Matador Movie : ಊರು ಸುತ್ತೋದಕ್ಕೆ 'ಮೆಟಡೋರ್' ರೆಡಿ : ಪ್ರಚಾರದ ಮೂಲಕ ಗಮನ ಸೆಳೆದ ಚಿತ್ರತಂಡ!

ಇದೇ ರೀತಿ 'ಮೆಟಡೋರ್' ಟೀಂ ಕೂಡ ಬೆಳ್ಳಿತೆರೆ ಮೇಲೆ ಕಮಾಲ್‌ ಮಾಡೋದಕ್ಕೆ ಸಜ್ಜಾಗಿದ್ದು, ಜೂನ್‌ 3ಕ್ಕೆ 'ಮೆಟಡೋರ್' ಸಿನಿಮಾ ಕನ್ನಡಿಗರ ಮನರಂಜಿಸಲು ಬರುತ್ತಿದೆ.

Written by - Malathesha M | Last Updated : Jun 1, 2022, 08:02 PM IST
  • ಸ್ಯಾಂಡಲ್‌ವುಡ್‌ ಈಗ ಹೊಸ ಹುರುಪಿನೊಂದಿಗೆ ಮುನ್ನುಗ್ಗುತ್ತಿದೆ
  • 'ಮೆಟಡೋರ್' ಟೀಂ ಕೂಡ ಬೆಳ್ಳಿತೆರೆ ಮೇಲೆ ಕಮಾಲ್‌ ಮಾಡೋದಕ್ಕೆ ಸಜ್ಜು
  • ಜೂನ್‌ 3ಕ್ಕೆ 'ಮೆಟಡೋರ್' ಸಿನಿಮಾ ಕನ್ನಡಿಗರ ಮನರಂಜಿಸಲು ಬರುತ್ತಿದೆ.
Matador Movie : ಊರು ಸುತ್ತೋದಕ್ಕೆ 'ಮೆಟಡೋರ್' ರೆಡಿ : ಪ್ರಚಾರದ ಮೂಲಕ ಗಮನ ಸೆಳೆದ ಚಿತ್ರತಂಡ! title=

ಸ್ಯಾಂಡಲ್‌ವುಡ್‌ ಈಗ ಹೊಸ ಹುರುಪಿನೊಂದಿಗೆ ಮುನ್ನುಗ್ಗುತ್ತಿದೆ. ಅದ್ರಲ್ಲೂ ಹೊಸಬರ ಸಿನಿಮಾಗಳು ಕಮಾಲ್‌ ಮಾಡುತ್ತಿವೆ. ಇದೇ ರೀತಿ 'ಮೆಟಡೋರ್' ಟೀಂ ಕೂಡ ಬೆಳ್ಳಿತೆರೆ ಮೇಲೆ ಕಮಾಲ್‌ ಮಾಡೋದಕ್ಕೆ ಸಜ್ಜಾಗಿದ್ದು, ಜೂನ್‌ 3ಕ್ಕೆ 'ಮೆಟಡೋರ್' ಸಿನಿಮಾ ಕನ್ನಡಿಗರ ಮನರಂಜಿಸಲು ಬರುತ್ತಿದೆ.

ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದೆ 'ಮೆಟಡೋರ್' ಸಿನಿಮಾ. ಹಾಗೇ ಜೂನ್ 3ರಿಂದ ಕನ್ನಡ ಬೆಳ್ಳಿತೆರೆ ಮೇಲೆ 'ಮೆಟಡೋರ್' ಪಯಣ ಶುರುವಾಗಲಿದೆ. ಒಟ್ಟು 5 ಕಥೆಯುಳ್ಳ ಈ ಸಿನಿಮಾ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಸುದರ್ಶನ್ ನಿರ್ದೇಶನ ಮಾಡಿದ್ದು, ಕಿರಣ್, ರವಿ ಮೈಸೂರು, ಅರ್ಚನಾ ಮಹೇಶ್,‌ ಮೋಹನ್ ಬಾಬು ನಟಿಸಿದ್ದಾರೆ.

ಇದನ್ನೂ ಓದಿ : ಜೂನ್‌ನಲ್ಲಿ OTTಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾ, ವೆಬ್ ಸಿರೀಸ್ ಲಿಸ್ಟ್ ಇಲ್ಲಿದೆ

'ಮೆಟಡೋರ್' ಪ್ರಚಾರ

'ಮೆಟಡೋರ್' ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಜೂನ್ 3ರಿಂದ ಬೆಳ್ಳಿತೆರೆ ಮೇಲೆ 'ಮೆಟಡೋರ್' ಪಯಣ ಶುರುವಾಗಲಿದೆ. ಹೀಗಾಗಿ ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ಮೆಟಡೋರ್ ವಾಹನಕ್ಕೆ ಪೋಸ್ಟರ್ ಅನ್ನ ಅಂಟಿಸಿ ಮೆಟಡೋರ್ ಮೂಲಕ ರಾಜ್ಯಾದ್ಯಂತ ಪ್ರಮೋಷನ್ ಮಾಡ್ತಿದ್ದಾರೆ. ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿ ಕಿರಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತಂಗಾಳಿ ನಾಗರಾಜ್ ಮ್ಯೂಸಿಕ್‌, ಗೋಪಿನಾಥ್ ಕ್ಯಾಮೆರಾ ವರ್ಕ್‌ ಇದೆ. ಈ ಸಿನಿಮಾದಲ್ಲಿ ಸಿ.ಎಚ್.ಕುಮಾರ್ ಸಂಕಲನ‌ವಿದೆ.

ತಮ್ಮ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ಮಾಪಕ ಕಿರಣ್ ಕುಮಾರ್, ಇಂಜಿನಿಯರಿಂಗ್ ಬ್ಯಾಗ್ರೌಂಡ್ ನಮ್ಮದು. ಒಟ್ಟಿಗೆ ಶಾರ್ಟ್ ಮೂವಿ ಮಾಡಿ ಬಳಿಕ ಸಿನಿಮಾ ಮಾಡುವ ಕನಸು ಹೊತ್ತು ಈಗ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಬೀದಿನಾಟಕದ ಮೂಲಕ ರಾಜ್ಯಾದ್ಯಂತ ಸಿನಿಮಾ ಪ್ರಚಾರ ಮಾಡಿದ್ದೇವೆ ಎಂದು ತಿಳಿಸಿದರು. ಒಟ್ಟಾರೆ 'ಮೆಟಡೋರ್' ಸಿನಿಮಾ ಸ್ಯಾಂಡಲ್‌ವುಡ್‌ ಪಾಲಿಗೆ ಮತ್ತೊಂದು ಪ್ರಯೋಗ ಮತ್ತು ಹೊಸ ಅನುಭವ ನೀಡೋದು ಗ್ಯಾರಂಟಿ.

ಇದನ್ನೂ ಓದಿ : Gajanana and Gang Movie : ಬೆಳ್ಳಿತೆರೆ ಮೇಲೆ 'ಗಜಾನನ & ಗ್ಯಾಂಗ್' ಅಬ್ಬರಕ್ಕೆ ಕೌಂಟ್‌ಡೌನ್‌..!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News