ಈ ರಾಶಿಯವರು ಕೊನೆಯುಸಿರಿರುವವರೆಗೂ ಸ್ನೇಹವನ್ನು ಕಾಪಾಡುತ್ತಾರೆ ..!

ಜ್ಯೋತಿಷ್ಯ ಅಥವಾ ಫೆಂಗ್ ಶೂಯಿ ಅಥವಾ ವಾಸ್ತು ಶಾಸ್ತ್ರದಲ್ಲಿ ಸ್ನೇಹವನ್ನು ಪ್ರಮುಖ ಸಂಬಂಧ ಎಂದು ಪರಿಗಣಿಸಲಾಗಿದೆ. 

ಬೆಂಗಳೂರು : ಪ್ರತಿಯೊಂದು ರಾಶಿಯನ್ನು ಕೂಡಾ ಬೇರೆ ಬೇರೆ ಗ್ರಹಗಳು ಆಳುತ್ತವೆ. ಆದ್ದರಿಂದಲೇ ಪ್ರತಿಯೊಬ್ಬರೂ ನಮ್ಮ ಸ್ನೇಹಿತರಾಗಲು ಸಾಧ್ಯವಿಲ್ಲ. ಇದಕ್ಕೂ ಕಾರಣವಿದೆ. ಜ್ಯೋತಿಷ್ಯ ಅಥವಾ ಫೆಂಗ್ ಶೂಯಿ ಅಥವಾ ವಾಸ್ತು ಶಾಸ್ತ್ರದಲ್ಲಿ ಸ್ನೇಹವನ್ನು ಪ್ರಮುಖ ಸಂಬಂಧ ಎಂದು ಪರಿಗಣಿಸಲಾಗಿದೆ. ಯಾಕೆಂದರೆ ರಾಶಿಯನ್ನಾಳುವ ಗ್ರಹಗಳು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /6

ಮೇಷ ರಾಶಿ : ಈ ರಾಶಿಯ ಜನರು ಯಾರೊಂದಿಗೂ ಸ್ನೇಹ ಬೆಳೆಸಲು ಹಿಂಜರಿಯುವುದಿಲ್ಲ. ಅವರು ತಮ್ಮ ಕಡೆಯಿಂದ ಸ್ನೇಹದ ಹಸ್ತವನ್ನು ಚಾಚುತ್ತಾರೆ. ಅವರ ದೃಷ್ಟಿಯಲ್ಲಿ, ಸ್ನೇಹದಲ್ಲಿ ಯಾವುದೇ ಹುಳುಕು ಹುಡುಕಬಾರದು. ಸ್ನೇಹಿತರನ್ನು ನಂಬಬೇಕು.  ವೃಷಭ ರಾಶಿ :  ವೃಷಭ ರಾಶಿಯ  ಸ್ನೇಹದಲ್ಲಿ ಕ್ಷಮೆ ಮುಖ್ಯ ಎಂದು ನಂಬುತ್ತಾರೆ. ಸ್ನೇಹಿತ ತಪ್ಪು ಮಾಡಿದರೂ ಅದನ್ನು ದೊಡ್ಡದು ಮಾಡದೇ ಕ್ಷಮಿಸಬೇಕುನಬ ಭಾವನೆ ಇವರದ್ದು.  ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಇವರು ಹಿಂಜರಿಯುವುದಿಲ್ಲ.

2 /6

ಮಿಥುನ ರಾಶಿ -ಯಾರ ಜೊತೆಯೇ ಆಗಲಿ ಸ್ನೇಹ ಸಂಬಂಧ ಬೆಳೆಸುವ ಮುನ್ನ ಅವರ ಸರಿಯಾಗಿ ತಿಳಿದುಕೊಳ್ಳುತ್ತಾರೆ. ಇವರನ್ನು ಸಾವಿರ ಜನ ಸ್ನೇಹಿತ ಎಂದುಕೊಳ್ಳಬಹುದು. ಆದರೆ, ಇವರು ಬೆರಳೆಣಿಕೆಯ ಜನರಲ್ಲಿ ಮಾತ್ರ ನಂಬಿಕೆ ಇಡುತ್ತಾರೆ.   ಕರ್ಕ ರಾಶಿ - ಸ್ನೇಹ ಸಂಬಂಧದಲ್ಲಿ ಸಮರ್ಪಣಾ ಭಾವ ಇದ್ದಾಗ ಮಾತ್ರ ಸಾಧ್ಯ, ಈ ರಾಶಿಚಕ್ರದ ಜನರೊಂದಿಗೆ ಸ್ನೇಹ ಬೆಳೆಸಬಹುದು. ಇಲ್ಲದಿದ್ದರೆ ಪರಿಚಯವು ಎಂದಿಗೂ ಸ್ನೇಹವಾಗಿ ಬದಲಾಗುವುದಿಲ್ಲ. 

3 /6

ಸಿಂಹ - ಸಿಂಹ ರಾಶಿಯವರು ಸ್ನೇಹವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಾರೆ ಮತ್ತು ಅದಕ್ಕಾಗಿಯೇ ಅವರು ಸ್ನೇಹಿತರ ನಡುವೆ ಕುಳಿತು ಹರಟೆ ಹೊಡೆಯಲು ಇಷ್ಟಪಡುತ್ತಾರೆ.  ಕನ್ಯಾ ರಾಶಿ - ಈ ರಾಶಿಯ ಜನರು ಸ್ನೇಹಿತರಿಲ್ಲದೆ ಜೀವನವೇ ಶೂನ್ಯ ಎಂದು ಭಾವಿಸುತ್ತಾರೆ.  ಕೆಲವು ವಿಷಯಗಳನ್ನು ಸ್ನೇಹಿತರೊಂದಿಗೆ ಮಾತ್ರ ಹಂಚಿಕೊಳ್ಳಬಹುದು ಎಂಬ ನಂಬಿಕೆ ಇವರದ್ದು.   

4 /6

ತುಲಾ - ಅವರು ಸ್ನೇಹದ ಅರ್ಥವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಜೀವನದಲ್ಲಿ ನೆಮ್ಮದಿ ಕಾಣಬೇಕಾದರೆ ಸ್ನೇಹ ಅಗತ್ಯ ಎಂದು ನಂಬುತ್ತಾರೆ.  ವೃಶ್ಚಿಕ ರಾಶಿ - ಇವರ ದೃಷ್ಟಿಯಲ್ಲಿ ಸ್ನೇಹವೇ ಜೀವನದ ಬಹುಮುಖ್ಯ ಸಂಬಂಧ. ಇವರು ಸ್ನೇಹದ ವಿಚಾರದಲ್ಲಿ ತುಂಬಾ ಭಾವುಕರಾಗಿರುತ್ತಾರೆ, ಸ್ನೇಹಕ್ಕಾಗಿ ಸಾಕಷ್ಟು ತ್ಯಾಗಕ್ಕೂ ಸಿದ್ಧರಿರುತ್ತಾರೆ.  

5 /6

ಧನು ರಾಶಿ - ಧನು ರಾಶಿಯ ಜನರು ಬಹಳ ಯೋಚಿಸಿ ಸ್ನೇಹ ಬೆಳೆಸುತ್ತಾರೆ.  ಒಮ್ಮೆ ಸ್ನೇಹವನ್ನು ಮಾಡಿದರೆ ಆ ಸ್ನೇಹವನ್ನು ಕೊನೆ ತನಕ ಉಳಿಸಿಕೊಳ್ಳುತ್ತಾರೆ.  ಮಕರ ರಾಶಿ - ಈ ರಾಶಿಯವರು ಸಿಕ್ಕ ಸಿಕ್ಕವರನ್ನೆಲಾ ಸ್ನೇಹಿತರೆಂದು ಒಪ್ಪುವುದಿಲ್ಲ. ಮೊದಲು ಸಮಾಜದಲ್ಲಿ ಬುದ್ಧಿವಂತರನ್ನು ಹುಡುಕುತ್ತಾರೆ ಮತ್ತು ನಂತರ ಅವರ ಕಡೆಗೆ ಸ್ನೇಹದ ಹಸ್ತವನ್ನು ಚಾಚುತ್ತಾರೆ. 

6 /6

ಕುಂಭ ರಾಶಿ - ಸ್ನೇಹ ಎನ್ನುವುದು ಅವರಿಗೆ ಸಾಮಾನ್ಯವಾದ ಮಾತಲ್ಲ.  ಇವರು  ಬಹಳ ಯೋಚಿಸಿದ ನಂತರವೇ ಯಾರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಒಮ್ಮೆ ಯಾರ ಜೊತೆಗಾದರೂ ಸ್ನೇಹ ಬೆಳೆಸಿದರೆ ನಂತರ ಅದನ್ನು ಸುಲಭವಾಗಿ ಮುರಿಯುವುದಿಲ್ಲ.  ಮೀನ ರಾಶಿ - ಈ ರಾಶಿಯ ಜನರು ತುಂಬಾ ಬುದ್ಧಿವಂತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುತ್ತಾರೆ. ಸೈದ್ಧಾಂತಿಕವಾಗಿ ಪ್ರಬುದ್ಧ ವ್ಯಕ್ತಿ ಸ್ನೇಹಿತನಾದರೆ, ಅವನು ಕಾಲಕಾಲಕ್ಕೆ ಸಲಹೆಯನ್ನು ಸಹ ನೀಡುತ್ತಾನೆ ಎಂಬ ಭಾವನೆ ಇವರದ್ದು.