JC Pura : ಗ್ರಾ.ಪಂ. ಕಚೇರಿಯಲ್ಲೇ ಪಿಡಿಓಗೆ ಕಿಸ್ ಕೊಟ್ಟ ಸದಸ್ಯ! ವಿಡಿಯೋ ವೈರಲ್

ಇದು ಕಾನೂನು ಸಂಸದೀಯ ಸಚಿವರ ಕ್ಷೇತ್ರ ವಾಗಿದ್ದು ಅವರದೇ ಆದ ಗ್ರಾಮವು ಕೂಡ ಮತ್ತು ಸಚಿವರ ಕಟ್ಟಾ ಬೆಂಬಲಿಗನಾದ ಈ ಪ್ರಸನ್ನಕುಮಾರ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಂಡು ಬಂದಿದೆ. 

Written by - Zee Kannada News Desk | Last Updated : Jul 2, 2022, 07:43 PM IST
  • ಗ್ರಾಮಪಂಚಾಯ್ತಿ ಕಚೇರಿಯಲ್ಲೇ ಸದಸ್ಯ ಪಿಡಿಓಗೆ ಕಿಸ್
  • ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ‌ ಜೆಸಿ ಪುರ ಗ್ರಾಮಪಂಚಾಯ್ತಿ ಕಚೇರಿ
  • ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
JC Pura : ಗ್ರಾ.ಪಂ. ಕಚೇರಿಯಲ್ಲೇ ಪಿಡಿಓಗೆ ಕಿಸ್ ಕೊಟ್ಟ ಸದಸ್ಯ! ವಿಡಿಯೋ ವೈರಲ್ title=

ತುಮಕೂರು : ಗ್ರಾಮಪಂಚಾಯ್ತಿ ಕಚೇರಿಯಲ್ಲೇ ಸದಸ್ಯ ಪಿಡಿಓಗೆ ಕಿಸ್ ಕೊಟ್ಟ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ‌ ಜೆಸಿ ಪುರ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ನಡೆದಿದೆ. 

ಇದು ಕಾನೂನು ಸಂಸದೀಯ ಸಚಿವರ ಕ್ಷೇತ್ರ ವಾಗಿದ್ದು ಅವರದೇ ಆದ ಗ್ರಾಮವು ಕೂಡ ಮತ್ತು ಸಚಿವರ ಕಟ್ಟಾ ಬೆಂಬಲಿಗನಾದ ಈ ಪ್ರಸನ್ನಕುಮಾರ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಂಡು ಬಂದಿದೆ. 

ಇದನ್ನೂ ಓದಿ : Bengaluru City police : ನಗರ ಪೊಲೀಸ್ ಇಲಾಖೆಯಲ್ಲಿ ಒಂದೇ ದಿನ 3 ಸಾವಿರ ಪೊಲೀಸರ ವರ್ಗಾವಣೆ!

ಬಲವಂತವಾಗಿ ಪಿಡಿಓ ಕೋಕಿಲಗೆ ಸದಸ್ಯ ಪ್ರಸನ್ನ ಕುಮಾರ್ ತಬ್ಬಿಕೊಂಡು ಮುದ್ದಾಡಿದ ಇಬ್ಬರ ನಡುವಿನ ಸರಸ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಜೂನ್ 05 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.  

ಪ್ರಸನ್ನ ಕುಮಾರ್ ಸುಮಾರು ನಾಲ್ಕು ಬಾರಿಯಿಂದ ಸದಸ್ಯರಾಗಿದ್ದುಕೊಂಡು ಅಧ್ಯಕ್ಷರಾಗಿದ್ದುಕೊಂಡು ಅವರ ಶಕ್ತಿಯನ್ನು ಹಾಗೂ ಕುಚೇಷ್ಟೆಯನ್ನು ಇಲ್ಲಿ ಬಳಸಿಕೊಂಡಿದ್ದಾನೆ. 

ಪ್ರಸನ್ನ ಕುಮಾರ್ ಎಂದರೆ ಸಚಿವರಿಗೆ ಅವರಿಗೆ ಅವರು ಅಪ್ಯಯವಾದ ಪ್ರೀತಿ ಇದೆ. ಸಚಿವರು ವಿಧಾನಸಭೆಯಾಗಲಿ ಸಾರ್ವಜನಿಕ ಸ್ಥಳವಾಗಲಿ ಬಹಳಷ್ಟು ಪ್ರಾಮಾಣಿಕ ಎಂಬಂತೆ ವಾಚಾನು ಗೋಚ ವಾಗಿ ಪ್ರಾಮಾಣಿಕತೆಯ ಪ್ರತಿಕ ಎಂಬಂತೆ ಮಾತನಾಡುವ ಇವರ ಪಂಚಾಯತಿಯಲ್ಲಿಯೇ ಇವರ ಶಿಷ್ಯನೇ ಪಲ್ಲಂಗದಾಟದಲ್ಲಿ ತೊಡಗಿರುವುದನ್ನು ನೋಡಿದರೆ ಇವರ ಪ್ರಾಮಾಣಿಕತೆಗೆ ಕೈಗನ್ನಡಿಯಂತಾಗಿದೆ. 

ಇದನ್ನೂ ಓದಿ : ಜಾರಕಿಹೊಳಿ ಸಿಡಿ ಕೇಸ್ : FIR ರದ್ದುಕೋರಿ ನರೇಶ್, ಶ್ರವಣ್ ಕೋರ್ಟ್ ಮೊರೆ‌

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News