IPL Media Rights: ಇನ್ಮುಂದೆ ನೀವು ಈ ಟಿವಿ ಚಾನೆಲ್ ಮೇಲೆ IPL ವೀಕ್ಷಿಸಬಹುದು, ಗಳಿಕೆಯ ಎಲ್ಲಾ ದಾಖಲೆ ನುಚ್ಚುನೂರು ಮಾಡಿದ ಬಿಸಿಸಿಐ

IPL media rights:  ಐಪಿಎಲ್ ಮೀಡಿಯಾ ರೈಟ್ ಗಳು ಒಟ್ಟು 48,390 ಕೋಟಿ ರೂ.ಗಳಿಗೆ ಮಾರಾಟವಾಗಿವೆ. ವಿಶ್ವದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗುವ ಲೀಗ್ ಪಂದ್ಯಾವಳಿ ಎಂದರೆ ಆದ ಐಪಿಎಲ್. ಈ ಲೀಗ್ ನಲ್ಲಿ ಆಟವಾಡಿ ಹಲವು ದಿಗ್ಗಜ ಆಟಗಾರರು ತಮ್ಮ ವೃತ್ತಿಜೀವನ ಕಂಡುಕೊಂಡಿದ್ದಾರೆ. ಪ್ರತಿಯೋರ್ವ ಕ್ರಿಕೆಟ್ ಆಟಗಾರ ಐಪಿಎಲ್ ನಲ್ಲಿ ಆಡುವ ಕನಸು ಕಾಣುತ್ತಾನೆ.

Written by - Nitin Tabib | Last Updated : Jun 14, 2022, 07:50 PM IST

    ದಾಖಲೆಯ ಮೊತ್ತಕ್ಕೆ ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟ

    ಟಿವಿ ಪ್ರಸಾರದ ಹಕ್ಕು ಸ್ಟಾರ್ ಸ್ಪೋರ್ಟ್ ಪಾಲು

    ಡಿಜಿಟಲ್ ಪ್ರಸಾರದ ಹಕ್ಕು ವೈಕಾಮ್ 18 ಪಾಲು

IPL Media Rights: ಇನ್ಮುಂದೆ ನೀವು ಈ ಟಿವಿ ಚಾನೆಲ್ ಮೇಲೆ IPL ವೀಕ್ಷಿಸಬಹುದು, ಗಳಿಕೆಯ ಎಲ್ಲಾ ದಾಖಲೆ ನುಚ್ಚುನೂರು ಮಾಡಿದ ಬಿಸಿಸಿಐ title=
IPL Media Rights

IPL media rights: ವಿಶ್ವದಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗುವ ಲೀಗ್ ಪಂದ್ಯಾವಳಿ ಎಂದರೆ ಆದ ಐಪಿಎಲ್. ಈ ಲೀಗ್ ನಲ್ಲಿ ಆಟವಾಡಿ ಹಲವು ದಿಗ್ಗಜ ಆಟಗಾರರು ತಮ್ಮ ವೃತ್ತಿಜೀವನ ಕಂಡುಕೊಂಡಿದ್ದಾರೆ. ಪ್ರತಿಯೋರ್ವ ಕ್ರಿಕೆಟ್ ಆಟಗಾರ ಐಪಿಎಲ್ ನಲ್ಲಿ ಆಡುವ ಕನಸು ಕಾಣುತ್ತಾನೆ. ಐಪಿಎಲ್ ಕುರಿತು ಪ್ರಸ್ತುತ ಪ್ರಕಟಗೊಂಡಿರುವ ಬಿಗ್ ಅಪ್ಡೇಟ್ ಎಂದರೆ, ಐಪಿಎಲ್ ನ ಟಿವಿ ಮತ್ತು ಡಿಜಿಟಲ್ ಮೀಡಿಯಾ ರೈಟ್ಸ್ ಗಳು ಭಾರಿ ಮೊತ್ತಕ್ಕೆ ಬಿಕರಿಯಾಗಿವೆ. ಹೌದು, ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿಯೇ ಭಾರಿ ದಾಖಲೆ ನಿರ್ಮಿಸಿದೆ. ಮುಂದಿನ ಐದು ವರ್ಷಗಳ ಮೀಡಿಯಾ ರೈಟ್ಸ್ ಗಳು 48,390 ಕೋಟಿ ರೂ.ಗಳಿಗೆ ಮಾರಾಟಗೊಂಡಿವೆ. 

ಇದನ್ನೂ ಓದಿ-IND vs SA: ಮೂರನೇ ಟಿ20 ಪಂದ್ಯದಿಂದ ಈ ಆಟಗಾರರು ಔಟ್‌!

ಇದನ್ನೂ ಓದಿ-Anushka Sharma Pregnant: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ವಿರುಷ್ಕಾ!?

ಈ ಕಂಪನಿಗಳ ಕೈ ಸೇರಿದ ಮಾಧ್ಯಮ ಹಕ್ಕುಗಳು
ಐಪಿಎಲ್ ಮಾಧ್ಯಮ ಹಕ್ಕುಗಳ ಪ್ಯಾಕೇಜ್ ಎ ಅನ್ನು ಸ್ಟಾರ್ ಸ್ಪೋರ್ಟ್ಸ್ 23,575 ಕೋಟಿ ರೂಗಳಿಗೆ ಖರೀದಿಸಿದೆ. ಪ್ಯಾಕೇಜ್ ಎ ನಲ್ಲಿ ಟಿವಿ ಹಕ್ಕುಗಳಿವೆ. ಇನ್ನೊಂದೆಡೆ ಪ್ಯಾಕೇಜ್ ಬಿ 20500 ಕೋಟಿ ರೂ.ಗಳಿಗೆ ವೈಕಾಮ್ 18 ತೆಕ್ಕೆಗೆ ಸೇರಿದೆ. ಪ್ಯಾಕೇಜ್ ಬಿ ನಲ್ಲಿ ಡಿಜಿಟಲ್ ಹಕ್ಕುಗಳಿವೆ. ಇನ್ಮುಂದೆ ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ಮೇಲೆ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಇನ್ನೊಂದೆಡೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳ ಮೇಲೆ ಐಪಿಎಲ್ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ವೋಟ್ ಡೌನ್ಲೋಡ್ ಮಾಡಬೇಕಾಗಲಿದೆ. ಏಕೆಂದರೆ, ಪಂದ್ಯಾವಳಿಗಳ ಡಿಜಿಟಲ್ ಹಕ್ಕುಗಳು ವೈಕಾಮ್ ಬಳಿ ಇವೆ. 

ಈ ಕಂಪನಿಯ ತೆಕ್ಕೆಗೆ ಪ್ಯಾಕೇಜ್ ಸಿ ಹಾಗೂ ಡಿ
ಪ್ಯಾಕೇಜ್ ಸಿ ಅನ್ನು ವೈಕಾಮ್ 18 3258 ಕೋಟಿ ರೂ. ಗಳಿಗೆ ಖರೀದಿಸಿದೆ. ಪ್ಯಾಕೇಜ್ ಸಿ ನಲ್ಲಿ ಪ್ಲೇಆಫ್ ಪಂದ್ಯಗಳ ಮಾಧ್ಯಮ ಹಕ್ಕುಗಳಿವೆ. ಇನ್ನೊಂದೆಡೆ ವೈಕಾಮ್ 18 ಮತ್ತು ಟೈಮ್ಸ್ ಇಂಟರ್ನೆಟ್ ಜಂಟಿಯಾಗಿ ಪ್ಯಾಕೇಜ್ ಡಿ ಅನ್ನು ಖರೀದಿಸಿವೆ. ಇದರಲ್ಲಿ ಭಾರತದ ಹೊರಗೆ ಪಂದ್ಯಗಳನ್ನು ತೋರಿಸುವ ಮಾಧ್ಯಮ ಹಕ್ಕುಗಳಿವೆ.

ಎರಡನೇ ಅತ್ಯಂತ ದುಬಾರಿ ಲೀಗ್ 
ಈ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಐಪಿಎಲ್ ತನ್ನ ಆರಂಭದ ದಿನದಿಂದಲೇ ಭಾರಿ ಜನಪ್ರೀಯ ಲೀಗ್ ಆಗಿದೆ. ಐಪಿಎಲ್ ನ ಇತಿಹಾಸದಲ್ಲಿ ಇದೊಂದು ಮಹತ್ವದ ದಿನವಾಗಿದೆ. ಮುಂದಿನ ಐದು ವರ್ಷಗಳ ಮಾಧ್ಯಮ ಹಕ್ಕುಗಳು 48,390 ಕೋಟಿ ರೂ.ಗಳಿಗೆ ಬಿಕರಿಯಾಗಿವೆ. ಇದರೊಂದಿಗೆ ಐಪಿಎಲ್ ವಿಶ್ವದ ಎರಡನೆಯ ಅತ್ಯಂತ ದುಬಾರಿ ಲೀಗ್ ಆಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ. 

ಬಿಸಿಸಿಐಗೆ ಲಾಭ ಎಷ್ಟು?
ಪ್ಯಾಕೇಜ್ ಎ: 23,575 ಕೋಟಿ, 57.5 ಪ್ರತಿ ಪಂದ್ಯ (ಸ್ಟಾರ್ ಸ್ಪೋರ್ಟ್ಸ್)
ಪ್ಯಾಕೇಜ್ ಬಿ: 20,500 ಕೋಟಿ, 50 ಕೋಟಿ ಪ್ರತಿ ಪಂದ್ಯ (ವೈಕಾಮ್18)
ಪ್ಯಾಕೇಜ್ ಸಿ: 3,258 ಕೋಟಿ, 33.24 ಕೋಟಿ ಪ್ರತಿ ಪಂದ್ಯ (ವೈಕಾಮ್18)
ಪ್ಯಾಕೇಜ್ ಡಿ: 1324ಕೋಟಿ, 3 ಕೋಟಿ ಪ್ರತಿ ಪಂದ್ಯ (ವೈಕಾಮ್ 18 ಮತ್ತು ಟೈಮ್ಸ್ ಇಂಟರ್ನೆಟ್)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News