Zodiac Matches: ಸ್ನೇಹ ಅಮೂಲ್ಯ! ನಿಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಉತ್ತಮ ಸ್ನೇಹಿತರು ನಿಮ್ಮೊಂದಿಗೆ ಇರುತ್ತಾರೆ. ನಿಮ್ಮ ವಯಸ್ಸಿನ ಜೊತೆ ಜೊತೆಗೆ ಸ್ನೇಹವು ಸಹ ಬೆಳಯುತ್ತದೆ. ಅನೇಕರು ತಾವು ಒಮ್ಮೆ ತುಂಬಾ ಹತ್ತಿರವಾಗಿದ್ದ ವ್ಯಕ್ತಿಯನ್ನು ಕಳೆದುಕೊಳ್ಳುತ್ತಾರೆ ಮತ್ತು ಕೆಲವರು ಶಾಶ್ವತವಾಗಿ ಉತ್ತಮ ಸ್ನೇಹಿತರಾಗುತ್ತಾರೆ. ನೀವು ರಾಶಿಚಕ್ರ ಚಿಹ್ನೆಗಳ ಮೂಲಕ ಹೋದರೆ, ಪಂಡಿತ್ ಜಗನ್ನಾಥ ಗುರೂಜಿ ಅವರ ಪ್ರಕಾರ, ಉತ್ತಮ ಸ್ನೇಹಿತರಾಗುವ ರಾಶಿ ಚಿಹ್ನೆಗಳುಇಂತಿವೆ.
ಇದನ್ನೂ ಓದಿ: Gemology: ವಜ್ರ ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ.. ಇಲ್ಲವಾದರೆ ದೊಡ್ಡ ಬೆಲೆ ತೆರಬೇಕಾದೀತು
ಮೇಷ: ಮೇಷ ರಾಶಿಯವರು ಸ್ವತಂತ್ರರು ಮತ್ತು ಧನು ರಾಶಿಯವರು ಇವರಿಗೆ ಉತ್ತಮ ಸ್ನೇಹಿತರಾಗುತ್ತಾರೆ. ಇವರು ಅನ್ಯೋನ್ಯವಾಗಿರುತ್ತಾರೆ.
ವೃಷಭ: ವೃಷಭ ರಾಶಿಯವರು ಹೆಚ್ಚಾಗಿ ಕನ್ಯಾ ರಾಶಿಯವರಿಗೆ ಉತ್ತಮ ಸ್ನೇಹಿತರಾಗಿ ಆಕರ್ಷಿತರಾಗುತ್ತಾರೆ. ಇವರು ಹೆಚ್ಚಾಗಿ ಒಟ್ಟಿಗೆ ಆಹಾರ ಸೇವಿಸಲು ಇಷ್ಟಪಡುತ್ತಾರೆ.
ಮಿಥುನ: ಮಿಥುನ ರಾಶಿಯವರನ್ನು ತುಲಾ ರಾಶಿಯವರು ಉತ್ತಮವಾಗಿ ನಿರ್ವಹಿಸುತ್ತಾರೆ. ಅವರು ಅಕ್ವೇರಿಯಸ್ ಜನರೊಂದಿಗೆ ಬೆಸ್ಟ್ ಫ್ರೆಂಡ್ ಆಗಬಹುದು. ಏಕೆಂದರೆ ಅವರು ನೀವು ನೀಡುವ ಬುದ್ಧಿಯ ಮಾತುಗಳನ್ನು ಆನಂದಿಸುತ್ತಾರೆ.
ಕರ್ಕಾಟಕ: ಭಾವನಾತ್ಮಕವಾಗಿ ಉದ್ವಿಗ್ನಗೊಳ್ಳುವ ರಾಶಿಯವರು. ಇವರಿಗೆ ವೃಶ್ಚಿಕ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ. ಇವರು ಪರಸ್ಪರ ಗಂಭೀರ ಭಾವನೆಗಳನ್ನು ಹೊಂದಿರುತ್ತಾರೆ.
ಸಿಂಹ: ಇವರು ಸಿಂಹ ರಾಶಿಯ ಜನರ ಜೊತೆಯೇ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ. ಇವರಿಬ್ಬರೂ ಒಬ್ಬರನ್ನೊಬ್ಬರು ನಿರ್ಣಯಿಸುವುದಿಲ್ಲ.
ಕನ್ಯಾ: ಕನ್ಯಾ ರಾಶಿಯವರು ಮಕರ ರಾಶಿಯವರೊಂದಿಗೆ ಉತ್ತಮ ಸ್ನೇಹಿತರಾಗಿರುತ್ತಾರೆ. ಇಬ್ಬರೂ ಅನ್ಯೋನ್ಯವಾಗಿ ಬದುಕುತ್ತಾರೆ.
ತುಲಾ: ತುಲಾ ರಾಶಿಯವರು ಮತ್ತು ಕುಂಭ ರಾಶಿಯವರು ಚೆನ್ನಾಗಿ ಹೊಂದಾಣಿಕೆಯಾಗುತ್ತಾರೆ. ಇವರ ಸ್ನೇಹ ಅನೇಕರಿಗೆ ಅಸೂಯೆ ಉಂಟುಮಾಡಬಹುದು. ಇಬ್ಬರೂ ಪರಸ್ಪರ ಗೌರವಿಸುತ್ತಾರೆ.
ವೃಶ್ಚಿಕ: ವೃಶ್ಚಿಕ ಮತ್ತು ಮೀನ ರಾಶಿಯವರು ಅದ್ಭುತ ಸ್ನೇಹಿತರಾಗಿರುತ್ತಾರೆ. ಒಬ್ಬರಿಗೊಬ್ಬರು ಎಂದಿಗೂ ಜಡ್ಜ್ ಮಾಡುವುದಿಲ್ಲ.
ಧನಸ್ಸು: ಧನು ರಾಶಿಯವರು ಸಾಹಸವನ್ನು ಬಯಸುತ್ತಾರೆ. ಸಿಂಹ ರಾಶಿಯವರು ಇವರ ಜೊತೆ ಉತ್ತಮ ಸ್ನೇಹವನ್ನು ಹೊಂದುತ್ತಾರೆ. ಇವರಿಬ್ಬರು ಅಪಾರ ಸೆಲ್ಫಿಗಳನ್ನು ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದನ್ನೂ ಓದಿ:Lukcy Girl Zodiac Sign : ಈ 3 ರಾಶಿಯ ಹುಡುಗಿಯರು ತುಂಬಾ ಆಕರ್ಷಿತರು ಮತ್ತು ಸ್ಮಾರ್ಟ್- ಬಬ್ಲಿಯಾಗಿದ್ದಾರೆ!
ಮಕರ: ಇವರು ವೃಷಭ ರಾಶಿಯವರೊಂದಿಗೆ ಉತ್ತಮ ಸ್ನೇಹಿತರಾಗುತ್ತಾರೆ. ಅವರು ನಿಜವಾಗಿಯೂ ಆತ್ಮವನ್ನು ಪ್ರೀತಿಸುತ್ತಾರೆ.
ಕುಂಭ: ಕುಂಭ ರಾಶಿಯವರು ಮತ್ತು ಮಿಥುನ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ. ಸಂಪರ್ಕಗಳು ವಿರಳವಾಗಿ ಕಂಡುಬರುತ್ತವೆ. ಆದರೂ ಒಳ್ಳೆ ಬಾಂಧವ್ಯ ಹೊಂದಿರುತ್ತಾರೆ.
ಮೀನ: ಮೀನ ಮತ್ತು ಕರ್ಕಾಟಕ ರಾಶಿಯವರು ಸಾಮಾನ್ಯವಾಗಿ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ. ಇಬ್ಬರೂ ಭಾವನೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.