ಬೆಂಗಳೂರು : ಸಖತ್ ಟೆಕ್ನಿಕ್ ಬಳಸಿ ಕಳ್ಳತನ ಮಾಡಿ ತಪ್ಪಿಸಿಕೊಳ್ತಿದ್ದ ಖತರ್ನಾಕ್ ಕಳ್ಳನನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಈ ಕಳ್ಳ ಫಸ್ಟ್ ಬೈಕ್ ನೆಕ್ಸ್ಟ್ ಮೊಬೈಲ್.. ಎರಡೂ ತನ್ನ ಹತ್ತಿರ ಇಟ್ಟುಕೊಳ್ಳದೆ ಕಳೆದುಕೊಂಡ ಮಾಲೀಕರಿಗೆ ಮೀಟ್ ಮಾಡಿಸ್ತಿದ್ದ. ಪ್ರದೀಪ್ ಬಂಧಿತ ಕಳ್ಳನಾಗಿದ್ದಾನೆ. ಈ ಆರೋಪಿ ಫಸ್ಟ್ ಆನ್ಲೈನ್ ನಲ್ಲಿ ಬೈಕ್ ಸೇಲ್ ಮಾಡೋರನ್ನ ಸರ್ಚ್ ಮಾಡ್ತಿದ್ದ. ನಂತರ ಬೈಕ್ ಮಾಲೀಕರಿಗೆ ನಾನು ಖರೀದಿ ಮಾಡ್ತೀನಿ ಅಂತಾ ಆನ್ ಲೈನ್ ಮೂಲಕ ಕಾಂಟ್ಯಾಕ್ಟ್ ಮಾಡಿ, ಬೈಕ್ ಇರೋ ಜಾಗದ ವರೆಗೂ ಹೋಗಿ ಟೆಸ್ಟ್ ಡ್ರೈವ್ ಮಾಡ್ತೀನಿ ಅಂತಾ ಬೈಕ್ ಸಮೇತ ಎಸ್ಕೇಪ್ ಆಗುತ್ತಿದ್ದ. ಹೀಗೆ, ಆನ್ ಲೈನ್ ನಲ್ಲೇ ಹೈಫೈ ಮೊಬೈಲ್ ಮಾರಾಟ ಮಾಡೋರನ್ನ ಟಾರ್ಗೆಟ್ ಮಾಡ್ತಿದ್ದ.
ಇದನ್ನೂ ಓದಿ : ಗಣಿಗಾರಿಕೆ ಆರೋಪ: ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲು!
ಈ ಖತರ್ನಾಕ್ ಕಳ್ಳ ಐಫೋನ್, ಒನ್ ಪ್ಲಸ್ ಸೇರಿದಂತೆ 40ಕ್ಕೂ ಹೆಚ್ಚು ಸಾವಿರ ಮೌಲ್ಯದ ಮೊಬೈಲ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದ. ಯಾವುದೋ ಅಡ್ರೆಸ್ ಕೊಟ್ಟು ಅಲ್ಲಿಗೆ ಕರೆಸಿ ಮೊಬೈಲ್, ದುಡ್ಡಿಲ್ಲ ಹತ್ತು ನಿಮಿಷ ಬರ್ತೀನಿ ಅಂತ ಹೇಳಿ ಎಸ್ಕೇಪ್ ಆಗ್ತಿದ್ದ. ಹೀಗೆ, ಹಣ ತಗೊಂಡು ಬರ್ತಿನಿ ಅಂತಾ ಕದ್ದು ಬೈಕ್ ನ್ನು ಕೊಟ್ಟು ಎಸ್ಕೇಪ್ ಆಗ್ತಿದ್ದ. ಮೊಬೈಲ್ ಮಾಲೀಕರು ಬೈಕ್ ಕೊಟ್ಟ ಅಂತಾ ಕಂಪ್ಲೆಂಟ್ ಕೊಡದೆ ಸುಮ್ಮನಾಗ್ತಿದ್ದರು. ನಂತರ ಈ ಕಳ್ಳ ಬೈಕ್ ಮಾಲೀಕರಿಗೆ ಕರೆ ಮಾಡಿ ನಿಮ್ಮ ಬೈಕ್ ಇವರ ಬಳಿ ಇದೆ ಅಂತಾ ಮೊಬೈಲ್ ಮಾಲೀಕರ ನಂಬರ್ ಕೊಡುತ್ತಿದ್ದ. ಬೈಕ್ ಮಾಲೀಕರು, ಮೊಬೈಲ್ ಮಾಲೀಕರಿಗೆ ಕರೆ ಮಾಡಿ ಹಣ ಕೊಟ್ಟು ಬೈಕ್ ತೆಗೆದುಕೊಳ್ತಿದ್ದರು.
ಈ ಮಧ್ಯೆ ಆರೋಪಿ ಮೊಬೈಲ್ ಬೇರೆಡೆ ಮಾರಿ ಬಂದಿದ್ದ ಹಣದಿಂದ ಮಜಾ ಮಾಡ್ತಿದ್ದ. ಈ ರೀತಿ ಪ್ಲಾನ್ ಮಾಡಿ ಪೊಲೀಸ್ ಠಾಣೆವರೆಗೂ ಹೋಗದಂತೆ ಪ್ಲಾನ್ ಮಾಡ್ತಿದ್ದ ಈ ಕಳ್ಳ. ಇತ್ತೀಚಗೆ ಬೈಕ್ ಮಾಲೀಕರಿಂದ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಸಧ್ಯ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Srirangapatna Chalo : ಶ್ರೀರಂಗಪಟ್ಟಣದಲ್ಲಿ ಜೂನ್ 4, 5 ರಂದು ಸೆಕ್ಷನ್ 144 ಜಾರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ