Vastu Tips: ಇತರರ ಈ 6 ವಸ್ತುಗಳನ್ನು ಎಂದಿಗೂ ಬಳಸಬೇಡಿ, ಕೆಟ್ಟ ಕಾಲ ಆರಂಭವಾಗುತ್ತದೆ

Vastu Tips for healthy lifestyle: ಹಲವರು ತಮ್ಮ ಬಳಿ ಏನೇ ಇದ್ದರೂ ಕೂಡ ಅದರಲ್ಲಿಯೇ ಸುಖದಿಂದ ಬದುಕುತ್ತಾರೆ. ಆದರೆ, ಉಳಿದ ಕೆಲವರು ತಮ್ಮ ಪ್ರತಿಯೊಂದು ಸಂಗತಿಗಳಿಗಾಗಿ ಬೇರೆಯವರ ಮೇಲೆ ಅವಲಂಭಿಸಿರುತ್ತಾರೆ. ಇಂತಹ ಜನರು ತಮ್ಮ ಸ್ನೇಹಿತರ ಬಟ್ಟೆ, ವೈಯಕ್ತಿಕ ವಸ್ತುಗಳನ್ನು ಕೂಡ ಬಳಸುತ್ತಾರೆ. 

Vastu Tips for healthy lifestyle: ಹಲವರು ತಮ್ಮ ಬಳಿ ಏನೇ ಇದ್ದರೂ ಕೂಡ ಅದರಲ್ಲಿಯೇ ಸುಖದಿಂದ ಬದುಕುತ್ತಾರೆ. ಆದರೆ, ಉಳಿದ ಕೆಲವರು ತಮ್ಮ ಪ್ರತಿಯೊಂದು ಸಂಗತಿಗಳಿಗಾಗಿ ಬೇರೆಯವರ ಮೇಲೆ ಅವಲಂಭಿಸಿರುತ್ತಾರೆ. ಇಂತಹ ಜನರು ತಮ್ಮ ಸ್ನೇಹಿತರ ಬಟ್ಟೆ, ವೈಯಕ್ತಿಕ ವಸ್ತುಗಳನ್ನು ಕೂಡ ಬಳಸುತ್ತಾರೆ. ಇದೇ ರೀತಿ ನಾವು ಕೂಡ ನಮ್ಮ ವೈಯಕ್ತಿಕ ವಸ್ತುಗಳನ್ನು ಹಲವು ಬಾರಿ ಇತರರಿಗೆ ನೀಡಿ, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತವೆ. ಹೀಗಿರುವಾಗ ವಾಸ್ತು ಶಾಸ್ತ್ರದ ಪ್ರಕಾರ ಬೇರೆಯವರಿಗೆ ಯಾವ ವಸ್ತುಗಳನ್ನು ನೀಡಬಾರದು ಅಥವಾ ಬೇರೆಯವರ ಯಾವ ವಸ್ತುಗಳನ್ನು ಬಳಸಬಾರದು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ,

 

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-Dream Interpretation : ಈ ಕನಸುಗಳು ಶನಿ ದೇವನಿಗೆ ಸಂಬಂಧಿಸಿವೆ, ಇವು ಶುಭ-ಅಶುಭ ಸೂಚನೆಗಳಿಗೆ ಕಾರಣ

 

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 


 

1 /6

1. ಲಿಪ್ಸ್ಟಿಕ್ - ಲಿಪ್ ಸ್ಟಿಕ್ ಅನ್ನು ಯಾರಿಂದಲೂ ಕೂಡ ಎರವಲು ಪಡೆಯಬಾರದು. ಹೀಗಾಗಿ, ಹುಡುಗಿಯರು ಇತರರಿಂದ ಲಿಪ್ ಸ್ಟಿಕ್ ಅನ್ನು ಪಡೆಯದಂತೆ ವಿಶೇಷ ಕಾಳಜಿವಹಿಸಬೇಕು.

2 /6

2. ಬಟ್ಟೆ- ಬೇರೆಯವರು ಬಳಕೆ ಮಾಡಿದ ಬಟ್ಟೆಗಳನ್ನು ಎಂದಿಗೂ ಕೂಡ ಬಳಸಬಾರದು. ಇದರಿಂದ ನಮ್ಮೊಳಗೇ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಹಾಗೂ ಹಲವು ರೀತಿಯ ತೊಂದರೆಗಳು ಜೀವನದಲ್ಲಿ ಎದುರಾಗುತ್ತವೆ.

3 /6

3. ಪೆನ್ - ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಹಲವು ಜನರು ತಮ್ಮದೇ ಆದ ವಿಶೇಷ ಪೆನ್ ಬಳಸುವುದನ್ನು ನೀವು ನೋಡಿರಬಹುದು ಹಾಗೂ ಅವರು ತಮ್ಮ ಪೆನ್ ಅನ್ನು ಇತರರಿಗೆ ಕೊಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯವರ ಪೆನ್ ಅನ್ನು ನಾವು ನಮ್ಮ ಬಳಿಗೆ ಇಟ್ಟುಕೊಳ್ಳಬಾರದು. ವೃತ್ತಿಪರತೆಯ ದೃಷ್ಟಿಯಿಂದ ಇದು ಉಚಿತವಲ್ಲ ಮತ್ತು ಇದರಿಂದ ಧನಹಾನಿ ಕೂಡ ಸಂಭವಿಸುತ್ತದೆ. 

4 /6

4. ಉಂಗುರ - ಬೇರೆಯವರ ಉಂಗರನ್ನು ಪಡೆದುಕೊಂಡು ಧರಿಸುವುದು ವಾಸ್ತುಶಾಸ್ತ್ರದ ಪ್ರಕಾರ ಅಶುಭವಾಗಿದೆ. ಇದರಿಂದ ವ್ಯಕ್ತಿಯ ಆರೋಗ್ಯ, ಜೀವನ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

5 /6

5. ಗಡಿಯಾರ - ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ಕೂಡ ಸಕಾರಾತ್ಮಕ ಹಾಗೂ ನಕಾರಾತ್ಮಕ ದೃಷ್ಟಿಯಿಂದ ನೋಡಲಾಗುತ್ತದೆ. ಕೈಯಲ್ಲಿ ಬೇರೆ ವ್ಯಕ್ತಿಗಳ ಗಡಿಯಾರ ಧರಿಸುವುದು ತುಂಬಾ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ವ್ಯಕ್ತಿಯ ಕೆಟ್ಟಕಾಲ ಆರಂಭವಾಗುತ್ತದೆ ಎನ್ನಲಾಗುತ್ತದೆ. 

6 /6

6. ಕರವಸ್ತ್ರ - ಬೇರೆ ವ್ಯಕ್ತಿಯ ಕರವಸ್ತ್ರವನ್ನು ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಆ ವ್ಯಕ್ತಿ ಜೊತೆಗಿನ ನಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿಯ ಕರವಸ್ತ್ರವನ್ನು ನಮ್ಮ ಬಳಿ ಇಟ್ಟುಕೊಳ್ಳಬಾರದು. ಇದು ವ್ಯಾಜ್ಯಕ್ಕೆ ಕಾರಣವಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.