Priyanka Chopra: 22 ವರ್ಷಗಳ ಹಿಂದೆ ಹಿಂಗಿದ್ರು ನಟಿ ಪ್ರಿಯಾಂಕಾ ಚೋಪ್ರಾ!

ಜೀರೋ ಸೈಜ್ ಫಿಗರ್ ಹೊಂದಿದ್ದ ಪ್ರಿಯಾಂಕಾ ಪರಿಪೂರ್ಣ ಥ್ರೋಬ್ಯಾಕ್ ಫೋಟೋವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Written by - Puttaraj K Alur | Last Updated : Jun 10, 2022, 07:04 PM IST
  • 22 ವರ್ಷಗಳ ಹಳೆ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳ ಹುಬ್ಬೇರಿಸಿದ ಪ್ರಿಯಾಂಕಾ ಚೋಪ್ರಾ
  • ಮಾಲ್ಡೀವ್ಸ್‌ನ ಬೀಚ್‌ನಲ್ಲಿ ನಿಂತುಕೊಂಡು ಮೋಹಕ್ ಪೋಸ್ ನೀಡಿರುವ ನಟಿ ಪಿಗ್ಗಿ
  • 18ನೇ ವಯಸ್ಸಿನಲ್ಲಿ ವಿಶ್ವ ಸುಂದರಿಯಾದ ನಟಿಯ ಫೋಟೋ ಮೆಚ್ಚಿಕೊಂಡ ಅಭಿಮಾಗಳು
Priyanka Chopra: 22 ವರ್ಷಗಳ ಹಿಂದೆ ಹಿಂಗಿದ್ರು ನಟಿ ಪ್ರಿಯಾಂಕಾ ಚೋಪ್ರಾ! title=
ಮೋಹಕ್ ಪೋಸ್ ನೀಡಿರುವ ನಟಿ ಪಿಗ್ಗಿ

ನವದೆಹಲಿ: ಬಾಲಿವುಡ್ ಖ್ಯಾತ ನಟಿ 22 ವರ್ಷಗಳ ಹಿಂದೆ ಹೇಗಿದ್ರು ಗೊತ್ತಾ..? ಜೀರೋ ಸೈಜ್ ಫಿಗರ್ ಹೊಂದಿದ್ದ ಪ್ರಿಯಾಂಕಾ ಒಂದು ಪರಿಪೂರ್ಣ ಥ್ರೋಬ್ಯಾಕ್ ಫೋಟೋವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಿಯಾಂಕಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ವರ್ಷ 2000ರಲ್ಲಿ ತೆಗೆಯಲಾಗಿತ್ತು. ಮಾಲ್ಡೀವ್ಸ್‌ನ ಬೀಚ್‌ನಲ್ಲಿ ನಿಂತುಕೊಂಡಿದ್ದ ನಟಿ ಮೋಹಕ ಪೋಸ್ ನೀಡಿರುವುದನ್ನು ನೀವು   ಕಾಣಬಹುದು.

22 ವರ್ಷಗಳ ಹಳೆ ಫೋಟೋವನ್ನು ಪೋಸ್ಟ್ ಮಾಡಿರುವ ಪಿಗ್ಗಿ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ್ದಾರೆ. ‘Circa November 2000. Presenting my 18 yr old “smolder’’ ಎಂದು ಪ್ರಿಯಾಂಕಾ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋಗೆ ಪತಿ ನಿಕ್ ಜೋನಾಸ್, ಬೆಂಕಿ ಎಮೋಜಿ ಬಳಸಿ ಕಾಮೆಂಟ್ ಮಾಡಿದ್ದಾರೆ. ನಟ ರಣವೀರ್ ಸಿಂಗ್ ಸೇರಿದಂತೆ ಅನೇಕ ಪಿಗ್ಗಿ ಸ್ನೇಹಿತರು ಮತ್ತು ಅಭಿಮಾನಿಗಳು ಸಹ ಫೋಟೋ ನೋಡಿ ಮೆಚ್ಚಿಕೊಂಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.   

 
 
 
 

 
 
 
 
 
 
 
 
 
 
 

A post shared by Priyanka (@priyankachopra)

ಇದನ್ನೂ ಓದಿ: ಲಾಂಗ್ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿ ಬಂದ್ರು ನಟಿ ಕಾವ್ಯಾ..!

ಪ್ರಿಯಾಂಕಾ ಚೋಪ್ರಾ ತನ್ನ ಹದಿಹರೆಯದ ದಿನಗಳ ಮತ್ತೊಂದು ಥ್ರೋಬ್ಯಾಕ್ ಚಿತ್ರ ಹಂಚಿಕೊಂಡಿದ್ದಾರೆ. ಇದು 18ನೇ ವಯಸ್ಸಿನಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾಗಿದೆ. ‘18ನೇ ವಯಸ್ಸಿನಲ್ಲಿ ವಿಶ್ವ ಸುಂದರಿ! ಸಹಸ್ರಮಾನದ ತಿರುವು... 2000 ವರ್ಷ! ವಾಹ್… ನಾನು ಈ ಕನಸು ಕಳೆದಂತೆ ಭಾಸವಾಗುತ್ತಿದೆ. ಈಗ, ಸುಮಾರು 20 ವರ್ಷಗಳ ನಂತರ, ಯಥಾಸ್ಥಿತಿಯನ್ನು ಬದಲಾಯಿಸುವ ನನ್ನ ಉತ್ಸಾಹವು ಬಲವಾಗಿ ಉಳಿದಿದೆ. ಹುಡುಗಿಯರು ಅರ್ಹವಾದ ಅವಕಾಶಗಳನ್ನು ಪಡೆದರೆ ಬದಲಾವಣೆ ತರುವ ಶಕ್ತಿಯನ್ನು ಹೊಂದಿದ್ದಾರೆಂದು ನಾನು ನಿಜವಾಗಿಯೂ ನಂಬುತ್ತೇನೆ’ ಎಂದು ಈ ಫೋಟೋಗೆ ಅವರು ಕ್ಯಾಪ್ಶನ್ ನೀಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Priyanka (@priyankachopra)

ನಿಕ್ ಜೋನಾಸ್ ಮದುವೆಯಾದ ಬಳಿಕ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲಿಯೂ ನಟನೆ ಮುಂದುವರೆಸಿದ್ದಾರೆ. ಪಿಗ್ಗಿ ಕೊನೆಯದಾಗಿ ಮ್ಯಾಟ್ರಿಕ್ಸ್ 4ನಲ್ಲಿ ಕಾಣಿಸಿಕೊಂಡಿದ್ದರು. ಸಿಟಾಡೆಲ್ ಅವರ ಮುಂದಿನ ಪ್ರಾಜೆಕ್ಟ್ ಆಗಿದೆ.

ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯಾ ಶಾ-ವರುಣ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News