Shami Patra Niyama: ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಲ್ಪತ್ರಿಯ ಜೊತೆಗೆ, ಈ ಪತ್ರಿಯನ್ನು ಅರ್ಪಿಸುವುದು ಕೂಡ ಅತ್ಯಂತ ಮಂಗಳಕರ

Shami Offer On Shivling:ಶಮಿ ಗಿಡ ಶಿವನಿಗೆ ಅತ್ಯಂತ ಪ್ರಿಯವಾದ ವೃಕ್ಷಗಳಲ್ಲಿ ಒಂದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ದೇವಾದಿದೇವ ಶಿವನ ಆಶೀರ್ವಾದವನ್ನು ಪಡೆಯಲು ಶಿವಲಿಂಗದ ಮೇಲೆ ಬೆಲ್ಪತ್ರಿಯ ಜೊತೆಗೆ ಶಮಿ ಪತ್ರಿಗಳನ್ನು ಕೂಡ ಅರ್ಪಿಸಬಹುದಾಗಿದೆ. ಏಕೆಂದರೆ ಶಿವನಿಗೆ ಶಮಿ ಪತ್ರಿಯನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.  

Written by - Nitin Tabib | Last Updated : Jul 18, 2022, 04:25 PM IST
  • ಶಮಿ ಗಿಡ ಶಿವನಿಗೆ ಅತ್ಯಂತ ಪ್ರಿಯವಾದ ವೃಕ್ಷಗಳಲ್ಲಿ ಒಂದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
  • ಶ್ರಾವಣ ಮಾಸದಲ್ಲಿ ದೇವಾದಿದೇವ ಶಿವನ ಆಶೀರ್ವಾದವನ್ನು ಪಡೆಯಲು ಶಿವಲಿಂಗದ ಮೇಲೆ ಬೆಲ್ಪತ್ರಿಯ ಜೊತೆಗೆ ಶಮಿ ಪತ್ರಿಗಳನ್ನು ಕೂಡ ಅರ್ಪಿಸಬಹುದಾಗಿದೆ.
  • ಏಕೆಂದರೆ ಶಿವನಿಗೆ ಶಮಿ ಪತ್ರಿಯನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Shami Patra Niyama: ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಲ್ಪತ್ರಿಯ ಜೊತೆಗೆ, ಈ ಪತ್ರಿಯನ್ನು ಅರ್ಪಿಸುವುದು ಕೂಡ ಅತ್ಯಂತ ಮಂಗಳಕರ title=
Shravan Maasa 2022 Shami Patra Rules

Shravan Maasa 2022 Shami Patra Rules: ಧರ್ಮ ಶಾಸ್ತ್ರಗಳ ಪ್ರಕಾರ ಶ್ರಾವಣ ಮಾಸ ಶಿವನಿಗೆ ಅತ್ಯಂತ ಇಷ್ಟವಾದ ತಿಂಗಳು ಎನ್ನಲಾಗುತ್ತದೆ. ಈ ಮಾಸದಲ್ಲಿ ಭಕ್ತರು ಶಿವನನ್ನು ಮೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾರೆ. ಈ ತಿಂಗಳಿನಲ್ಲಿ ಅತ್ಯಂತ ಶೃದ್ಧಾಪೂರ್ವಕವಾಗಿ ಶುದ್ಧ ಅಂತಃ ಕರಣ ಮತ್ತು ಭಕ್ತಿಭಾವದಿಂದ ಮಾಡಿದ ಪೂಜೆಯಿಂದ ಶಿವನು ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎನ್ನಲಾಗಿದೆ. ಶ್ರಾವಣ ಮಾಸದಲ್ಲಿ ಶಿವಲಿಂಗದ ಪೂಜೆಗೆ ವಿಶೇಷ ಮಹತ್ವವಿದೆ. ಶಿವನಿಗೆ ಪ್ರಿಯವಾದ ಧತ್ತೂರಿ, ಎಕ್ಕಿ ಗಿಡದ ಹೂವುಗಳು, ಬಿಲ್ವಪತ್ರೆ, ಶಮಿ ಎಲೆಗಳ ಜೊತೆಗೆ ಶಿವಲಿಂಗಕ್ಕೆ ಅರ್ಪಿಸಿದರೆ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಶಮಿ ಪತ್ರವನ್ನು ಶಿವನಿಗೆ ಸರಿಯಾದ ರೀತಿಯಲ್ಲಿ ಅರ್ಪಿಸಿದರೆ ಅದರ ಫಲ ಹೆಚ್ಚು ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಶಿವನಿಗೆ ಶಮಿ ಪತ್ರವನ್ನು ಅರ್ಪಿಸುವ ಸರಿಯಾದ ನಿಯಮ ಯಾವುದು ತಿಳಿದುಕೊಳ್ಳೋಣ ಬನ್ನಿ. 

ಶಿವನಿಗೆ ಶಮಿ ಪತ್ರವನ್ನು ಈ ರೀತಿ ಅರ್ಪಿಸಿ
ಶ್ರಾವಣ ಮಾಸ ಶಿವನ ಆರಾಧನೆಗೆ ಅತ್ಯಂತ ವಿಶೇಷವಾದ ತಿಂಗಳು. ಈ ಇಡೀ ಮಾಸದಲ್ಲಿ ನೆರವೇರಿಸಲಾಗುವ ಪೂಜೆ ಮತ್ತು ಭಕ್ತಿಯ ಫಲಗಳು ಹಲವು ಪಟ್ಟು ಹೆಚ್ಚಾಗುತ್ತವೆ ಎನ್ನಲಾಗುತ್ತದೆ. ಶ್ರಾವಣ ಮಾಸದ ಯಾವುದೇ ದಿನ ನೀವು ಮಹಾದೇವನಿಗೆ ಶಮಿ ಪತ್ರಿಯನ್ನು ಅರ್ಪಿಸಬಹುದು. ಅದರಲ್ಲಿಯೂ ವಿಶೇಷವಾಗಿ ಸೋಮವಾರದಂದು ಶಿವನಿಗೆ ಶಮಿಪತ್ರೆಯನ್ನು ಅರ್ಪಿಸುವುದು ಅತ್ಯಂತ ಮಂಗಳಕರ ಎಂದು ಭಾವಿಸಲಾಗಿದೆ.

ಶ್ರಾವಣ ಸೋಮವಾರದ ದಿನ ಪ್ರಾತಃಕಾಲದ ಎಲ್ಲಾ ಕರ್ಮಗಳಿಗೆ ಅಂತ್ಯ ಹೇಳಿದ ಬಳಿಕ ಶಿವನ ದೇವಸ್ಥಾನಕ್ಕೆ ಹೋಗಿ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. ಬಳಿಕ ಕಂಚು, ತಾಮ್ರ ಅಥವಾ ಹಳದಿ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ಗಂಗಾಜಲ, ಬಿಳಿ ಚಂದನ, ಅಕ್ಕಿ ಇತ್ಯಾದಿಗಳನ್ನು ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ. ಇದರ ನಂತರ, ಶಿವನನ್ನು ಪ್ರತಿಷ್ಠಾಪಿಸುವಾಗ, ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸಿ. ಇದಾದ ನಂತರ ಶಿವಲಿಂಗದ ಮೇಲೆ ಪ್ರಸಾದದ ಜೊತೆಗೆ ಬಿಲ್ವಪತ್ರೆ, ಬಿಳಿ ಬಟ್ಟೆ, ಜನೇವು, ಅಕ್ಕಿ, ಶಮಿ ಎಲೆಗಳನ್ನು ಅರ್ಪಿಸಿ. ಶಮಿ ಪತ್ರವನ್ನು ಅರ್ಪಿಸುವಾಗ, ಈ ಕೆಳಗೆ ಸೂಚಿಸಲಾಗ ಮಂತ್ರವನ್ನು ಉಚ್ಚರಿಸಿ. 

ಇದನ್ನೂ ಓದಿ-ಹೆತ್ತವರು ಮಕ್ಕಳೆದುರು ಈ ನಾಲ್ಕು ಕೆಲಸಗಳನ್ನು ಮಾಡಬಾರದು .! ಮುಗ್ದ ಮನಸ್ಸಿಗಾಗುವುದು ಆಘಾತ

ಶಮಿ ಪತ್ರವನ್ನು ಅರ್ಪಿಸುವಾಗ ಈ ಮಂತ್ರವನ್ನು ಉಚ್ಚರಿಸಿ
ಅಮಂಗಲಾನಾಂ ಚ ಶಮ್ನೀ ಶಮನೀ ದುಷ್ಕೃತ್ಯ ಚ ।
ದುಸ್ವಪ್ರನಾಶಿನೀಂ ಧನ್ಯಾನ್ ಪ್ರಪದ್ಯೇಹಂ ಶಮೀ ಶುಭಮ್ ।

ಏಕೆ ಶುಭ ಎಂದು ಭಾವಿಸಲಾಗುತ್ತದೆ?
ಶ್ರಾವಣ ಮಾಸದಲ್ಲಿ ಶಿವನಿಗೆ ಶಮಿ ಎಲೆಗಳನ್ನು ಅರ್ಪಿಸುವುದು ಶುಭಕರ ಎಂದು ಪರಿಗಣಿಸಲಾಗಿದೆ. ಶಮೀ ವೃಕ್ಷವನ್ನು ಧರ್ಮಗ್ರಂಥಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಶ್ರೀರಾಮನು ರಾವಣನ ಸಂಹಾರಕ್ಕೆ ಹೋಗಿ ಹಿಂದಿರುಗುವಾಗ, ಅವನು ಶಮೀ ವೃಕ್ಷವನ್ನು ಪೂಜಿಸುತ್ತಾನೆ ಎಂದು ನಂಬಲಾಗಿದೆ. ಇನ್ನೊಂದೆಡೆ ಮಹಾಭಾರತದಲ್ಲಿ ಪಾಂಡವರಿಗೆ ವನವಾಸ ನೀಡಿದಾಗ, ಅವರು ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಬಚ್ಚಿಟ್ಟಿದ್ದರು ಮತ್ತು ಇದೇ ಕಾರಣಕ್ಕಾಗಿ, ಶಮಿ ವೃಕ್ಷಕ್ಕೆ ವಿಶೇಷ ಮಹತ್ವವಿದೆ.

ಇದನ್ನೂ ಓದಿ-Vastu Shastra: ಮನೆಯ ಯಾವ ದಿಕ್ಕಿನಲ್ಲಿ ನವಿಲುಗರಿಯನ್ನು ಸ್ಥಾಪಿಸಿದರೆ ಧನಲಾಭ, ಈ ರೀತಿ ಬಳಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News