ಡಾಲರ್‌ ಮುಂದೆ ರುಪಾಯಿ ಮೌಲ್ಯ ಕುಸಿತ: ಅನಿವಾಸಿ ಭಾರತೀಯರ ರಿಯಲ್ ಎಸ್ಟೇಟ್ ಉದ್ದಿಮೆಗೆ ಸಹಾಯಕ!

"ಭಾವನೆಗಳ ಹೊರತಾಗಿಯೂ, ಭಾರತೀಯ ರಿಯಲ್ ಎಸ್ಟೇಟ್ ಉದ್ದಿಮೆಯು ಅನಿವಾಸಿ ಭಾರತೀಯರಿಗೆ ಉತ್ತಮ ಸಂಪತ್ತು ಸೃಷ್ಟಿ ಮತ್ತು ಬೆಳವಣಿಗೆಯ ಆಯ್ಕೆಯಾಗಿದೆ" ಎಂದು ಹೇಳಿದ್ದಾರೆ.   

Written by - Bhavishya Shetty | Last Updated : Jun 6, 2022, 05:37 PM IST
  • ಯುಎಸ್ ಡಾಲರ್ ವಿರುದ್ಧ ಭಾರತೀಯ ಕರೆನ್ಸಿ ಕುಸಿತ
  • ಶೇ. 5.2ರಷ್ಟು ಕುಸಿತ ಕಂಡ ಭಾರತೀಯ ಹಣದ ಮೌಲ್ಯ
  • ಅನಿವಾಸಿ ಭಾರತೀಯರಿಗೆ ಸಹಾಯ
ಡಾಲರ್‌ ಮುಂದೆ ರುಪಾಯಿ ಮೌಲ್ಯ ಕುಸಿತ: ಅನಿವಾಸಿ ಭಾರತೀಯರ ರಿಯಲ್ ಎಸ್ಟೇಟ್ ಉದ್ದಿಮೆಗೆ ಸಹಾಯಕ!  title=
NRI

ಮುಂಬೈ: ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಜಾಗತಿಕ ಬಡ್ಡಿದರಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇದು ಅನಿವಾಸಿ ಭಾರತೀಯರಿಗೆ ರಿಯಲ್ ಎಸ್ಟೇಟ್ ಮಾರಾಟ ವೃದ್ಧಿಸಲು ಸಹಾಯ ಮಾಡುತ್ತಿದೆ. 

ಇದನ್ನು ಓದಿ: Visa on Arrival: ಅನಿವಾಸಿ ಭಾರತೀಯರೇ ಗಮನಿಸಿ: ಆಗಮನ ವೀಸಾ ಬಯಸುವವರು ಈ ನಿಯಮ ಪಾಲಿಸಲೇಬೇಕು!

2022 ರಲ್ಲಿ ಇಲ್ಲಿಯವರೆಗೆ ಯುಎಸ್ ಡಾಲರ್ ವಿರುದ್ಧ ಭಾರತೀಯ ಕರೆನ್ಸಿ ಶೇ. 5.2ರಷ್ಟು ಕುಸಿತ ಕಂಡಿದೆ. "ವಿಶ್ವದಾದ್ಯಂತ ಆರ್ಥಿಕ ಸನ್ನಿವೇಶವು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯದ ವಿಷಯದಲ್ಲಿ ಭಾರತವು ಸುರಕ್ಷಿತ ಧಾಮವಾಗಿ ಕಂಡುಬರುತ್ತಿದೆ" ಎಂದು ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆಯ ನರೆಡ್ಕೊದ ಉಪಕುಲಪತಿ ಮತ್ತು ಹಿರನಂದಾನಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ಹಿರಾನಂದಾನಿ ಹೇಳಿದ್ದಾರೆ. 

"ಭಾವನೆಗಳ ಹೊರತಾಗಿಯೂ, ಭಾರತೀಯ ರಿಯಲ್ ಎಸ್ಟೇಟ್ ಉದ್ದಿಮೆಯು ಅನಿವಾಸಿ ಭಾರತೀಯರಿಗೆ ಉತ್ತಮ ಸಂಪತ್ತು ಸೃಷ್ಟಿ ಮತ್ತು ಬೆಳವಣಿಗೆಯ ಆಯ್ಕೆಯಾಗಿದೆ" ಎಂದು ಹೇಳಿದ್ದಾರೆ. 

ಕುಸಿಯುತ್ತಿರುವ ರೂಪಾಯಿ ಮೌಲ್ಯವು, ಭಾರತದಲ್ಲಿ ವಸತಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಎನ್‌ಆರ್‌ಐಗಳಿಗೆ ಒಂದು ಉತ್ತಮ ಅವಕಾಶವಾಗಿದೆ ಎಂದು ಕೆ.ರಹೇಜಾ ಕಾರ್ಪ್ ಹೋಮ್ಸ್ ಮುಖ್ಯ ಕಾರ್ಯನಿರ್ವಾಹಕ ರಮೇಶ್ ರಂಗನಾಥನ್ ಹೇಳಿದರು.

ಯುಎಇ ಮತ್ತು ಸೌದಿ ಅರೇಬಿಯಾದಂತಹ ದೊಡ್ಡ ಭಾರತೀಯ ಜನಸಂಖ್ಯೆಯನ್ನು ಹೊಂದಿರುವ ಹಲವಾರು ಮಧ್ಯಪ್ರಾಚ್ಯ ದೇಶಗಳು ತಮ್ಮ ಕರೆನ್ಸಿಗಳನ್ನು ಡಾಲರ್‌ಗೆ ಜೋಡಿಸುತ್ತವೆ. ಇದರರ್ಥ ರೂಪಾಯಿಯು ಅವುಗಳ ವಿರುದ್ಧ ಗ್ರೀನ್‌ಬ್ಯಾಕ್‌ಗೆ ಸಮಾನವಾದ ದರದಲ್ಲಿ ಕುಸಿದಿದೆ.

ಇದನ್ನು ಓದಿ: NRIಗಳೇ ಗಮನಿಸಿ: ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಕೆನಡಾ ಚಿಂತನೆ

ಮುಂಬೈ, ದೆಹಲಿ-ಎನ್‌ಸಿಆರ್, ಬೆಂಗಳೂರು ಮತ್ತು ಪುಣೆಯಂತಹ ಶ್ರೇಣಿ-1 ಮೆಟ್ರೋಪಾಲಿಟನ್ ನಗರಗಳು, ಭಾರತದಾದ್ಯಂತ ಇರುವ ಪ್ರವಾಸಿ ತಾಣಗಳು, ಗಿರಿಧಾಮಗಳು  ಎನ್‌ಆರ್‌ಐಗಳಿಗೆ ದೇಶದ ಮೇಲೆ ಹೆಚ್ಚು ಆಸಕ್ತಿ ಹೊಂದಲು ಕಾರಣವಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News