ಮಾರುಕಟ್ಟೆಗೆ ಬಂದಿದೆ ಕೇವಲ 11 ಸಾವಿರ ರೂ.ಗೆ 5G ಸ್ಮಾರ್ಟ್‌ಫೋನ್ ..!

CoolPad 11 ಸಾವಿರ ರೂಪಾಯಿಗಳಲ್ಲಿ ್ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಫೋನ್ 4500mAhನ ಪ್ರಬಲ ಬ್ಯಾಟರಿ ಮತ್ತು 50MP ಕ್ಯಾಮೆರಾವನ್ನು ಹೊಂದಿರುತ್ತದೆ. Coolpad Cool 20s ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.  

Written by - Ranjitha R K | Last Updated : Jun 13, 2022, 01:24 PM IST
  • ಕಡಿಮೆ ಬೆಲೆಯ 5ಜಿ ಸ್ಮಾರ್ಟ್ ಫೋನ್
  • Coolpad Cool 20s ಚೀನಾದಲ್ಲಿ ಬಿಡುಗಡೆಯಾಗಿದೆ
  • Coolpad Cool 20s ನಿಖರ ಬೆಲೆ ಎಷ್ಟಿದೆ ತಿಳಿಯಿರಿ
ಮಾರುಕಟ್ಟೆಗೆ ಬಂದಿದೆ ಕೇವಲ 11 ಸಾವಿರ ರೂ.ಗೆ  5G ಸ್ಮಾರ್ಟ್‌ಫೋನ್ ..!   title=
Coolpad Cool20s Launch (file photo)

ಬೆಂಗಳೂರು : CoolPad ಚೀನಾದಲ್ಲಿ Coolpad Cool 20s ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಕಂಪನಿಯು ಕೂಲ್ 20 ಹ್ಯಾಂಡ್‌ಸೆಟ್ ಬಿಡುಗಡೆ ಮಾಡುವ ಬಗ್ಗೆ ಹೇಳಿತ್ತು. ಆದರೆ ಅದು 4G ಸಾಧನವಾಗಿತ್ತು. ಇದರ ನಂತರ ನವೆಂಬರ್ 2021 ರಲ್ಲಿ Cool 20 Pro, 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಲಿರುವ CoolPad  Cool 20s ಕೂಡಾ 5G ಸ್ಮಾರ್ಟ್‌ಫೋನ್ ಆಗಿದೆ. Coolpad Cool 20s ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...

Coolpad Cool 20s ಬೆಲೆ :
Coolpad Cool 20s ನ ಆರಂಭಿಕ ಬೆಲೆ 11,577 ರೂ. ಇದು ಫೈರ್ ಫ್ಲೈ ಬ್ಲಾಕ್, ಮೂನ್ ಶ್ಯಾಡೋ ವೈಟ್ ಮತ್ತು ಐಜೋರ್  ಬ್ಲೂ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಚೀನಾದಲ್ಲಿ ಪ್ರಸ್ತುತ ಈ ಫೋನಿನ ಪ್ರಿ ಆರ್ಡರ್ ನಡೆಯುತ್ತಿದೆ.  ಜೂನ್ 17 ರಂದು ಮೊದಲ ಬಾರಿಗೆ ಸೇಲ್ ನಡೆಯುತ್ತಿದೆ. 

ಇದನ್ನೂ ಓದಿ : Jio-V ಗೆ ಇದುವರೆಗೆ ಸಾಧ್ಯವಾಗದ ಈ ಪ್ರಯೋಜನಗಳನ್ನು ನೀಡುತ್ತದೆ Airtel

Coolpad ಕೂಲ್ 20s ವಿಶೇಷಣಗಳು : 
ಕೂಲ್‌ಪ್ಯಾಡ್ ಕೂಲ್ 20s ಟಿಯರ್‌ಡ್ರಾಪ್ ನಾಚ್ ವಿನ್ಯಾಸದೊಂದಿಗೆ 6.58-ಇಂಚಿನ LCD ಪ್ಯಾನೆಲ್ ಅನ್ನು ಹೊಂದಿದೆ. ಇದು ಪೂರ್ಣ HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಅನ್ನು ನೀಡುತ್ತದೆ. ಡಿವೈಸ್ ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಇದರ ಹಿಂಭಾಗದ ಪ್ಯಾನಲ್  50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. 

Coolpad ಕೂಲ್ 20s ಬ್ಯಾಟರಿ :
ಡೈಮೆನ್ಷನ್ 700 ಕೂಲ್  ಇದರ ಮೇಲ್ಭಾಗದಲ್ಲಿದೆ. ಫೋನ್ 4 GB, 6 GB, 8 GB RAM ಮತ್ತು 128 ಇನ್ಬಿಲ್ಟ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ಸಾಧನವು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 4,500mAh ಬ್ಯಾಟರಿಯನ್ನು ಪ್ಯಾಕ್ ಅನ್ನು ಹೊಂದಿದೆ. 

ಇದನ್ನೂ ಓದಿ : Reliance jio: ಅಗ್ಗದ ದರದಲ್ಲಿ ನಿತ್ಯ 1GB ಡೇಟಾ, ಅನಿಯಮಿತ ಕರೆ ಜೊತೆಗೆ ಸಿಗುತ್ತೆ ಹಲವು ಪ್ರಯೋಜನ

Coolpad ಕೂಲ್ 20s ವೈಶಿಷ್ಟ್ಯಗಳು :
ಈ ಫೋನ್ ನಲ್ಲಿ ಲಭ್ಯವಿರುವ ಇತರ ವೈಶಿಷ್ಟ್ಯಗಳೆಂದರೆ ಡ್ಯುಯಲ್ ಸಿಮ್ ಸ್ಲಾಟ್, 5G, Wi-Fi, ಬ್ಲೂಟೂತ್ 5.0, GPS, USB-C, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, 3.5mm ಆಡಿಯೋ ಜ್ಯಾಕ್ ಮತ್ತು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News