ಈ ದೇಶದ 1.74 ಲಕ್ಷ ಮಂದಿಯಲ್ಲಿ ಕಾಣಿಸಿಕೊಂಡ ನಿಗೂಢ ಜ್ವರ: ಒಂದೇ ದಿನದಲ್ಲಿ 21 ಸಾವು!

ಪಯೋಂಗ್ಯಾಂಗ್ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಭೀತಿ ಎದುರಾಗಿದೆ. ಈ ಮಧ್ಯೆ, ಜ್ವರದಿಂದ 21 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ರೀತಿಯಲ್ಲಿ ಜನರನ್ನು ಬಲಿ ಪಡೆಯುತ್ತಿರುವ ಜ್ವರ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಲ್ಲಿವರೆಗೆ ಒಟ್ಟು 27 ಮಂದಿ ಈ ಜ್ವರದಿಂದ ಕೊನೆಯುಸಿರೆಳೆದಿದ್ದಾರೆ. 

Written by - Bhavishya Shetty | Last Updated : May 14, 2022, 10:15 AM IST
  • ಉತ್ತರ ಕೊರಿಯಾದಲ್ಲಿ ನಿಗೂಢ ಜ್ವರದ ಭೀತಿ
  • ಪಯೋಂಗ್ಯಾಂಗ್ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಭಯ
  • 1.74 ಲಕ್ಷಕ್ಕೂ ಅಧಿಕ ಮಂದಿಗೆ ಕಾಣಿಸಿಕೊಂಡ ಜ್ವರ
ಈ ದೇಶದ 1.74 ಲಕ್ಷ ಮಂದಿಯಲ್ಲಿ ಕಾಣಿಸಿಕೊಂಡ ನಿಗೂಢ ಜ್ವರ: ಒಂದೇ ದಿನದಲ್ಲಿ 21 ಸಾವು! title=
north korea

ಉತ್ತರ ಕೊರಿಯಾದಲ್ಲಿ ಕೊರೊನಾ ವೈರಸ್‌ನ ಮೊದಲ ಪ್ರಕರಣ ಬೆಳಕಿಗೆ ಬಂದ ನಂತರ, ಈಗ ನಿಗೂಢ ಜ್ವರದ ಭೀತಿ ಶುರುವಾಗಿದೆ. ಇಲ್ಲಿನ ಸುಮಾರು 1.74 ಲಕ್ಷಕ್ಕೂ ಅಧಿಕ ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಒಂದೇ ದಿನದಲ್ಲಿ 21 ಮಂದಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿಉತ್ತರ ಕೊರಿಯಾದಲ್ಲಿ ನಿಗೂಢ ಜ್ವರದಿಂದ 6 ಮಂದಿ ಸಾವು, 2 ಲಕ್ಷ ಜನರು ಐಸೊಲೇಶನ್

ಪಯೋಂಗ್ಯಾಂಗ್ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಭೀತಿ ಎದುರಾಗಿದೆ. ಈ ಮಧ್ಯೆ, ಜ್ವರದಿಂದ 21 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ರೀತಿಯಲ್ಲಿ ಜನರನ್ನು ಬಲಿ ಪಡೆಯುತ್ತಿರುವ ಜ್ವರ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಲ್ಲಿವರೆಗೆ ಒಟ್ಟು 27 ಮಂದಿ ಈ ಜ್ವರದಿಂದ ಕೊನೆಯುಸಿರೆಳೆದಿದ್ದಾರೆ. 

ಮೇ ತಿಂಗಳ ಆರಂಭದಿಂದ ಈವರೆಗೆ 5 ಲಕ್ಷಕ್ಕಿಂತಲೂ ಹೆಚ್ಚಿನ ಮಂದಿಯಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ. ಅದರಲ್ಲಿ 2 ಲಕ್ಷಕ್ಕಿಂದ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. 2,80,810 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಉತ್ತರ ಕೊರಿಯಾದ ಕೆಲ ಮೂಲಗಳು ತಿಳಿಸಿದೆ. 

ಇದನ್ನು ಓದಿ: SRH vs KKR: ಇಂದು ಕೊಲ್ಕತ್ತಾಗೆ ಹೈದರಾಬಾದ್‌ ಸವಾಲು: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ಮೇ 13ರಂದು ಉತ್ತರ ಕೊರಿಯಾದಲ್ಲಿ ಮೊದಲ ಕೊರೊನಾ ವೈರಸ್‌ ಪ್ರಕರಣ ದಾಖಲಾಗಿದೆ ಎಂದು ಹೇಳಿಕೆ ನೀಡಿತ್ತು. ಇನ್ನು ಕೊರೊನಾ ಹರಡುವಿಕೆಯನ್ನು ತಡೆಯುವ ಸಲುವಾಗಿ ಮೇ 13ರಿಂದ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಲಾಗಿದೆ. ಇನ್ನು ಇಲ್ಲಿನ 2.5ಕೋಟಿ ಜನರು ಇನ್ನೂ ಕೊರೊನಾ ಲಸಿಕೆ ತೆಗೆದುಕೊಂಡಿಲ್ಲ. ಎಂದಾದರೂ ಪ್ರಕರಣಗಳ ಸಂಖ್ಯೆ ಉಲ್ಬಣವಾದರೆ ಪರಿಣಾಮ ಎದುರಿಸಲು ಕಷ್ಟವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News