Whatsapp Alert! ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅಪ್ಪಿತಪ್ಪಿಯೂ ಕೂಡ ಈ ಆಪ್ ಡೌನ್ ಲೋಡ್ ಮಾಡಬೇಡಿ

Whatsapp CEO Warning: ನೀವು kooda ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಈ ಸುದ್ದಿಯಲ್ಲಿ ನಾವು ನಿಮಗೆ ಅಪಾಯಕಾರಿ ಆಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ನೀವು ಅಪ್ಪಿತಪ್ಪಿಯೂ ಕೂಡ ನಿಮ್ಮ ಫೋನ್ ನಲ್ಲಿ ಡೌನ್ ಲೋಡ್ ಮಾಡಬಾರದು. ಈ ಬಗ್ಗೆ ವಾಟ್ಸಾಪ್ ಸಿಇಒ ಕೂಡ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.  

Written by - Nitin Tabib | Last Updated : Jul 12, 2022, 05:08 PM IST
  • ಈ ಆಪ್ ಅನ್ನು ಅಪ್ಪಿತಪ್ಪಿಯೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ಲೋಡ್ ಮಾಡ್ಬೇಡಿ
  • ಈ ಕುರಿತು ವಾಟ್ಸ್ ಆಪ್ ಸಿಇಓ ಕೂಡ ಎಚ್ಚರಿಕೆಯನ್ನು ನೀಡಿದ್ದಾರೆ
  • ಯಾವ ಆಪ್ ಅದು ಮತ್ತು ಏಕೆ ಅದನ್ನು ಡೌನ್ಲೋಡ್ ಮಾಡಬಾರದು ತಿಳಿದುಕೊಳ್ಳೋಣ ಬನ್ನಿ
Whatsapp Alert! ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅಪ್ಪಿತಪ್ಪಿಯೂ ಕೂಡ ಈ ಆಪ್ ಡೌನ್ ಲೋಡ್ ಮಾಡಬೇಡಿ title=
Dangerous App

WhatsApp CEO Warns Users against this Android App: ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಬಹುತೇಕರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿವೆ. ನೀವು ಕೂಡ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ನಿಮ್ಮ ಸ್ಮಾರ್ಟ್ ಫೋನ್ ನಲಿ ನೀವು ಎಂದಿಗೂ ಡೌನ್ ಲೋಡ್ ಮಾಡಲೇಬಾರದಂತಹ ಒಂದು ಆಪ್ ಬಗ್ಗೆ ಇಂದು ನಾವು ನಿಮಗೆ ಮಾಹ್ತಿಯನ್ನು ನೀಡಲಿದ್ದೇವೆ. ಏಕೆಂದರೆ, ಈಗಾಗಲೇ ಅನೇಕ ಜನರು ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ ಮತ್ತು ಹಲವರು ಮಾಡುತ್ತಲೂ ಇದ್ದಾರೆ. ಆದರೆ ಇದು ಬಳಕೆದಾರರ ಡೇಟಾ ಕದಿಯುವ ಒಂದು ಆಪ್ ಆಗಿದೆ ಈ ಆಪ್ ಬಗ್ಗೆ ಸ್ವತಃ ವಾಟ್ಸಾಪ್ ಸಿಇಒ ವಿಲ್ ಕ್ಯಾತ್‌ಕಾರ್ಟ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಮರೆತೂ ಕೂಡ ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ
ನಾವು ಯಾವ ಆಪ್ ಕುರಿತು ಇಲ್ಲಿ ಮಾತನಾಡುತ್ತಿದ್ದೇವೆ ಎಂಬುದನ್ನು ತಿಳಿದರೆ, ನೀವೂ ಕೂಡ ಆಶ್ಚರ್ಯಪಡುವಿರಿ. HeyMods ಡೆವಲಪರ್‌ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವ  ಹೇ ವಾಟ್ಸಾಪ್ ಅದರ ಹೆಸರು. WhatsApp ನಲ್ಲಿ ಬಳಸಬಹುದಾದ ಈ ಅಪ್ಲಿಕೇಶನ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳಿವೆ. ಈ ವೈಶಿಷ್ಟ್ಯಗಳ ದುರಾಸೆಯಿಂದ ಬಳಕೆದಾರರು ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಾರೆ ಮತ್ತು ತಮ್ಮ ಪ್ರಮುಖ ಮಾಹಿತಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಚಾಟಿಂಗ್ ಅಪ್ಲಿಕೇಶನ್ ನಕಲಿಯಾಗಿದೆ ಮತ್ತು ನೀವು ಅದನ್ನು ಡೌನ್‌ಲೋಡ್ ಮಾಡಬಾರದು.

ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು
ಹೇ ವಾಟ್ಸಾಪ್ ಒಂದು ಚಾಟಿಂಗ್ ಅಪ್ಲಿಕೇಶನ್ ಆಗಿದ್ದು, ಇದು WhatsApp ನ ನಕಲಿ ಮತ್ತು ಅಪಾಯಕಾರಿ ಆವೃತ್ತಿಯಾಗಿದೆ. ವಾಟ್ಸಾಪ್ ನ ಬಹುತೇಕ ಫೀಚರ್ ಗಳ ಜೊತೆಗೆ ನೈಜ ಆಪ್ ನಲ್ಲಿ ಇಲ್ಲದಂತಹ ಹಲವು ಫೀಚರ್ ಗಳನ್ನು ಇದರಲ್ಲಿ ನೀಡಲಾಗಿರುವುದರಿಂದ ಜನರು ಈ ಆಪ್ ಡೌನ್ ಲೋಡ್ ಮಾಡುತ್ತಿದ್ದಾರೆ. ಕೆಲವು ವೈಶಿಷ್ಟ್ಯಗಳ ದುರಾಸೆಯ ಕಾರಣದಿಂದ ಡೌನ್‌ಲೋಡ್ ಆಗುತ್ತಿರುವ ಈ ಅಪ್ಲಿಕೇಶನ್, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಬರುವುದಿಲ್ಲ.ಈ ಕಾರಣದಿಂದಾಗಿ ಹ್ಯಾಕರ್‌ಗಳು ನಿಮ್ಮ ಚಾಟ್‌ಗಳು ಮತ್ತು ಇತರ ಪ್ರಮುಖ ಡೇಟಾವನ್ನು ಕ್ಷಣಾರ್ಧದಲ್ಲಿ ಕದಿಯುವ ಸಾಧ್ಯತೆ ಇದೆ.

ಇದನ್ನೂ ಓದಿ-Flipkart ಸಿಗುತ್ತಿರುವ ಈ ಕೊಡುಗೆ ಮತ್ತೆ ಸಿಗಲ್ಲ, ಕೇವಲ ರೂ.149ಕ್ಕೆ ಖರೀದಿಸಿ ರಿಯಲ್ ಮೀ ಕಂಪನಿಯ ಈ ಜಬರ್ದಸ್ತ್ ಸ್ಮಾರ್ಟ್ ಫೋನ್

ಈ ಅಪ್ಲಿಕೇಶನ್ ಅನ್ನು Google Play Store ನಲ್ಲಿ ಲಭ್ಯವಾಗಿಲ್ಲ. ಆದರೆ ಅದನ್ನು ಪರಿಶೀಲಿಸದ ಮೂಲಗಳಿಂದ ಡೌನ್‌ಲೋಡ್ ಮಾಡಲಾಗುತ್ತಿದೆ.

ಇದನ್ನೂ ಓದಿ-Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ

ವಾಟ್ಸಾಪ್ ಎಚ್ಚರಿಕೆ ನೀಡಿದೆ
ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹ್ಯಾಕರ್‌ಗಳ ಬಲೆಗೆ ಸಾಕಷ್ಟು ಜನರು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎಂದು ಸ್ವತಃ ವಾಟ್ಸಾಪ್ ಸಿಇಒ ವಿಲ್ ಕ್ಯಾತ್‌ಕಾರ್ಟ್ ಬಳಕೆದಾರರನ್ನು ಎಚ್ಚರಿಸಿದ್ದಾರೆ. ವಾಟ್ಸಾಪ್‌ನ ಸಿಇಒ ಟ್ವಿಟ್ಟರ್‌ನಲ್ಲಿ ವಾಟ್ಸಾಪ್ ಅಂತಹ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಪ್ರಯತ್ನಿಸುವುದನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ, ಆದರೆ ಬಳಕೆದಾರರು ಸಹ ಜಾಗರೂಕರಾಗಿರಬೇಕು ಏಕೆಂದರೆ ಇಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ತುಂಬಾ ಅಪಾಯಕಾರಿ ಸಾಬೀತಾಗಲಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
    

Trending News