ಬೆಂಗಳೂರು : ದಿನೇದಿನೆ ತಾರಕಕ್ಕೇರುತ್ತಿರುವ ಚಾಮರಾಜನಗರ ಈದ್ಗಾ ಮೈದಾನ ವಿವಾದ, ಬಂದ್ ವರೆಗೆ ಬಂದು ತಲುಪಿದೆ. ಬಿಬಿಎಂಪಿ ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳಲು ನಾಳೆ ಚಾಮರಾಜಪೇಟೆ ಬಂದ್ ಗೆ ನಾಗರಿಕ ಒಕ್ಕೂಟ ಕರೆ ನೀಡಿದೆ. ಹಾಗಾದ್ರೆ, ನಾಳೆ ಬಂದ್ ಹೇಗಿರಲಿದೆ? ಈ ರಿಪೋರ್ಟ್ ಇಲ್ಲಿದೆ.
ಈದ್ಗಾ ಮೈದಾನ.. ಇದು ಕಳೆದ ಕೆಲವು ದಿನಗಳಿಂದ ವಿವಾದದಿಂದಲೇ ಸುದ್ದಿ ಆಗ್ತಿದೆ. ಸದ್ಯ ಭೂಮಾಲಿಕತ್ವದ ವಿಚಾರವಾಗಿ ಶುರುವಾಗಿದ್ದ ಕಿತ್ತಾಟ, ಇದೀಗ ಬಂದ್ ವರೆಗೆ ತಲುಪಿದೆ. ಜುಲೈ ನಾಳೆ (12ರಂದು) ಚಾಮರಾಜಪೇಟೆ 7 ವಾರ್ಡ್ ಗಳ ಬಂದ್ ನಾಗರೀಕರ ಒಕ್ಕೂಟದ ವೇದಿಕೆ ಕರೆ ಕೊಟ್ಟಿದೆ. ಈ ಮೂಲಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣವಾಗಿ ಬಂದ್ ಆಗಲಿದೆ. ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಬಂದ್ ಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಕರೆ ನೀಡಿದ್ದು, ಇದಕ್ಕೆ ಅನೇಕ ಹಿಂದೂಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ 50ಕ್ಕೂ ಅಧಿಕ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿವೆ.ಹೀಗಾಗಿ ಸಹ ಶಾಲಾ-ಕಾಲೇಜು, ಬೇಕರಿ, ಅಂಗಡಿಗಳಿಗೆ ಸೇರಿದಂತೆ ಮನೆ ಮನೆಗೆ ತೆರಳಿ 20 ಸಾವಿರಕ್ಕೂ ಅಧಿಕ ಕರಪತ್ರಗಳನ್ನ ಇಂದು ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ : Heavy Rainfall : ಮಳೆಯ ಆರ್ಭಟಕ್ಕೆ ತತ್ತರಿಸಿದ ರಾಜ್ಯ : ಮನೆಗಳಿಗೆ ನುಗ್ಗಿದ ನೀರು, ರೈತನ ಬೆಳೆ ಹಾನಿ!
ಬಂದ್ ಗೆ ಅವಕಾಶ ನೀಡದ ಪೊಲೀಸ್ ಇಲಾಖೆ
ಈದ್ಗಾ ಮೈದಾನಕ್ಕಾಗಿ ಕರೆ ಕೊಟ್ಟಿರುವ ಬಂದ್ ಸ್ವಯಂ ಪ್ರೇರಿತ ಹಾಗೂ ಶಾಂತಿಯುತ ಬಂದ್ ಆಗಿರಲಿದೆ. ಯಾಕಂದ್ರೆ ನಾಳೆ ಯಾವುದೇ ರೀತಿಯ ರ್ಯಾಲಿ, ಪ್ರತಿಭಟನೆ ಇರೊಲ್ಲ ಇದಕ್ಕೆ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಇಲ್ಲ. ಹೀಗಾಗಿ ಕೇವಲ ಒಂದು ದಿನದ ಮಟ್ಟಿಗೆ ಶಾಂತಿಯುತ ಬಂದ್ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಬಂದ್ ಬಳಿಕ ಸರ್ಕಾರದ ನಡೆ ಗಮನಿಸಿ ಮುಂದಿನ ಹೆಜ್ಜೆ ಇಡಲು ಒಕ್ಕೂಟ ನಿರ್ಧರಿಸಿದೆ.
ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಬೇಡಿಕೆ ಏನು..?
- ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು.
- ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು.
- ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣಕ್ಕೆ ಒತ್ತಾಯ.
- ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ ಗೆ ವಹಿಸಬಾರದು.
- ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ರಮಿತಿ ರಚಿಸಬೇಕು.
- ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯ.
ಇದನ್ನೂ ಓದಿ : ವ್ಯಾಪಾರಿ ಮನೋಭಾವದ ಶಿಕ್ಷಣ ಸಚಿವರನ್ನು ವಜಾಗೊಳಿಸಿ: ಮೋದಿಗೆ ಪತ್ರ ಬರೆದ ರುಪ್ಸಾ
ಚಾಮರಾಜಪೇಟೆಯಲ್ಲಿ ಅಂಗಡಿ-ಮುಂಗಟ್ಟು, ಬ್ಯಾಂಕ್, ಶಾಲಾ-ಕಾಲೇಜುಗಳ ಬಂದ್ ಒಕ್ಕೂಟ ಮನವಿ ಮಾಡಿದೆ. ಕರಪತ್ರ ಹಂಚಿಕೆ ಮೂಲಕ ಬಂದ್ ಬೆಂಬಲಕ್ಕೆ ಸಹಕರಿಸುವಂತೆ ಮನವಿ ಮಾಡಿ ಕೊಳ್ಳಲಾಗಿದೆ. ಚಾಮರಾಜಪೇಟೆಯ ಪ್ರತೀ ಅಂಗಡಿಗಳ ಮೇಲೂ ಬಂದ್ ಬೆಂಬಲದ ಬೋರ್ಡ್ ಹಾಕಲಾಗಿದೆ. ಚಾಮರಾಜಪೇಟೆ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಬೇಕೆಂಬ ಸಾಲುಗಳು ಅಂಗಡಿಗಳ ಮೇಲೆ ಹಾಕಲಾಗಿದೆ.
ಒಟ್ನಲ್ಲಿ ಚಾಮರಾಜಪೇಟೆ ಮೈದಾನದ ಬಡಿದಾಟ ಬಂದ್ ವರೆಗು ತಲುಪಿದೆ. ನಾಳೆ ಬಂದ್ ಬಳಿಕ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳಿಸಲು ಒಕ್ಕೂಟ ಮುಂದಾಗಿದೆ. ಸದ್ಯ ಈ ವಿವಾದ ಮುಂದೆ ಎಲ್ಲಿ ಹೋಗಿ ನಿಲ್ಲುತ್ತೊ ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ