ನವದೆಹಲಿ: ಹಿಂದೂ ಕ್ಯಾಲೆಂಡರ್ ಪ್ರಕಾರ ಅಕ್ಷಯ ತೃತೀಯವನ್ನು ಹೆಚ್ಚು ಪವಿತ್ರವೆಂದು ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ 3ನೇ ದಿನದಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಅಕ್ಷಯ ತೃತೀಯವೆಂಬುದು ಶುಭದ ಸಂಕೇತವಾಗಿದೆ. ಈ ದಿನ ನೀವು ಏನು ಮಾಡಿದ್ರೂ ಅದು ನಿಮಗೆ ದೊರೆಯುತ್ತದೆ ಹಾಗೂ ಲಾಭ ದುಪ್ಪಟ್ಟಾಗುತ್ತದೆಂಬ ನಂಬಿಕೆ ಇದೆ.
ಈ ವಿಶೇಷ ದಿನದಂದು ಯಾವುದೇ ಹೊಸ ಕೆಲಸವನ್ನು ನೀವು ಆರಂಭಿಸಿದರೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ ಹಿಂದೂ ಮತ್ತು ಜೈನರ ವಸಂತ ಹಬ್ಬವಾಗಿದೆ. ಈ ಬಾರಿಯ ಅಕ್ಷಯ ತೃತೀಯ ಮೇ 3 ರಂದು ಆಚರಿಸಲಾಗುತ್ತಿದೆ.
ಇದನ್ನೂ ಓದಿ: Akshaya Tritiya 2022: ಈ ನಾಲ್ಕು ರಾಶಿಗಳ ಜನರ ಮೇಲಿರಲಿದೆ ದೇವಿ ಲಕ್ಷ್ಮಿಯ ವಿಶೇಷ ಕೃಪೆ, ನಿಮ್ಮ ರಾಶಿ ಇದರಲ್ಲಿದೆಯಾ?
ಇದು ಪುಣ್ಯದ ದಿನವಾಗಿದೆ
ಅಕ್ಷಯ ತೃತೀಯವನ್ನು ಪಠಣ, ದಾನ ಅಥವಾ ಪುಣ್ಯದಂತಹ ಅನೇಕ ಒಳ್ಳೆಯ ಕಾರ್ಯಗಳಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ಎಂಬ ಪದದ ಅರ್ಥ ಎಂದಿಗೂ ಕಡಿಮೆಯಾಗದಿರುವುದು. ಈ ದಿನದಂದು ಮಾಡಿದ ಕೆಲಸದ ಪ್ರಯೋಜನಗಳು ಎಂದಿಗೂ ಕಡಿಮೆಯಾಗುವುದಿಲ್ಲ ಎಂದರ್ಥ. ಆದ್ದರಿಂದ ಈ ದಿನದಂದು ಜನರು ಮದುವೆ, ಹೊಸ ಹೂಡಿಕೆ ಅಥವಾ ವ್ಯವಹಾರವನ್ನು ಪ್ರಾರಂಭಿಸುತ್ತಾರೆ. ಅನೇಕ ಜನರು ಈ ದಿನ ಚಿನ್ನದ ಹೂಡಿಕೆಯನ್ನು ಮಾಡುತ್ತಾರೆ.
ಅಕ್ಷಯ ತೃತೀಯದ ಇತಿಹಾಸ
ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯಪಾತ್ರೆ ನೀಡಿದನೆಂದು ನಂಬಲಾಗಿದೆ. ಈ ಪಾತ್ರೆಯು ತನ್ನ ಗಡಿಪಾರು ಸಮಯದಲ್ಲಿ ಆಹಾರದ ಅಂತ್ಯವಿಲ್ಲದ ಪೂರೈಕೆಯನ್ನು ಖಾತ್ರಿಪಡಿಸಿತು. ಸಂಪತ್ತನ್ನು ಹೆಚ್ಚಿಸುವ ಆಶಯದೊಂದಿಗೆ ಜನರು ಈ ದಿನವನ್ನು ಮಂಗಳಕರವೆಂದು ಪರಿಗಣಿಸಲು ಪ್ರಾರಂಭಿಸಿದರು. ಈ ದಿನದಂದು ಕುಬೇರನನ್ನು ಸಂಪತ್ತಿನ ಒಡೆಯನನ್ನಾಗಿ ಮಾಡಲಾಯಿತು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Akshaya Tritiya 2022 : 50 ವರ್ಷಗಳ ನಂತರ ಅಕ್ಷಯ ತೃತೀಯದ ದಿನ ರೂಪುಗೊಳ್ಳುತ್ತಿದೆ ಅದ್ಬುತ ಯೋಗ, ತಿಳಿಯಿರಿ ಈ ಬಾರಿಯ ಮಹತ್ವ
ಪೂಜೆ ಮಾಡುವ ವಿಧಾನ
ಅಕ್ಷಯ ತೃತೀಯಕ್ಕೆ ಹೊಸ ಬಟ್ಟೆ ಧರಿಸಿ ಪೂಜಿಸಲಾಗುತ್ತದೆ. ಈ ದಿನ ಗಣೇಶ, ಮಾತಾ ಲಕ್ಷ್ಮಿದೇವಿ ಮತ್ತು ವಿಷ್ಣುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಹಳದಿ ವಸ್ತ್ರಗಳನ್ನು ಧರಿಸಿ ಭಗವಂತನನ್ನು ಪೂಜಿಸಲಾಗುತ್ತದೆ. ಪೂಜೆಯಲ್ಲಿ ದೇವರಿಗೆ ನೈವೇದ್ಯ ಮಾಡಿದ ನಂತರ ಹಾಲು, ಅನ್ನ ಸೇರಿದಂತೆ ಬೇಳೆಕಾಳು ಪ್ರಸಾದವನ್ನು ಕುಟುಂಬದವರಿಗೆ ವಿತರಿಸಲಾಗುತ್ತದೆ.
ಪೂಜೆಯ ಸಮಯ
ಮೇ 3 ರಂದು ಬೆಳಿಗ್ಗೆ 5:39ರಿಂದ ಮಧ್ಯಾಹ್ನ 12:18ರವರೆಗೆ ಅಕ್ಷಯ ತೃತೀಯ ಪೂಜೆಗೆ ಶುಭ ಸಮಯವಿರುತ್ತದೆ. ಇದಲ್ಲದೆ ಮೇ 3ರ ಬೆಳಿಗ್ಗೆ 5:18ರಿಂದ ಮೇ 4ರ ಬೆಳಿಗ್ಗೆ 5:38ರ ನಡುವಿನ ಸಮಯವು ಚಿನ್ನವನ್ನು ಖರೀದಿಸಲು ಉತ್ತಮ ಸಮಯವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.