ಬೆಂಗಳೂರು : KGF Chapter 2 OTT Rights Deal: ಸೂಪರ್ ಸ್ಟಾರ್ ಯಶ್ ಚಿತ್ರ 'ಕೆಜಿಎಫ್ ಚಾಪ್ಟರ್ 2' ದೊಡ್ಡ ಚಿತ್ರಗಳಮಣ್ಣು ಮುಕ್ಕಿಸಿದೆ. ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಹಿಂದಿ ಆವೃತ್ತಿಯ ಗಳಿಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಲೆಕ್ಷನ್ ವಿಚಾರದಲ್ಲಿ ಅಮೀರ್ ಖಾನ್ ಅವರ 'ದಂಗಲ್' ಅನ್ನು ಕೂಡ ಕೆಜಿಎಫ್ 2 ಹಿಂದಿಕ್ಕಿದೆ. ಇದೀಗ ಈ ಚಿತ್ರದ OTT ರೈಟ್ಸ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ.
ಒಟಿಟಿ ರೈಟ್ಸ್ ಮೂಲಕ ಕೋಟ್ಯಂತರ ರೂಪಾಯಿ ಗಳಿಕೆ :
ರಾಕಿ ಭಾಯ್ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಗಳಿಕೆ ಮಾಡುತ್ತಿದೆ. ಇದರೊಂದಿಗೆ ನಿರ್ಮಾಪಕರು ಒಟಿಟಿ ರೈಟ್ಸ್ ಮೂಲಕವೂ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದಾರೆ. ವರದಿಯ ಪ್ರಕಾರ, 'ಕೆಜಿಎಫ್ ಅಧ್ಯಾಯ 2' ನ OTT ರೈಟ್ಸ್ ಸುಮಾರು 320 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ ಎನ್ನಲಾಗಿದೆ. ಭಾರತೀಯ ಚಲನಚಿತ್ರಕ್ಕೆ ಸಂಬಂಧ ಪಟ್ಟಂತೆ ಇದೊಂದು ಬಹು ದೊಡ್ಡ ಡೀಲ್ ಎಂದರೆ ತಪ್ಪಾಗುವುದಿಲ್ಲ. .
ಇದನ್ನೂ ಓದಿ : ಸದ್ದಿಲ್ಲದೆ ಮುಗಿದಿದೆ ಡಾಲಿ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ..!
ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್ 2 :
ವರದಿಗಳ ಪ್ರಕಾರ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಮುಂತಾದ ಭಾಷೆಗಳಲ್ಲಿ OTTಯಲ್ಲಿ ಬಿಡುಗಡೆಯಾಗಲಿದೆ. ಮೇ 27 2022 ರಿಂದ OTT ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 'ಕೆಜಿಎಫ್ 2' ಸ್ಟ್ರೀಮ್ ಆಗಲಿದೆ ಎಂದು ಈ ಹಿಂದೆ, ಹೇಳಲಾಗಿತ್ತು. ಆದರೆ, ಚಿತ್ರದ ಒಟಿಟಿ ಬಿಡುಗಡೆ ಕುರಿತು ನಿರ್ಮಾಪಕರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಅಮೀರ್ ಖಾನ್ 'ದಂಗಲ್' ಅನ್ನು ಹಿಂದಿಕ್ಕಿದ ಕೆಜಿಎಫ್ :
ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಹಿಂದಿ ವರ್ಶನ್ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾವನ್ನು ಹಿಂದಿಕ್ಕಿದೆ. ಇದೀಗ 'ಕೆಜಿಎಫ್ 2' ದೇಶದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದ ಹಿಂದಿ ಅವತರಣಿಕೆ ಬುಧವಾರದವರೆಗೆ 391.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೀಗ ಈ ಚಿತ್ರ 400 ಕೋಟಿ ಗಳಿಕೆಯತ್ತ ಸಾಗುತ್ತಿದ್ದು, ಅತಿ ಶೀಘ್ರದಲ್ಲಿಯೇ ಅದನ್ನು ಕೂಡಾ ದಾಟಲಿದೆ. ವಿಶ್ವಾದ್ಯಂತ ಈ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡುವುದಾದರೆ, ಕೆಜಿಎಫ್ 2, 1000 ಕೋಟಿ ರೂ.ಗಳ ಗಡಿ ದಾಟಿದೆ.
ಇದನ್ನೂ ಓದಿ : ವಿಜಯ್ ರಾಘವೇಂದ್ರ ನಟನೆಯ ರಾಘು ಸಿನಿಮಾದ ಮುಹೂರ್ತ...ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರಳಿ ಕ್ಲ್ಯಾಪ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.