ಪೊಲೀಸ್ ಸಿಬ್ಬಂದಿ ವರ್ಗಾವಣೆ : ರಾತ್ರಿಯಿಡೀ ಕಮಿಷನರ್ ಕಚೇರಿಯಲ್ಲಿ ಕೌನ್ಸಿಲಿಂಗ್

ನಗರದ ಒಂದು ವಿಭಾಗದಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದ ಸಿಬ್ಬಂದಿಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವ ಮುನ್ನ ಕೌನ್ಸಿಲಿಂಗ್ ಕರೆಯಲಾಗಿತ್ತು.

Written by - Manjunath Hosahalli | Last Updated : Jun 30, 2022, 10:01 AM IST
  • ಕಮಿಷನರ್ ಕಚೇರಿಯಲ್ಲಿ ರಾತ್ರಿಯಿಡೀ ಕೌನ್ಸಿಲಿಂಗ್
  • 500 ಸಿಬ್ಬಂದಿಗೆ ಒಂದೇ ರಾತ್ರಿಯಲ್ಲಿ ಕೌನ್ಸಿಲಿಂಗ್
  • 500 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಡಿಸಿಪಿ ಆದೇಶ
ಪೊಲೀಸ್ ಸಿಬ್ಬಂದಿ ವರ್ಗಾವಣೆ : ರಾತ್ರಿಯಿಡೀ ಕಮಿಷನರ್ ಕಚೇರಿಯಲ್ಲಿ ಕೌನ್ಸಿಲಿಂಗ್ title=
Police Transfer (file photo)

ಬೆಂಗಳೂರು : ನಗರದಲ್ಲಿ ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆಯಲ್ಲಿ  ಕಮಿಷನರ್ ಕಚೇರಿಯಲ್ಲಿ ರಾತ್ರಿಯಿಡೀ ಸಿಬ್ಬಂದಿಯ ಕೌನ್ಸಿಲಿಂಗ್  ನಡೆಸಲಾಗಿದೆ. ಆಡಳಿತ ವಿಭಾಗ ಡಿಸಿಪಿ ನಿಶಾ ಜೇಮ್ಸ್ ನೇತ್ರತ್ವದಲ್ಲಿ ಕೌನ್ಸಿಲಿಂಗ್ ನಡೆಸಲಾಗಿದೆ. 

ನಗರದ ಒಂದು ವಿಭಾಗದಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದ ಸಿಬ್ಬಂದಿಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವ ಮುನ್ನ ಕೌನ್ಸಿಲಿಂಗ್ ಕರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 500 ಸಿಬ್ಬಂದಿಗೆ ಒಂದೇ ರಾತ್ರಿಯಲ್ಲಿ ಕೌನ್ಸಿಲಿಂಗ್ ನಡೆಸಲಾಗಿದೆ. 

ಇದನ್ನೂ ಓದಿ : KWRIS Recruitment 2022 : ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ 155 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಹದಿನೈದು ವರ್ಷಗಳಿಂದ ಒಂದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ  ಸುಮಾರು 500 ಸಿಬ್ಬಂದಿಯನ್ನು  ವರ್ಗಾವಣೆ ಮಾಡಿ  ಡಿಸಿಪಿ  ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಈ ಸಿಬ್ಬಂದಿಯ ಕೌನ್ಸೆಲಿಂಗ್ ನಡೆಸಲಾಗಿತ್ತು. ರಾತ್ರಿಯಿಡೀ ಕಮಿಷನರ್ ಕಚೇರಿಯಲ್ಲಿ  ಈ ಸಿಬ್ಬಂದಿಯ ಕೌನ್ಸೆಲಿಂಗ್ ನಡೆಸಲಾಗಿದೆ. 

ಕೆಲ ದಿನಗಳ ಹಿಂದಷ್ಟೆ  ಆಡಳಿತ ವಿಭಾಗ ವರ್ಗಾವಣೆ ನೋಟಿಫಿಕೇಶನ್ ಹೊರಡಿಸಿತ್ತು. ಈ ಹಿನ್ನೆಲೆ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಕೌನ್ಸಿಲಿಂಗ್ ನಡೆಸಲಾಯಿತು. ಬೆಳಿಗ್ಗೆಯೇ ಕೌನ್ಸಿಲಿಂಗ್ ಗೆ ಬಂದ ನೂರಾರು ಸಿಬ್ಬಂದಿ ತಡರಾತ್ರಿವರೆಗೆ ಕೌನ್ಸಿಲಿಂಗ್ ಗಾಗಿ ಕಾದು ಕೂರಬೇಕಾಯಿತು.

ಇದನ್ನೂ ಓದಿ : HD Kumaraswamy : ರಾಷ್ಟ್ರಪತಿ ಚುನಾವಣೆ ; ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ!

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News