ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

ಮೂತ್ರ ದ್ವಾರದ ಸೋಂಕಿನಿಂದಾಗಿ ಕರುಣಾನಿಧಿ ಅವರಿಗೆ ಜ್ವರ ಕಾಣಿಸಿದೆ. 24 ಗಂಟೆ ಸತತವಾಗಿ ಅವರ ಆರೋಗ್ಯದತ್ತ ಗಮನ ಹರಿಸುತ್ತಿದ್ದೇವೆ ಎಂದು ಕಾವೇರಿ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದೆ.

Last Updated : Jul 27, 2018, 11:29 AM IST
ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ title=

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ನಾಯಕ ಎಂ. ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ನಿನ್ನೆಯಿಂದ ಅವರ ಗೋಪಾಲಪುರಂ ನಿವಾಸದಲ್ಲಿ ಚಿಕಿತ್ಸೆ ನೀಡುತ್ತಿದೆ.

ಕರುಣಾನಿಧಿ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆ ಕಾಡುತ್ತಿದೆ, ಮೂತ್ರ ದ್ವಾರದ ಸೋಂಕಿನಿಂದಾಗಿ ಕರುಣಾನಿಧಿ ಅವರಿಗೆ ಜ್ವರ ಕಾಣಿಸಿದೆ. 24 ಗಂಟೆ ಸತತವಾಗಿ ಅವರ ಆರೋಗ್ಯದತ್ತ ಗಮನ ಹರಿಸುತ್ತಿದ್ದೇವೆ ಎಂದು ಕಾವೇರಿ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದೆ. 

ಕರುಣಾನಿಧಿ ಅಸ್ವಸ್ಥಗೊಂಡಿರುವ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಸೇರಿದಂತೆ ಹಿರಿಯ ಸಚಿವರು ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.

ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಸೋಂಕು ಹೆಚ್ಚಾಗುವ ಕಾರಣದಿಂದ ಅವರ ಬಳಿ ಹೆಚ್ಚು ಜನರನ್ನು ಬಿಡಲಾಗುತ್ತಿಲ್ಲ ಎಂದು ಕರುಣಾನಿಧಿ ಪುತ್ರ ಎಂ.ಕೆ. ಸ್ಟಾಲಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Trending News