ಬಿಎಂಟಿಸಿ ಚಾಲಕರ ಮೇಲೆ ಕರಿನೆರಳು .! ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆಯಾ ಬಿಎಂಟಿಸಿ..?

ಬಿಎಂಟಿಸಿ ಚಾಲಕರ ಪಾಲಿಗೆ ಇದೊಂದು ಶಾಕಿಂಗ್ ಸುದ್ದಿ.  ಬಿಎಂಟಿಸಿಗೆ ಖಾಸಗೀ ಚಾಲಕರು ಎಂಟ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಹೌದು ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ ನಡೆದಿದೆ  ಎಂದು ಹೇಳಲಾಗುತ್ತಿದೆ. 

Written by - Ranjitha R K | Last Updated : Jun 8, 2022, 10:10 AM IST
  • ಖಾಸಗೀಯಾಗುತ್ತಾ ಬಿಎಂಟಿಸಿ
  • ಬಿಎಂಟಿಸಿಗೆ ಎಂಟ್ರಿಯಾಗುತ್ತಾರಾ ಖಾಸಗೀ ಚಾಲಕರು
  • ಬಿಎಂಟಿಸಿ ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ
ಬಿಎಂಟಿಸಿ ಚಾಲಕರ ಮೇಲೆ  ಕರಿನೆರಳು .! ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆಯಾ ಬಿಎಂಟಿಸಿ..? title=
BMTC (File photo)

ಬೆಂಗಳೂರು : ಬಿಎಂಟಿಸಿ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಔಟ್ ಸೋರ್ಸ್ ಏಜೆನ್ಸಿಯಿಂದ ಚಾಲಕರ ನೇಮಕಕ್ಕೆ ಬಿಎಂಟಿಸಿ ಚಿಂತನೆ  ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಎಂಟಿಸಿ ಆಡಳಿತ ಮಂಡಳಿಯಿಂದ ಈ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.  

ಬಿಎಂಟಿಸಿ ಚಾಲಕರ ಪಾಲಿಗೆ ಇದೊಂದು ಶಾಕಿಂಗ್ ಸುದ್ದಿ. ಬಿಎಂಟಿಸಿಗೆ ಖಾಸಗೀ ಚಾಲಕರು ಎಂಟ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಹೌದು ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.  
ಗುತ್ತಿಗೆ ಆಧಾರದಲ್ಲಿ ಖಾಸಗೀ ಡ್ರೈವರ್ ನಿಯೋಜನೆಗೆ ಬಿಎಂಟಿಸಿ  ಮುಂದಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : ಬೀದಿನಾಯಿಗಳಿಗೆ ಹಿಂಸೆ ಕೊಟ್ಟರೆ ಸೇರಬೇಕಾಗುತ್ತದೆ ಜೈಲು, ಬೀಳಲಿದೆ ಭಾರೀ ದಂಡ ..!

ಬಿಎಂಟಿಸಿ ಈ ಯೋಚನೆಯಿಂದ ಚಾಲಕರ ಮೇಲೆ  ಖಾಸಗಗೀಕರಣದ ಕರಿನೆರಳು ಹರಿದಾಡುತ್ತಿದೆ. ಬಾಹ್ಯ ಏಜೆನ್ಸಿ ಮೂಲಕ ಚಾಲಕರ ನೇಮಕಕ್ಕೆ ಬಿಎಂಟಿಸಿ ಮುಂದಾದರೆ  ಖಾಸಗಿ ಚಾಲಕರು ಬಿಎಂಟಿಸಿಗೆ ಪ್ರವೇಶ ಪಡೆಯುತ್ತಾರೆ. ಈ ಬಗ್ಗೆ ನಿನ್ನೆ ಬಿಎಂಟಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. 

ಖಾಸಗಿ ಚಾಲಕರನ್ನು ನೇಮಕ ಮಾಡುವ ಮೂಲಕ ಉಳಿತಾಯದ ಯೋಜನೆಯಲ್ಲಿದೆ ಬಿಎಂಟಿಸಿ. ಒಂದು ವೇಳೆ ಬಿಎಂಟಿಸಿಯ ಈ  ಪ್ಲ್ಯಾನ್ ಗೆ ಸರ್ಕಾರ ಅಸ್ತು ಎಂದು ಹೇಳಿದರೆ ಈಗಾಗಲೇ ವಜಾಗೊಂಡ, ಕೆಲಸ ಕಳೆದುಕೊಂಡ ಕಾರ್ಮಿಕರ ಆಸೆಗೆ ಶಾಶ್ವತ ತಣ್ಣೀರು ಎರಚಿದಂತಾಗುತ್ತದೆ. ಬಿಎಂಟಿಸಿ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಸಾರಿಗೆ ನೌಕರರ ಸಂಘದಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ.  ಈ ನಿರ್ಧಾರದಿಂದ ಸಾರಿಗೆ ನೌಕರರ ಸಂಘ ಕೆಂಡಾಮಂಡಲವಾಗಿದೆ. 

ಇದನ್ನೂ ಓದಿ : ಜಾಮಿಯಾ ಮಸೀದಿಯಲ್ಲಿ ಮೊದಲು ದೇವಸ್ಥಾನ ಇತ್ತು ಅನ್ನೋದು ಗೊತ್ತಾಗಿದೆ- ಮುತಾಲಿಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News