ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್ ಅವರು ಈ ವರ್ಷದ ಪ್ರಶಸ್ತಿಯ ಪದಕವು ಎರಡು ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನ ಕಸ್ಟಮ್ಸ್ ಇಲಾಖೆಯಲ್ಲಿ ಸಿಲುಕಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಡಿವೈನ್ ಟೈಡ್ಸ್ ಮ್ಯೂಸಿಕ್ ಆಲ್ಬಂಗೆ ಏಪ್ರಿಲ್‌ನಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದ ಬೆಂಗಳೂರಿನ ರಿಕಿ ಕೇಜ್, ತಮ್ಮ ಮೆಡಲ್ ಇನ್ನೂ ಕೈಸೇರದಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅದು ಬೆಂಗಳೂರಿನ ಕಸ್ಟಮ್ಸ್‌ನಲ್ಲೇ ಸಿಲುಕಿರುವುದಾಗಿ ರಿಕಿ ತಿಳಿಸಿದ್ದಾರೆ.
ಇದನ್ನೂ ಓದಿ: Vikram Collection: ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ ತಮಿಳು ಸಿನಿಮಾ ‘ವಿಕ್ರಮ್’ ದಾಖಲೆ
Request urgent help @ChennaiCustoms @mumbaicus1 @CommrBlrCityCus @Customs_India. I recently won a Grammy Award, my medallion is stuck in Customs Bengaluru for over 2 month. @FedEx @FedExHelp @FedExIndia is nonresponsive and not helpful. Could you please help me get my medal?
— Ricky Kej (@rickykej) June 7, 2022
ಅವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರು ನಗರದ ಕಸ್ಟಮ್ಸ್ ಮತ್ತು ಸಿಬಿಐಸಿಯು ಅದಾಗಲೇ ಅಗತ್ಯ ಕ್ರಮ ಕೈಗೊಂಡಿರುವುನ್ನು ಗಮನಿಸಿದ್ದೇನೆ. ರಿಕಿ ಕೇಜ್ ಅವರು ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದಿದ್ದಾರೆ.
ಈ ಎಲ್ಲದರ ಬೆನ್ನಲ್ಲೇ ಮಧ್ಯಾಹ್ನದ ನಂತರ ರಿಕಿ ಕೇಜ್ ಅವರ ಮೆಡಲ್ ಕಸ್ಟಮ್ಸ್‌ನಿಂದ ಮುಂದೆ ಸಾಗಲು ಅನುಮತಿ ಸಿಕ್ಕಿದೆ.
I notice that @CommrBlrCityCus and @cbic_india are already doing the facilitation. Shri @rickykej is being in touch. Hopefully, will be resolved soon. @FinMinIndia https://t.co/3Mv54w4yad
— Nirmala Sitharaman (@nsitharaman) June 7, 2022
ಖ್ಯಾತ ರಾಕ್ ಸಂಗೀತಗಾರ ಸ್ಟೂವರ್ಟ್ ಕೋಪ್‌ಲ್ಯಾಂಡ್ ಅವರೊಂದಿಗೆ ರಿಕಿ ಕೇಜ್ ಡಿವೈನ್ ಟೈಡ್ಸ್ ರೂಪಿಸಿದ್ದಾರೆ. ಈ ಮ್ಯೂಸಿಕ್ ಆಲ್ಬಂನಲ್ಲಿ ಒಟ್ಟು 9 ಹಾಡುಗಳಿವೆ. ಇದು ರಿಕಿ ಅವರಿಗೆ ಸಂದ ಎರಡನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ. 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ರಿಕಿ ಕೇಜ್ ಮುಡಿಗೇರಿಸಿಕೊಂಡಿದ್ದರು.
ಇದನ್ನೂ ಓದಿ: Samantha: ನಟಿ ಸಮಂತಾ ಫಿಟ್ನೆಸ್ ಸಿಕ್ರೇಟ್ ಇಲ್ಲಿದೆ ನೋಡಿ.. ನೀವೂ ಒಮ್ಮೆ ಟ್ರೈ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.