ನವದೆಹಲಿ: ವಾಹನ ಉದ್ಯಮದ ಬೃಹತ್ ಕಂಪನಿ ಮಾರುತಿ ತನ್ನ ಕಾರುಗಳ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಿದೆ. ಈ ರಿಯಾಯಿತಿಯು ಜುಲೈ ತಿಂಗಳಿನಲ್ಲಿ ಬುಕಿಂಗ್ ಮಾಡಿದ ಮಾರುತಿಯ ಎಲ್ಲಾ ಕಾರುಗಳಿಗೆ ಅನ್ವಯವಾಗಲಿದ್ದು, 10 ಸಾವಿರ ರೂ.ಗಳಿಂದ 70 ಸಾವಿರ ರೂ.ಗಳವರೆಗೆ ರಿಯಾಯಿತಿ ದೊರೆಯಲಿದೆ. ತನ್ನ ಕಾರುಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ಜೂನ್ ತಿಂಗಳಿನಲ್ಲಿ ನೀಡಿದ್ದ ರಿಯಾಯಿತಿ ಕೊಡುಗೆಯನ್ನೇ ಜುಲೈನಲ್ಲಿಯೂ ಮುಂದುವರಿಸಲು ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮಾರುತಿಯ ಯಾವ ಕಾರಿಗೆ ಎಷ್ಟು ರಿಯಾಯಿತಿ?
* ಆಲ್ಟೋ - 30,000 ರೂ. ಮೇಲೆ ರಿಯಾಯಿತಿ
* ಆಲ್ಟೋ ಕೆ 10 - 27,000 ರೂ. ರಿಯಾಯಿತಿ
* ವ್ಯಾಗನ್ಆರ್ - 35,000 ರೂ. ರಿಯಾಯಿತಿ
* ಸೆಲೆರಿಯೊ - 30,000 ರೂ. ರಿಯಾಯಿತಿ
* ಎರ್ಟಿಗಾ - 15,000 ರೂ. ರಿಯಾಯಿತಿ
* ಸಿಯಾಜ್ - 70,000 ರೂ. ರಿಯಾಯಿತಿ
* ಇಗ್ನಿಸ್ - 30,000 ರೂ. ಮೇಲೆ ರಿಯಾಯಿತಿ
* ಡಿಜೈರ್ - 15,000 ರೂ. ರಿಯಾಯಿತಿ
* ಸ್ವಿಫ್ಟ್ - 10,000 ರೂ. ರಿಯಾಯಿತಿ
ನಗದು ರಿಯಾಯಿತಿಯೊಂದಿಗೆ ಎಕ್ಸ್'ಚೇಂಜ್ ಬೋನಸ್
ಮಾರುತಿ ಕಂಪನಿಯು ನಗದು ರಿಯಾಯಿತಿಯೊಂದಿಗೆ ವಿವಿಧ ಕಾರುಗಳ ಮೇಲೆ 15,000 ರೂ. ನಿಂದ 50000 ರೂಪಾಯಿವರೆಗೆ ಎಕ್ಸ್'ಚೇಂಜ್ ಬೋನಸ್ ಸಹ ನೀಡುತ್ತಿದೆ. ಇದಲ್ಲದೆ, ಪ್ರತಿ ಕ್ಷೇತ್ರದ ವಿತರಕರ ಎಕ್ಸ್'ಚೇಂಜ್ ಬೋನಸ್ ವಿಭಿನ್ನವಾಗಿರುತ್ತದೆ. ಇತರ ಕಾರುಗಳಿಗಿಂತ ಇಗ್ನಿಸ್ ಖರೀದಿಸುವುದರಿಂದ ಹೆಚ್ಚು ಲಾಭವಿದ್ದು, 70,000 ರೂಪಾಯಿವರೆಗೆ ನಗದು ರಿಯಾಯಿತಿ ಮತ್ತು 50000 ರೂಪಾಯಿಯ ಎಕ್ಸ್'ಚೇಂಜ್ ಬೋನಸ್ ನೀಡಲಾಗುತ್ತದೆ. ಹೀಗಾಗಿ, ಈ ಕಾರು ಖರೀದಿಯಿಂದ ಸುಮಾರು 1.20 ಲಕ್ಷ ರೂ. ರಿಯಾಯಿತಿ ದೊರೆಯಲಿದೆ.
ಮಾರಾಟ ಹೆಚ್ಚಿಸಲು ಕೊಡುಗೆ
ಜೂನ್ ತಿಂಗಳಲ್ಲಿ ಕಾರು ಮಾರಾಟದಲ್ಲಿ ಮಾರುತಿ ಶೇ.36 ರಷ್ಟು ಏರಿಕೆ ಕಂಡಿದೆ. ಜೂನ್ ತಿಂಗಳಲ್ಲಿ 1,44,981 ಕಾರುಗಳನ್ನು ಮಾರಾಟ ಮಾಡಿರುವ ಮಾರುತಿ, ಜೂನ್ 2017 ರಲ್ಲಿ 1,06,394 ಕಾರುಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಪ್ರಕಾರ, ಸಣ್ಣ ಕಾರುಗಳ ವಿಭಾಗದಲ್ಲಿ ಆಲ್ಟೋ ಮತ್ತು ವ್ಯಾಗಾನ್ಆರ್ ಸೇರಿದಂತೆ ಕಂಪನಿಯ ಒಟ್ಟು ಮಾರಾಟವು 15.1% ರಿಂದ 29,381 ಯುನಿಟ್ಗೆ ಏರಿದೆ. ಸ್ವಿಫ್ಟ್, ಎಸ್ಟಿಲೊ, ಡಿಜೈರ್ ಮತ್ತು ಬಲೆನೊಗಳ ಮಾರಾಟ 76.7% ಹೆಚ್ಚಳವಾಗಿದೆ. ಅದಕ್ಕಾಗಿಯೇ ಕಾರುಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಜುಲೈನಲ್ಲಿಯೂ ರಿಯಾಯಿತಿ ಆಫರ್ ಮುಂದುವರಿಸಿದೆ.