Knowledge News: ಡಿಟಿಎಚ್‌ ಆಂಟೆನಾಗಳ ಶೇಪ್‌ ಈ ರೀತಿ ಇರಲು ಕಾರಣ ಏನು ಗೊತ್ತಾ?

DTH ಆಂಟೆನಾವನ್ನು ಓರೆಯಾಗಿಸುವುದರ ಹಿಂದಿನ ಕಾರಣವು ತುಂಬಾ ವಿಶೇಷವಾಗಿದೆ. ಆಂಟೆನಾವನ್ನು ಕರ್ಣೀಯವಾಗಿ ಹಾಕದಿದ್ದರೆ, ಅದು ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. DTH ಆಂಟೆನಾ ಸಿಗ್ನಲ್‌ಗಳನ್ನು ಸೆರೆಹಿಡಿಯುತ್ತದೆ. ಬಳಿಕ ಸಿಗ್ನಲ್‌ಗಳನ್ನು ನಮ್ಮ ಟಿವಿಯಲ್ಲಿ ಚಿತ್ರಗಳಾಗಿ ಪರಿವರ್ತಿಸುತ್ತದೆ. ಆಂಟೆನಾವನ್ನು ಕರ್ಣೀಯವಾಗಿ ಜೋಡಿಸದಿದ್ದರೆ ಈ ರೀತಿ ಮಾಡಲು ಸಾಧ್ಯವಿಲ್ಲ.

Written by - Bhavishya Shetty | Last Updated : May 29, 2022, 03:53 PM IST
  • ಡಿಟಿಎಚ್‌ ಆಂಟೆನಾಗಳ ಶೇಪ್‌ಗಳನ್ನು ಗಮನಿಸಿದ್ದೀರಾ
  • ಆಂಟೆನಾ ಓರೆಯಾಗಿರುವುದಕ್ಕೆ ಕಾರಣವೇನು?
  • ಡಿಟಿಎಚ್‌ ಆಂಟೆನಾ ಸಿಗ್ನಲ್‌ಗಳನ್ನು ಸೆರೆಹಿಡಿಯುತ್ತದೆ
Knowledge News: ಡಿಟಿಎಚ್‌ ಆಂಟೆನಾಗಳ ಶೇಪ್‌ ಈ ರೀತಿ ಇರಲು ಕಾರಣ ಏನು ಗೊತ್ತಾ?  title=
DTH Anteena Tilted

Knowledge News: ಡಿಟಿಎಚ್‌ನ ಆಂಟೆನಾ ಓರೆಯಾಗಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ. DTH ನ ಆಂಟೆನಾವನ್ನು ಯಾವಾಗಲೂ ಕರ್ಣೀಯವಾಗಿ ಇರಿಸಲಾಗುತ್ತದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು? ಡಿಟಿಎಚ್‌ನ ಆಂಟೆನಾಗಳು ಏಕೆ ಓರೆಯಾಗಿವೆ ಎಂದು ಅನೇಕ ಜನರು ಯೋಚಿಸುವುದಿಲ್ಲ. ಆದರೆ ಇಂದು ನಾವು ಆಂಟೆನಾಗಳ ಕರ್ಣೀಯ ಶೇಪ್‌ನಲ್ಲಿ ಏಕಿರುತ್ತದೆ ಎಂದು ಹೇಳಲಿದ್ದೇವೆ. 

ಇದನ್ನು ಓದಿ: Astrology: ಈ ಮೂರು ಅಕ್ಷರಗಳಿಂದ ಆರಂಭವಾಗುವ ಹೆಸರಿನ ಹುಡುಗಿಯರು ಕೈಹಿಡಿದವನನ್ನು ಮಾಲಾಮಾಲ್ ಮಾಡಿಬಿಡುತ್ತಾರೆ

ವಿಶೇಷ ಕಾರಣ: 
DTH ಆಂಟೆನಾವನ್ನು ಓರೆಯಾಗಿಸುವುದರ ಹಿಂದಿನ ಕಾರಣವು ತುಂಬಾ ವಿಶೇಷವಾಗಿದೆ. ಆಂಟೆನಾವನ್ನು ಕರ್ಣೀಯವಾಗಿ ಹಾಕದಿದ್ದರೆ, ಅದು ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. DTH ಆಂಟೆನಾ ಸಿಗ್ನಲ್‌ಗಳನ್ನು ಸೆರೆಹಿಡಿಯುತ್ತದೆ. ಬಳಿಕ ಸಿಗ್ನಲ್‌ಗಳನ್ನು ನಮ್ಮ ಟಿವಿಯಲ್ಲಿ ಚಿತ್ರಗಳಾಗಿ ಪರಿವರ್ತಿಸುತ್ತದೆ. ಆಂಟೆನಾವನ್ನು ಕರ್ಣೀಯವಾಗಿ ಜೋಡಿಸದಿದ್ದರೆ ಈ ರೀತಿ ಮಾಡಲು ಸಾಧ್ಯವಿಲ್ಲ. ಓರೆಯಾಗಿಸುವುದರ ಹಿಂದಿನ ಕಾರಣ ಅದರ ವಿನ್ಯಾಸ. ಅದರ ಓರೆಯಿಂದಾಗ, ಕಿರಣವು ಅದರ ಕಾನ್ಕೇವ್ ಮೇಲ್ಮೈಯನ್ನು ತಲುಪುತ್ತದೆ. ಹೀಗೆ ಮಾಡಿದಾಗ ಕಿರಣವು ಮತ್ತೆ ಹಿಂತಿರುಗುವುದಿಲ್ಲ. ಅದರ ವಿನ್ಯಾಸದ ಕಾರಣದಿಂದ ಈ ಕಿರಣವು ಕೇಂದ್ರೀಕೃತವಾಗುತ್ತದೆ. 

ನೇರವಾಗಿ ಆಂಟೆನಾ ಬಳಸಿದರೆ ಏನಾಗುತ್ತದೆ?
ಡಿಟಿಎಚ್ ಆಂಟೆನಾವನ್ನು ನೇರವಾಗಿ ಜೋಡಿಸಿದರೆ ಏನಾಗುತ್ತದೆ ಎಂಬುದನ್ನು ನಿಮಗೆ ತಿಳಿಸಲಿದ್ದೇವೆ. DTH ಆಂಟೆನಾವನ್ನು ನೇರವಾಗಿ ಹಾಕಿದರೆ, ಕಿರಣವು ಅದರ ಕಾನ್ಕೇವ್ ಮೇಲ್ಮೈಯನ್ನು ತಲುಪಿದ ಬಳಿಕ ಮತ್ತೆ ಪ್ರತಿಫಲಿಸುತ್ತದೆ. ಇದರಿಂದಾಗಿ ಕಿರಣವು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. 

ಇದನ್ನು ಓದಿ: Astro Tips: ಯಾವ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ!?

ಡಿಟಿಎಚ್‌ ಆಂಟೆನಾ ಆಫ್‌ಸೆಟ್ ಆಗಿದೆ. ಅಂದರೆ, ಇದು ಕ್ಯಾನ್ಕೇವ್ ಮೇಲ್ಮೈಯನ್ನು ಹೊಂದಿರುತ್ತದೆ. ಒಳಮುಖವಾಗಿ ಸ್ವಲ್ಪ ಬಾಗುತ್ತದೆ. ಸಿಗ್ನಲ್‌ಗಳು ಇದರ ಮೇಲ್ಮೈಯನ್ನು ತಲುಪಿದಾಗ, ಅವು ಆಂಟೆನಾದಲ್ಲಿ ಸ್ಥಾಪಿಸಲಾದ ಫೀಡ್ ಹಾರ್ನ್‌ನ ಮೇಲೆ ಕೇಂದ್ರೀಕರಿಸುತ್ತವೆ. ಈ ಫೀಡ್ ಹಾರ್ನ್‌ಗಳು ಸಿಗ್ನಲ್‌ಗಳನ್ನು ಸ್ವೀಕರಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News