WhatsApp Cashback Offer: ವಾಟ್ಸ್ ಆಪ್ ನಿಂದ ಜಬರ್ದಸ್ತ್ ಕ್ಯಾಶ್ ಬ್ಯಾಕ್ ಕೊಡುಗೆ, 1 ರೂ. ಕಳುಹಿಸಿ 35 ರೂ. ಪಡೆಯಿರಿ

WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ. ತ್ವರಿತ ಸಂದೇಶ ರವಾನಿಸುವ ಈ ಆಪ್ ನ ವಾಟ್ಸ್ ಆಪ್ ಪೇಮೆಂಟ್ಸ್ ವೈಶಿಷ್ಟ್ಯ ಬಳಸಿ ಆನ್ಲೈನ್ ಪೇಮೆಂಟ್ ಮಾಡುವವರಿಗೆ ಕಂಪನಿ ರೂ.105 ಕ್ಯಾಶ್ ಬ್ಯಾಕ್ ನೀಡುತ್ತಿದೆ.   

Written by - Nitin Tabib | Last Updated : Jun 11, 2022, 01:31 PM IST

    ಬಳಕೆದಾರರಿಗೊಂದು ಸಂತಸದ ಸುದ್ದಿ.

    ವಾಟ್ಸ್ ಆಪ್ ಪೇಮೆಂಟ್ಸ್ ವೈಶಿಷ್ಟ್ಯ ಬಳಸಿ ಆನ್ಲೈನ್ ಪೇಮೆಂಟ್ ಮಾಡುವವರಿಗೆ ಕಂಪನಿ ರೂ.105 ಕ್ಯಾಶ್ ಬ್ಯಾಕ್ ನೀಡುತ್ತಿದೆ.

    ಈ ಕೊಡುಗೆಯ ಲಾಭವನ್ನು ಹೇಗೆ ಪಡೆದುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ

WhatsApp Cashback Offer: ವಾಟ್ಸ್ ಆಪ್ ನಿಂದ ಜಬರ್ದಸ್ತ್ ಕ್ಯಾಶ್ ಬ್ಯಾಕ್ ಕೊಡುಗೆ, 1 ರೂ. ಕಳುಹಿಸಿ 35 ರೂ. ಪಡೆಯಿರಿ title=
Whatsapp Payments Feature

WhatsApp ತನ್ನ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಪಡೆದುಕೊಳ್ಳುವ ಅವಕಾಶ ನೀಡುತ್ತಿದೆ. ಹೌದು, ಭಾರತದಲ್ಲಿ ವಾಟ್ಸ್ ಆಪ್ ಬಳಕೆದಾರರಿಗೆ ರೂ.105 ಕ್ಯಾಶ್ ಬ್ಯಾಕ್ ಕೊಡುಗೆ ರೂಪದಲ್ಲಿ ಸಿಗುತ್ತಿದೆ. ಒಂದು ವೇಳೆ ನಿಮಗೂ ತಿಳಿದಿಲ್ಲ ಎಂದಾದರೆ, ಈ ತ್ವರಿತ ಸಂದೇಶ ರವಾನಿಸುವ ಆಪ್ ನಲ್ಲಿ ಬಳಕೆದಾರರು ಕೇವಲ ವಿಡಿಯೋ, ಸಂದೇಶ ಹಾಗೂ ವೈಸ್ ಕಾಲ್ ಮಾಡುವುದರ ಜೊತೆಗೆ ಹಣ ಪಾವತಿಯನ್ನು ಕೂಡ ಮಾಡಬಹುದು.

ಭಾರತೀಯ ಬಳಕೆದಾರರನ್ನು ವಾಟ್ಸ್ ಆಪ್ ಪೇನತ್ತ ಆಕರ್ಷಿಸಲು ವಾಟ್ಸ್ ಆಪ್ ಈ ಹೆಜ್ಜೆಯನ್ನಿಟ್ಟಿದೆ. ಈ ಕ್ಯಾಶ್ ಬ್ಯಾಕ್ ಕೊಡುಗೆಯ ಲಾಭವನ್ನು ಹೇಗೆ ಪಡೆಯಬೇಕು ತಿಳಿದುಕೊಳ್ಳೋಣ ಬನ್ನಿ,

ವಾಟ್ಸ್ ಆಪ್ ಬಳಕೆದಾರರಿಗೆ ಈ ರೀತಿ ಕ್ಯಾಶ್ ಬ್ಯಾಕ್ ಸಿಗುತ್ತಿದೆ
ವಾಟ್ಸ್ ಆಪ್ ಪೇಮೆಂಟ್ ವೈಶಿಷ್ಟ್ಯವನ್ನು ಬಳಸಿ ಆನ್ಲೈನ್ ಪೇಮೆಂಟ್ ಮಾಡಿದರೆ ಬಳಕೆದಾರರಿಗೆ ಒಟ್ಟು 105 ರೂ. ಕ್ಯಾಶ್ ಬ್ಯಾಕ್ ಸಿಗುತ್ತಿದೆ. ಇದಲ್ಲದೆ ಮುಂದಿನ ಮೂರು ಪೇಮೆಂಟ್ ಗಳಿಗಾಗಿ ವಾಟ್ಸ್ ಆಪ್ ತಲಾ 35-35 ಕ್ಯಾಶ್ ಬ್ಯಾಕ್ ನೀಡುತ್ತಿದೆ. ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಲು ಪ್ರಸ್ತುತ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ. ಅಂದರೆ ನೀವು 1 ರೂ. ವಾಟ್ಸ್ ಆಪ್ ಪೇ ಮೂಲಕ ಪಾವತಿಸಿ ರೂ.35 ಪಡೆಯಬಹುದು. ಆದರೆ, ಈ ಕೊಡುಗೆ ಕೇವಲ ಸೀಮಿತ ಸಮಯಕ್ಕೆ ಮತ್ತು ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ನೀವೂ ಕೂಡ ನಿಮ್ಮ ವಾಟ್ಸ್ ಆಪ್ ಖಾತೆಯ ಪೇಮೆಂಟ್ ಸೆಕ್ಷನ್ ಗೆ ಬೇಟಿ ನೀಡಿ ನಿಮಗೂ ಈ ಕ್ಯಾಶ್ ಬ್ಯಾಕ್ ಕೊಡುಗೆ ಅನ್ವಯಿಸುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು. 

ವಾಟ್ ಆಪ್ ಮೂಲಕ ಈ ರೀತಿ ಪೇಮೆಂಟ್ ಮಾಡಿ
>> ಇದಕ್ಕಾಗಿ ಮೊಟ್ಟಮೊದಲು ನೀವು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ತೆರೆಯಬೇಕು.
>> ಬಳಿಕ ಬಲಭಾಗದಲ್ಲಿ ಎಲ್ಲಕ್ಕಿಂತ ಮೇಲೆ ನೀಡಲಾಗಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ಕಿಸಿ, ಅದರಲ್ಲಿನ ಪೇಮೆಂಟ್ಸ್ ಆಯ್ಕೆಯನ್ನು ಆಯ್ದುಕೊಳ್ಳಿ.
>> ಈಗ ನಿಮಗೆ ಆಡ್ ಪೇಮೆಂಟ್ ಮೆಥಡ್ ಕಾಣಿಸಿಕೊಳ್ಳಲಿದೆ ಮತ್ತು ಅದರ ಮೇಲೆ ಕ್ಲಿಕ್ಕಿಸಿ.
>> ಬಳಿಕ ಸ್ಕ್ರೀನ್ ಮೇಲೆ ಬಿತ್ತರಗೊಳ್ಳುವ ನೀತಿ-ನಿಯಮಗಳನ್ನು ನೀವು ಒಪ್ಪಿಕೊಳ್ಳಬೇಕು. 
>> ಈಗ ನಿಮ್ಮ ಮುಂದೆ ಬ್ಯಾಂಕ್ ಗಳ ಪಟ್ಟಿ ಪ್ರಕಟಗೊಳ್ಳಲಿದ್ದು, ಅದರಿಂದ ನೀವು ನಿಮ್ಮ ಬ್ಯಾಂಕ್ ಅನ್ನು ಆಯ್ದುಕೊಳ್ಳಬೇಕು.
>> ಬಳಿಕ ಖಾತೆ ನಿಮ್ಮ ಸ್ವಂತ ಖಾತೆಯಾಗಿದೆ ಎಂಬುದನ್ನು ನೀವು ಪುಷ್ಠಿಕರಿಸಬೇಕು. ಇದಕ್ಕಾಗಿ ನಿಮ್ಮ ಬಳಿ ಒಂದು ಸಂದೇಶ ಬರಲಿದ್ದು, ಆಪ್ ಗೆ ನೀವು ಇದಕ್ಕಾಗಿ ಅನುಮತಿ ನೀಡಬೇಕು.

ಇದನ್ನೂ ಓದಿ-Social Media Users Alert! ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

>> ಒಂದೇ ಫೋನ್ ಸಂಖ್ಯೆಗೆ ಹಲವು ಬ್ಯಾಂಕ್ ಖಾತೆಗಳು ಲಿಂಕ್ ಆಗಿದ್ದರೂ ಕೂಡ ಎಲ್ಲಾ ಖಾತೆಗಳ ಲಿಸ್ಟ್ ನಿಮ್ಮ ಮುಂದೆ ಬಿತ್ತರಗೊಳ್ಳಲಿದೆ.
>> ಈಗ ನೀವು ನಿಮ್ಮ ಯಾವ ಖಾತೆಯನ್ನು ವಾಟ್ಸ್ ಆಪ್ ಪೇಗೆ ಜೋಡಿಸಲು ಬಯಸುತ್ತಿರುವಿರಿ ಎಂಬುದನ್ನು ಒಮ್ಮೆ ಖಚಿತಪಡಿಸಿ.
>> ಹಣವನ್ನು ಕಳುಹಿಸಲು ನೀವು ನಿಮ್ಮ ಡೆಬಿಟ್ ಕಾರ್ಡ್ ಸಂಖ್ಯೆಯ ಕೊನೆಯ ಆರು ಅಂಕಿಗಳು ಹಾಗೂ ಕಾರ್ಡ್ ನಿಷ್ಕ್ರೀಯಗೊಳ್ಳುವ ದಿನಾಂಕವನ್ನು ನಮೂದಿಸಬೇಕು. 
>> ಇದಾದ ಬಳಿಕ ನೀವು UPI Pin ಸೆಟ್ ಮಾಡಬೇಕು. ಬಳಿಕ ನೀವು ಈ ಸೇವಯನ್ನು ಆನಂದಿಸಬಹುದು. 
>> ಈಗ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಯಾವುದೇ ವ್ಯಕ್ತಿಗೆ ಫೋಟೋ, ಸಂದೇಶ ಕಳುಹಿಸುವ ಹಾಗೆ ಹಣವನ್ನು ಕೂಡ ಕಳುಹಿಸಬಹುದು. 

ಇದನ್ನೂ ಓದಿ-Cheapest Recharge Plan: Airtel, Jio Or Vi: ನಿತ್ಯ ಡೇಟಾ ಲಿಮಿಟ್ ಖಾಲಿಯಾಯ್ತಾ? ಅತ್ಯಂತ ಅಗ್ಗದ ಬೆಲೆಯಲ್ಲಿ ಹೆಚ್ಚುವರಿ ಇಂಟರ್ನೆಟ್ ಈ ರೀತಿ ಪಡೆಯಿರಿ

ಇತ್ತೀಚೆಗಷ್ಟೇ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಈ ಹೊಸ ವೈಶಿಷ್ಟ್ಯ ಪರಿಚಯಿಸಿದೆ
ಕ್ಯಾಶ್ ಬ್ಯಾಕ್ ಕೊಡುಗೆ ಅಷ್ಟೇ ಅಲ್ಲ, ವಾಟ್ಸ್ ಆಪ್ ಇತ್ತೀಚಿಗೆ ತನ್ನ ಬಳಕೆದಾರಾರಿಗೆ ವಾಟ್ಸ್ ಆಪ್ ನ ಒಂದು ಗ್ರೂಪ್ ಚಾಟ್ ನಲ್ಲಿ 512 ಜನರನ್ನು ಸೇರಿಸುವ ಆಯ್ಕೆಯನ್ನು ನೀಡಿದೆ. ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ಒಂದು ವೇಳೆ ನಿಮ್ಮ ವಾಟ್ಸ್ ಆಪ್ ನಲ್ಲಿ ಕಾಣಿಸುತ್ತಿಲ್ಲ ಎಂದಾದಲ್ಲಿ ಚಿಂತಿಸುವ ಅವಶ್ಯಕತೆ ಇಲ್ಲ. 24 ಗಂಟೆಗಳೊಳಗೆ ನಿಮಗೆ ಈ ವೈಶಿಷ್ಟ್ಯ ಸಿಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News