No Toll Plaza On Highway: ಇನ್ಮುಂದೆ ಒಂದೂ ಟೋಲ್ ಪ್ಲಾಜಾ ಇಲ್ಲದ ಹೆದ್ದಾರಿಯ ಮೇಲೆ ಬಿಂದಾಸ್ ವಾಹನ ಓಡಿಸಿ

No Toll Plaza on Highway: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೊಸ ಪರಿಕಲ್ಪನೆಯೊಂದನ್ನು ಜಾರಿಗೆ ತರುತ್ತಿದೆ. ಇದರ ಅಡಿಯಲ್ಲಿ, ವಾಹನದ ಮಾಲೀಕರು ತಾವು ಸಂಚರಿಸಿದ ಅಥವಾ ಸಂಚಾರಕ್ಕಾಗಿ ಬಳಸಿದ ಒಟ್ಟು ಹೆದ್ದಾರಿಯ ಮೊತ್ತ ಮಾತ್ರ ಪಾವತಿಸಬೇಕಾಗಲಿದೆ. ಪ್ರಸ್ತುತ, ಫಾಸ್ಟ್ಯಾಗ್‌ ಮೂಲಕ ಹಣವನ್ನು ಕಡಿತಗೊಳಿಸಲಾಗುತ್ತದೆ.  

Written by - Nitin Tabib | Last Updated : Jun 27, 2022, 06:36 PM IST
  • ಇನ್ಮುಂದೆ ಹೆದ್ದಾರಿಗಳಲ್ಲಿ ಒಂದೂ ಟೋಲ್ ಬೂತ್ ಗಳು ಇರುವುದಿಲ್ಲ
  • ನೀವು ಕ್ರಮಿಸಿದ ದೂರಕ್ಕೆ ಮಾತ್ರ ನೀವು ಶುಲ್ಕವನ್ನು ಪಾವತಿಸಬಹುದು
  • ಜಾರಿಗೆ ಬಂದಿದೆ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆ
No Toll Plaza On Highway: ಇನ್ಮುಂದೆ ಒಂದೂ ಟೋಲ್ ಪ್ಲಾಜಾ ಇಲ್ಲದ ಹೆದ್ದಾರಿಯ ಮೇಲೆ ಬಿಂದಾಸ್ ವಾಹನ ಓಡಿಸಿ title=
No Toll Plasa On Highway

No Toll Plaza on Highway: ಸಾಮಾನ್ಯವಾಗಿ ಹೈವೇ ಮೇಲೆ ಸಂಚರಿಸುವಾಗ ಟೋಲ್ ಪ್ಲಾಜಾಗಳ ಮೇಲೆ ವಾಹನಗಳ ದೊಡ್ಡ ದೊಡ್ಡ ಲೈನ್ಗಳು ಎದುರಾಗುತ್ತವೆ. ಈ ಸರದಿ ಸಾಲುಗಳಿಂದ ವಾಹನ ಸವಾರರಿಗೆ ಮುಕ್ತಿ ನೀಡುವ ಉದ್ದೇಶದಿಂದ ಸರ್ಕಾರ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೂ ಕೂಡ ಟೋಲ್ ಪ್ಲಾಜಾಗಳ ಮೇಲೆ ವಾಹನ ದಟ್ಟಣೆಯಲ್ಲಿ ಯಾವುದೇ ಕಂಡುಬರುತ್ತಿಲ್ಲ. ಹೀಗಾಗಿ ಇದಕ್ಕಾಗಿ ಇನ್ಮುಂದೆ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ (ANPR) ವ್ಯವಸ್ಥೆ ಜಾರಿಗೆ ಬರಲಿದೆ.

ಜನರಿಗೆ ಈ ಲಾಭ ಸಿಗಲಿದೆ
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೊಸ ಪರಿಕಲ್ಪನೆಯೊಂದನ್ನು ಜಾರಿಗೆ ತರುತ್ತಿದ್ದು, ಇದರ ಅಡಿಯಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಜಸ್ಥಾನದಲ್ಲಿ ಒಂದು ಗ್ರೀನ್ ಫೀಲ್ಡ್  ಎಕ್ಸ್‌ಪ್ರೆಸ್‌ವೇ ಅನ್ನು ನಿರ್ಮಿಸುತ್ತಿದ್ದು, ಅದರ ಮೇಲೆ ಒಂದೂ ಟೋಲ್ ಬೂತ್ ಗಳು ಇರುವುದಿಲ್ಲ ಎನ್ನಲಾಗಿದೆ. ಇದರ ದೊಡ್ಡ ವೈಶಿಷ್ಟ್ಯ ಎಂದರೆ ವಾಹನದ ಮಾಲೀಕರು ಹೆದ್ದಾರಿಯಲ್ಲಿ ಕ್ರಮಿಸಿದ ಒಟ್ಟು ದೂರಕ್ಕಷ್ಟೇ ಮೊತ್ತವನ್ನು ಪಾವತಿಸಬೇಕಾಗಲಿದೆ.

ಇದನ್ನೂ ಓದಿ-Good News: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಇನ್ಮುಂದೆ ವಾಹನದ ನಂಬರ್ ಪ್ಲೇಟ್ ಸ್ಕ್ಯಾನಿಂಗ್ ನಡೆಯಲಿದೆ
ಪ್ರಸ್ತುತ, ಹೆದ್ದಾರಿಯಲ್ಲಿ ಸಂಚರಿಸುವಾಗ, ವಾಹನ ಮೇಲೆ ಅಳವಡಿಸಲಾಗಿರುವ ಫಾಸ್ಟ್ಯಾಗ್‌ನಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಆದರೆ ಹೊಸ ತಂತ್ರಜ್ಞಾನ ಅಳವಡಿಕೆಯ ನಂತರ ನಿಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಿ ಫಾಸ್ಟ್ಯಾಗ್‌ನಿಂದ ಹಣವನ್ನು ಕಡಿತಗೊಳಿಸಲಾಗುತ್ತಿದೆ. ಇದರಲ್ಲಿ ಕಿಲೋಮೀಟರ್ ಆಧಾರದ ಮೇಲೆ ಜನರು ಹಣ ಪಾವತಿಸಬೇಕಾಗಲಿದೆ. ದೊರೆತ ಮಾಹಿತಿ ಪ್ರಕಾರ ಪ್ರಸ್ತುತ ಟೋಲ್ ಪ್ಲಾಜಾನಲ್ಲಿ ಒಂದೇ ಬಾರಿಗೆ ಶುಲ್ಕವನ್ನು ಪಡೆಯಲಾಗುತ್ತದೆ. ಆದರೆ ಹೊಸ ವ್ಯವಸ್ಥೆಯಲ್ಲಿ ನೀವು ಹೈವೇ ಮೇಲೆ ಎಷ್ಟು ದೂರ ವಾಹನವನ್ನು ಚಲಾಯಿಸುವಿರೋ ನಿಮ್ಮಿಂದ ಅಷ್ಟೇ ದೂರದ ಶುಲ್ಕವನ್ನು ಪಡೆಯಲಾಗುವುದು ಎನ್ನಲಾಗಿದೆ. ಈ ವ್ಯವಸ್ಥೆಯಲ್ಲಿ, ಹೆದ್ದಾರಿಯಲ್ಲಿ ಒಂದು ಪ್ರವೇಶ ಮತ್ತು ನಿರ್ಗಮನ ಬಿಂದುವನ್ನು ಗುರುತಿಸಲಾಗುವುದು. ವಾಹನ ಪ್ರವೇಶಿಸಿದ ತಕ್ಷಣ ನಂಬರ್ ಪ್ಲೇಟ್ ಸ್ಕ್ಯಾನ್ ಆಗುತ್ತದೆ. ನಂತರ ಪ್ರವೇಶ ಮತ್ತು ನಿರ್ಗಮನದ ಅಂತರಕ್ಕೆ ಅನುಗುಣವಾಗಿ, ಪ್ರಯಾಣಿಕರ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. 

ಇದನ್ನೂ ಓದಿ-Nitin Gadkari Master Plan: ತಪ್ಪಾದ ಜಾಗಗಳಲ್ಲಿ ಪಾರ್ಕ್ ಆದ ವಾಹನಗಳ ಫೋಟೋ ಕಳುಹಿಸುವವರಿಗೆ 500 ರೂ. ಬಹುಮಾನ !

ರಾಜಸ್ಥಾನದಿಂದ ಈ ವ್ಯವಸ್ಥೆ ಆರಂಭಗೊಳ್ಳುತ್ತಿದೆ
ಟೋಲ್ ಶುಲ್ಕವನ್ನು ಪಡೆಯುವ ಈ ನೂತನ ವ್ಯವಷ್ಟೇ ರಾಜಸ್ಥಾನದಿಂದ ಆರಂಭಗೊಳ್ಳಲಿದೆ. ಭಾರತ್ ಮಾಲಾ ಯೋಜನೆಯಡಿ ರಾಜಸ್ಥಾನದಲ್ಲಿ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗುತ್ತಿದೆ. ಮಾಹಿತಿಯ ಪ್ರಕಾರ, ರಾಜಸ್ಥಾನದಲ್ಲಿ ಇದರ ಉದ್ದ 637 ಕಿ.ಮೀ.ಆಗಿದೆ. ಈ ಎಕ್ಸ್‌ಪ್ರೆಸ್‌ವೇ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಹಾದು ಹೋಗಲಿದೆ. ಇದರ ಒಟ್ಟು ಉದ್ದ 1224 ಕಿ.ಮೀ ಆಗಿರುತ್ತದೆ. ಈ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಪಂಜಾಬ್‌ನ ಅಮೃತಸರದಿಂದ ಗುಜರಾತ್‌ನ ಜಾಮ್‌ನಗರವರೆಗೆ ಇರಲಿದೆ. ಇದು ಈ ಎರಡು ನಗರಗಳೊಂದಿಗೆ ರಾಜಸ್ಥಾನವನ್ನು ಸಂಪರ್ಕಿಸುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯಿಂದ ಅರೇಬಿಯನ್ ಸಮುದ್ರದ ಬಂದರುಗಳಿಗೆ ಸಂಪರ್ಕ ಲಭ್ಯವಿರುತ್ತದೆ. ಈ ಯೋಜನೆ ಪೂರ್ಣಗೊಂಡ ನಂತರ, ರಾಜಸ್ಥಾನಕ್ಕೆ ಡೆಡಿಕೇಟೆಡ್ ಎಕ್ಸ್‌ಪ್ರೆಸ್‌ವೇ ಸಿಗಲಿದೆ. ಈ ಮಾರ್ಗದಲ್ಲಿ ಪ್ರಯಾಣಿಕರು ಅತ್ಯಂತ ಕಡಿಮೆ ತಿರುವುಗಳು ಎದುರಾಗಲಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News