನ್ನಮತವಿಲ್ಲ.‌ ಸ್ಥಳೀಯವಾಗಿ ಯಾರು ಕೆಲಸ‌ ಮಾಡಿದ್ದಾರೆ ಎಂಬುದು ಪಕ್ಷದ ನಾಯಕರಿಗೆ ಗೊತ್ತು‌ ಎಂದರು.

ಇದನ್ನೂ ಓದಿ: Mandya BJP : ಬಿಜೆಪಿ ನಾಯಕರ ದಿಢೀರ್ ಸಭೆ : ಕಮಲ ಸೇರ್ತಾರಾ ಸಂಸದೆ ಸುಮಲತಾ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ತೊಟ್ಟು ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆಯು ಏ.28 ರಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಪ್ರವೇಶಿಸಲಿದೆ.ತಾಲೂಕಿನ ಮಧುರೆ ಹೋಬಳಿಯ ಶನಿ ಮಹಾತ್ಮ ದೇವಾಲಯದಿಂದ ಜನತಾ ಜಲಧಾರೆ ರಥಯಾತ್ರೆಗೆ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ತಿಳಿಸಿದರು.

ಇದನ್ನೂ ಓದಿ: SRH vs GT : SRH ಟೀಂ ಮ್ಯಾಚ್ ವಿನ್ನರ್‌ಗಳು ಈ 2 ಬೌಲರ್‌ಗಳು : ಇವರ ವೇಗಕ್ಕೆ ಎದುರಾಳಿ ಎದೆಯಲ್ಲಿ ಗಡ ಗಡ!

ರಾಜ್ಯದಲ್ಲಿ ಕೆಲ ಅಣೆಕಟ್ಟುಗಳನ್ನು ನಿರ್ಮಿಸಿ 3-4 ದಶಕಗಳು ಕಳೆದಿವೆ. ವ್ಯವಸಾಯಕ್ಕೆ ನೀರುಣಿಸಲು ನಿರ್ಮಿಸಿರುವ ಕಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಪುನಶ್ಚೇತನಗೊಳಿಸಿಲ್ಲ. ರೈತರಿಗೆ ಇದರಿಂದ ಅನಾನುಕೂಲವಾಗಿದೆ. ಆದ್ದರಿಂದ ಈ‌ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿ, ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಯಾತ್ರೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: 'ಬಿಜೆಪಿ ಸರ್ಕಾರವು ಪೊಲೀಸರು ತಮ್ಮ ಅಣತಿಯಂತೆ ನಡೆಯಬೇಕು ಎಂದು ಬಯಸುತ್ತಿದೆ'

ರಾಜ್ಯದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಜ್ಯದ ರೈತರ ಪರವಾಗಿದೆ, ರಾಜ್ಯದ ಪ್ರತಿಯೊಂದು ರೈತರ ಜಮೀನುಗಳಿಗೆ ನೀರು ಕೊಟ್ಟು ನೀರಾವರಿಗೆ ಉತ್ತೇಜನ ನೀಡುವುದು, ನಗರ ಜನತೆಗೆ ಕುಡಿಯುವ ನೀರು ಕೊಡುವುದು ಪಕ್ಷದ ಹಾಗೂ ವರಿಷ್ಠ ದೇವೇಗೌಡರ ಉದ್ದೇಶ ಎಂದರು. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಿ ರೈತರ ಆತ್ಮಹತ್ಯೆ ತಪ್ಪಿಸಿದರು. ಪ್ರಾದೇಶಿಕ ಪಕ್ಷಕ್ಕೆ ಮಾತ್ರ ರಾಜ್ಯದ ಜನತೆಯ ಸೇವೆ ಮಾಡುವ ಹಂಬಲ, ಉದ್ದೇಶ ಇದೆ. ಆದರೆ, ರಾಷ್ಟ್ರೀಯ ಪಕ್ಷಗಳಿಗೆ ಈ ಉದ್ದೇಶ ಇಲ್ಲ ಎಂದು ಟೀಕಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News