Acid Naga Case : ಕಾಮಾಕ್ಷಿಪಾಳ್ಯ ಆ್ಯಸಿಡ್ ಕೇಸ್: ನಾಗನ ವಿರುದ್ಧ ಸಿಕ್ತು ಬಲವಾದ ಸಾಕ್ಷ್ಯ..!

ಇನ್ನೊಂದು ವಾರದಲ್ಲಿ ಚಾರಜ್‌ಶೀಟ್ ಸಲ್ಲಿಕೆಯಾಗಲಿದ್ದು, ಆರೋಪಿಗೆ ಶಿಕ್ಷೆಯಾಗಲು ಬಲವಾದ ಸಾಕ್ಷ್ಯಗಳನ್ನ ಪೊಲೀಸರು ಕಲೆಹಾಕಿದ್ದಾರೆ‌.

Written by - VISHWANATH HARIHARA | Last Updated : Jul 23, 2022, 01:11 PM IST
  • ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣ
  • ಆರೋಪಿ ನಾಗನ ವಿರುದ್ಧ ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆ
  • ಯುವತಿಯ ಮೇಲೆ ನಾಗೇಶ ಎರಚಿದ್ದು ಸೆಲ್ಫೂರಿಕ್ ಆ್ಯಸಿಡ್ ದಾಳಿ
Acid Naga Case : ಕಾಮಾಕ್ಷಿಪಾಳ್ಯ ಆ್ಯಸಿಡ್ ಕೇಸ್: ನಾಗನ ವಿರುದ್ಧ ಸಿಕ್ತು ಬಲವಾದ ಸಾಕ್ಷ್ಯ..! title=

ಬೆಂಗಳೂರು : ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಾಗನ ವಿರುದ್ಧ ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇನ್ನೊಂದು ವಾರದಲ್ಲಿ ಚಾರಜ್‌ಶೀಟ್ ಸಲ್ಲಿಕೆಯಾಗಲಿದ್ದು, ಆರೋಪಿಗೆ ಶಿಕ್ಷೆಯಾಗಲು ಬಲವಾದ ಸಾಕ್ಷ್ಯಗಳನ್ನ ಪೊಲೀಸರು ಕಲೆಹಾಕಿದ್ದಾರೆ‌.

ಏಪ್ರಿಲ್ 28ರಂದು ಯುವತಿ ಮೇಲೆ ನಾಗೇಶ್ ಎಂಬಾತ ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆ್ಯಸಿಡ್ ಹಾಕಿದ್ದ. ಸದ್ಯ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿರುವ ಪೊಲೀಸರಿಗೆ ಎಫ್‌ಎಸ್‌ಎಲ್ ರಿಪೋರ್ಟ್ ಸಹ ದೊರೆತಿದೆ. ಪ್ರಕರಣ ಸಂಬಂಧ ಬರೋಬ್ಬರಿ ಮುನ್ನೂರಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟನ್ನು ಸಿದ್ಧಪಡಿಸಲಾಗಿದ್ದು, ಆರೋಪಿ ಉಳಿದಿದ್ದ ಸ್ಥಳ ತಿರುವಣಮಲೈ ಸೇರಿದಂತೆ ಒಟ್ಟು ಹದಿಮೂರು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿರುವ ಬಗ್ಗೆ ಉಲ್ಲೇಖಿಲಾಗಿದೆ. ಪ್ರೈಮರಿ ಚಾರ್ಜ್‌ಶೀಟ್‌ನಲ್ಲೇ 60 ಸಾಕ್ಷಿಗಳ ಹೇಳಿಕೆ ದಾಖಲಾಗಿದ್ದು, ಹತ್ತಕ್ಕೂ ಹೆಚ್ಚು ಪುಟಗಳಲ್ಲಿ ಆರೋಪಿ ನಾಗನ ತಪ್ಪೊಪ್ಪಿಗೆಯ ಬಗ್ಗೆ ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಲಕ್ಷ ಲಕ್ಷ ದೋಚಿದ ಖದೀಮರು..!

ಯುವತಿಯ ಮೇಲೆ ನಾಗೇಶ ಎರಚಿದ್ದು ಸೆಲ್ಫೂರಿಕ್ ಆ್ಯಸಿಡ್ ಎಂಬುದು ಗೊತ್ತಾಗಿದ್ದು, ಬರೋಬ್ಬರಿ ಒಂಭತ್ತು ಲೀಟರ್ ಆ್ಯಸಿಡನ್ನು ಖರೀದಿ ಮಾಡಿದ್ದ. ಇದರಲ್ಲಿ ಎಂಟು ಲೀಟರ್ ಆ್ಯಸಿಡನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ಅರ್ಧ ಲೀಟರ್ ಯುವತಿಯ ಮೇಲೆ ಚೆಲ್ಲಿದ್ದಾನೆ ಎನ್ನಲಾಗಿದೆ. ಯುವತಿ ಬಟ್ಟೆ, ಕೂದಲು, ಚರ್ಮದ ಮೇಲೆ ಬಿದ್ದಿರುವುದು ಸೆಲ್ಫೂರಿಕ್ ಆ್ಯಸಿಡ್ ಎಂಬುದು ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ದೃಢಪಟ್ಟಿದೆ. 

ಇನ್ನು ಘಟನೆಯ ಸಿಸಿಟಿವಿ, ಫೋನ್ ಕರೆ ಸೇರಿದಂತೆ ಬಲವಾದ ಟೆಕ್ನಿಕಲ್ ಎವಿಡೆನ್ಸ್‌ಗಳನ್ನು  ಪೊಲೀಸರು ಸಂಗ್ರಹಿಸಿದ್ದಾರೆ‌. ಸಂತಸದ ವಿಷಯವೆಂದರೆ ಸಂತ್ರಸ್ತ ಯುವತಿ ಆರೋಗ್ಯದಲ್ಲಿ ಸುಧಾರಣೆ ಹಿನ್ನೆಲೆ ಇನ್ನೆರಡು ದಿನದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಸದ್ಯ ಸಂತ್ತಸ್ತೆ ತಾಯಿಯ ಸಹಾಯದಿಂದ ಓಡಾಡುತ್ತಿದ್ದು, ಸ್ವತಃ ಎದ್ದು ಕೂರುತ್ತಿದ್ದಾರೆ.

ಸಂತ್ರಸ್ತೆಗೆ ಘನ ಆಹಾರ ನೀಡಲಾಗುತ್ತಿದ್ದು, ಸರ್ಜರಿಯಾದ ಭಾಗದಲ್ಲಿ ಸುಧಾರಣೆ ಕಂಡಿದೆ. ಇನ್ನೊಂದು ತಿಂಗಳಲ್ಲಿ ಯುವತಿ ಚಿಕಿತ್ಸೆ ಪಡೆದು ಗುಣಮುಖಳಾಗಿ ಮನೆಗೆ ಮರಳುವ ವಿಶ್ವಾಸವನ್ನು ಕುಟುಂಬಸ್ಥರು ಹೊಂದಿದ್ದಾರೆ.

ಇದನ್ನೂ ಓದಿ : Crime News: ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News